ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪಿನಲ್ಲಿ ಉಂಟೆಂದು ಹೋರುವಾಗ, ಅದು ಅಚೇನಮೂರ್ತಿ. ನಿರೂಪಿನಲ್ಲಿ ಕಂಡೆನೆಂದು ಹೇಳುವಾಗ, ಅದು ನಾಮಕ್ಕೆ ಬಾರದ ಬಯಲು. ಉಭಯದಲ್ಲಿ ವಿಚಾರಿಸಿ ಕಾಬುದೊಂದೆ ತನ್ನಯ ದೃಢಚಿತ್ತ. ಆ ಚಿತ್ತ ಒಪ್ಪಿನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ನಿಶ್ಚಯವಾಗಿರ್ಪನು.
--------------
ಶಿವಲೆಂಕ ಮಂಚಣ್ಣ
ರೂಪು ರುಚಿ ಚಿತ್ತ, ಈ ಮೂರು ಏಕವಾಗಿ ನಿಂದಲ್ಲಿ, ಲಿಂಗಾರ್ಪಿತ. ರೂಪ ಭಾವಿಸದೆ, ರುಚಿಯ ಭಿನ್ನವನರಿಯದೆ, ಚಿತ್ತದ ಗೊತ್ತ ಮುಟ್ಟದೆ, ಅದೆತ್ತಣ ಅರ್ಪಿತ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ?
--------------
ಶಿವಲೆಂಕ ಮಂಚಣ್ಣ
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು, ಗಂಧವನರಿವುದಕ್ಕೆ ನಾಸಿಕವಾಗಿ ಬಂದು, ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು, ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು, ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು, ಇಂತೀ ಘಟದ ಮಧ್ಯದಲ್ಲಿ ನಿಂದು ಪಂಚವಕ್ತ್ರನಾದೆಯಲ್ಲಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ