ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನ ಭಾಷೆ ಗುರುಲಿಂಗಜಂಗಮವಲ್ಲ. ತ್ರಿವಿಧ ಕರ್ತೃವಿನ ಭಾಷೆ, ತನ್ನ ಮುಟ್ಟಿ ಪೂಜಿಸುವ ಭಕ್ತನಲ್ಲ. ಇಂತೀ ಉಭಯದ ಭಾಷೆ, ಕರ್ತೃ ಭೃತ್ಯಂಗಲ್ಲ [ವೆ]? ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.
--------------
ಶಿವಲೆಂಕ ಮಂಚಣ್ಣ
ಭಕ್ತನಾಗಿದ್ದಲ್ಲಿ, ಗುರುಲಿಂಗಜಂಗಮ ಪಾದತೀರ್ಥಪ್ರಸಾದ ಪಂಚಾಚಾರ ಶುದ್ಧಕ್ಕೆ ನಿರತನಾಗಿರಬೇಕು. ಗುರುಚರವಾದಲ್ಲಿ, ಅಪರಕ್ಕೆ ದೂರನಾಗದೆ ಇರಬೇಕು. ಈ ಉಭಯ ನಿಧಾನಿಸಿ ನಿಂದಲ್ಲಿ, ಶಿವಲೆಂಕನೊಡೆಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಭಕ್ತ ನಾನೆ ಎಂದು ತನ್ನ ತಾನೆ ನಿಶ್ಚೆ ೈಸುವನ್ನಬರ, ವಿರಕ್ತ ನಾನೆ ಎಂದು ತನ್ನ ತಾನೆ ಬೀಗುವನ್ನಬರ, ಅಂಧಕಸಮೂಹದಲ್ಲಿದ್ದು, ನಗೆಯ ಕೇಳಿ ತಾ ಕಾಣದೆ ನಗುವಂತೆ, ಉಭಯದಿರವ ಮೆಚ್ಚ ಶಿವಲೆಂಕನೊಡೆಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ