ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮನ ಅರೋಚಕವಾದಲ್ಲಿ, ಲವಣ ವಾರಿ ಪರಿಪಾಕ ಮುಂತಾದ ರಸದ್ರವ್ಯವನೊಲ್ಲದೆಯಿಪ್ಪುದು ವ್ರತವೆ ? ಅಲ್ಲ, ಅದು ಸೌಕರಿಯವಲ್ಲದೆ. ಅದೆಂತೆಂದಡೆ: ಪರದ್ರವ್ಯ ಪರಸತಿ ಹುಸಿ ಕೊಲೆ ಕಳವು ಅತಿಕಾಂಕ್ಷೆಯಂ ಬಿಟ್ಟು, ಬಂದುದ ನಿಂದಂತೆ ಕಂಡು, ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ, ಅರುವತ್ತನಾಲ್ಕು ವ್ರತ, ಅಯಿವತ್ತಾರು ಶೀಲ, ಮೂವತ್ತೆರಡು ನೇಮ ಸಂದಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಮಾಟ ಕೂಟವ ಮಾಡುವನ್ನಬರ ಮನ ನಲಿದು, ತನು ಕರಗಿ ಮಾಡುವ ದ್ರವ್ಯಕ್ಕೆ ಕೇಡಿಲ್ಲದಂತೆ ಮಾಡುತ್ತಿಪ್ಪ ಭಕ್ತನ ಅಂಗವೆ ಎನ್ನ ಹೃದಯಾಲಯ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲ್ಲಿ ತಾನಾಗಿಪ್ಪನು.
--------------
ಶಿವಲೆಂಕ ಮಂಚಣ್ಣ
ಮಡಿಕೆಗೆ ಮುಸುಕು, ತಮಗೆ ಗುಹ್ಯಕ್ಕೆ ದಶಾವಸ್ಥೆ. ಬಾಹ್ಯದಲ್ಲಿ ಶೀಲ, ಅಂತರ್ಯಾಮಿಯಲ್ಲಿ ದುಶ್ಶೀಲ. ಹೊರಗೆ ವ್ರತ, ಒಳಗೆ ಗದಕ. ಮಾಡಿಕೊಂಡ ವಿಧಿಯನೀಸುವುದಕ್ಕೆ ವಾದ್ಯದ ಒತ್ತೆಯ ಹಿಡಿದ ದಾಸಿಯಂತೆ, ಇನ್ನಾರಿಗೆ ಹೇಳುವೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.
--------------
ಶಿವಲೆಂಕ ಮಂಚಣ್ಣ
ಮಹಾರ್ಣವವುರಿದು ಬೇವಲ್ಲಿ, ಕರಗದ ಜಲಕ್ಕೆ ಹೊಡೆಗೆಡೆವುದೆ ? ಮಹಾಪಾತಕಕ್ಕೆ ಒಳಗಾದಂಗ, ಮಾತಿನ ಬಣಬೆಯಲ್ಲಿ ನೀತಿಯಾಗಿ ನುಡಿದಡೆ, ಅಜಾತನ ಶರಣರು ಒಪ್ಪುವರೆ ? ಅದು ನಿಹಿತವಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಇಂತೀ ಕಾಕರನೊಲ್ಲ
--------------
ಶಿವಲೆಂಕ ಮಂಚಣ್ಣ
ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು. ಅವರಂಗವುಳ್ಳನ್ನಕ್ಕ ಅಂಗನೆಯರ ಸಂಗಬೇಕು. ಸಂಗಸುಖಕ್ಕೊಡಲಹನ್ನ ಬರ ಶಿವಲಿಂಗ ಪೂಜೆಯ ಮಾಡಬೇಕು. ಅದು ಅರುವಿನ ಗೊತ್ತು, ಜ್ಞಾನದ ಚಿತ್ತು, ಪರಬ್ರಹ್ಮದ ಕೂಟ, ಶಿವಪೂಜೆಯ ಮಾಟ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಮಧುರ ದಂಡ ಒರಳಿಗೆ ಬಂದು, ಮರಳಿ ಬೆಂದು, ತ್ರಿಗುಣದಲ್ಲಿ ಹೊಂದಿ, ಕಡೆಯಾಣೆಯಾದಂತೆ, ಒಂದನೊಂದು ಕಂಡು ಸಂದನಳಿದು ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಮರೀಚಿಕಾಜಲದಂತೆ ತೋರುತ್ತಿಹ ವಸ್ತು ನಾದಬಿಂದುವಿನಲ್ಲಿ ಒಡಗೂಡುವ ಪರಿಯಿನ್ನೆಂತೊ ? ನಾದ ದೀರ್ಘವಾಗಿ, ಬಿಂದು ವರ್ತುಳವಾಗಿ, ಕಳೆ ಪರಿಪೂರ್ಣವಾಗಿ, ಅವಗವಿಸಲ್ಲದೆ ಉಭಯನಾಮವಡಗದು. ಅಡಗಿದ ಮತ್ತೆ ಈಶಾನ್ಯಮೂರ್ತಿ ಅಮೂರ್ತಿಯಾಯಿತ್ತು, ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ಮೇಲು ಹೇಮದಲ್ಲಿ ಕೀಳುಕೊಡೆ, ಅದು ತನ್ನಯ ಕೀಳು ಕೊಡೆ ಮೇಲುಮಟ್ಟವ ಮರಸಿತ್ತು. ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಲಾಗಿ, ಪ್ರಸಿದ್ಧಪ್ರಸಾದ ಸಿದ್ಧಪ್ರಸಾದವಾಯಿತ್ತು. ಒಡೆದ ಕ್ಷೀರಕ್ಕೆ ಹೆಪ್ಪನಿಕ್ಕಿದಡೆ ದಧಿಯಾಗಬಲ್ಲುದೆ ? ಅರಿಯದವನ ಅರ್ಪಿತ, ಶರಧಿಯ ಹೊಯಿದ ಕರವಾಳಿನಂತಾಯಿತ್ತು. ಇಂತೀ ವಿವರದಲ್ಲಿ ಅರ್ಪಿತವನರಿಯಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುಲಿಂಗವು, ಇಂತೀ ಅರ್ಪಿತವನರಿಯದಲ್ಲದೊಲ್ಲನು.
--------------
ಶಿವಲೆಂಕ ಮಂಚಣ್ಣ
ಮಣ್ಣು ಮೂರು, ಹೆಣ್ಣು ಆರು, ಹೊನ್ನು ಒಂಬತ್ತು , ಇವಾದಿಯಾದ ಸಕಲಪ್ರಪಂಚಿನ ಜವನಿಕೆಯನರಿದು ಹರಿಯಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ