ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿಲೆ ಕಾಷ*ದಲ್ಲಿ ಪಾವಕ ಜನಿಸುವ ಭೇದದಂತೆ, ಮಾಡುವ ಸತ್ಕ್ರೀ ಭೇದ. ಶಿಲೆಯ ವಹ್ನಿ ತಲೆದೋರಿ ಉಭಯವನುಳುಹಿದಂತೆ, ಗುರು ಚರದ ಯುಕ್ತಿ. ಕಾಷ*ದ ವಹ್ನಿ ತನ್ನಯ ಇರವ ಸುಟ್ಟು, ಹಲವು ಕಡೆಗೆ ಪರಿವಂತೆ, ಆತ್ಮನ ಭೇದ. ಇಂತೀ ನಾನಾ ವರ್ತಕಂಗಳಲ್ಲಿ ಕ್ರೀ ಶುದ್ಧವಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.
--------------
ಶಿವಲೆಂಕ ಮಂಚಣ್ಣ
ಶಿವಭಕ್ತಂಗೆ ಭೃತ್ತಾಚಾರವಳವಟ್ಟಲ್ಲಿ, ಸದಾಚಾರವಿಪ್ಪುದು. ಸದಾಚಾರ ಸನ್ನದ್ಧವಾದಲ್ಲಿ, ಸಮಯೋಚಿತ ಸತ್ಕ್ರಿಯೆಗಳ ಬಲ್ಲ ಸದ್ಭಕ್ತಯೆಲ್ಲಿರ್ದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲಿಪ್ಪನು.
--------------
ಶಿವಲೆಂಕ ಮಂಚಣ್ಣ