ಏ ಪದದಿಂದ ಪ್ರಾರಂಭವಾಗುವ ವಚನಗಳು:
ಏಕಮಯ ವಸ್ತು ತನ್ಮಯ ರೂಪಾದಲ್ಲಿ ,ಪಂಚಭೂತಿಕಂಗಳು ನಾಮರೂಪಾಯಿತ್ತು.ಆ ಪರಬ್ರಹ್ಮ ಪರವಸ್ತುವಾದಲ್ಲಿ, ಪರವಶವಾಯಿತ್ತು ಪಂಚಬ್ರಹ್ಮ.ಆ ಬ್ರಹ್ಮ ಬ್ರಹ್ಮನ ಕುಕ್ಷಿಗೆ ಹೊರಗಾದಲ್ಲಿ, ವಸ್ತು ನಿರ್ಧರವಾಯಿತ್ತು ,ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ.