ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ. ಹೊರಗೆ ಸ್ವಯಂಪಾಕ, ಒಳಗೆ ಅಧರಪಾಕ. ಹೊರಗೆ ಭವಿ ನಿರಸನ, ಒಳಗೆ ಭವಿಸಂಗ ಕೂಟ. ಇಂತಿವೆಲ್ಲವು, ಆಡುವ ವಿಧಾಂತ, ನೇಮವ ಹಿಡಿದಂತಾಯಿತ್ತು. ಇಂತೀ ಗುಣವನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಹಲವಾಡುವಂತೆ ಕೆಲೆದಾಡಲಿಲ್ಲ. ಕಂಡವರ ಕಂಡು, ಕೈಕೊಂಡು, ಅವರು ನಿಂದನಿಂದ ವ್ರತಕ್ಕೆ ತಾ ನಿಂದೆಹೆನೆಂದು ಕೊಂಡಾಡಲಿಲ್ಲ. ಕೂಲಿಗೆ ಹಾವ ಕಚ್ಚಿಸಿಕೊಂಡಡೆ, ಆದಾರ ಹರಣವಳಿವುದು ? ತನು ಶುದ್ಧತೆಯಿಲ್ಲದೆ, ಮನ ಆಚಾರದ ಅನುವನರಿಯದೆ, ನಡೆವರ ಬೆಂಬಳಿಯಲ್ಲಿ ಗುಡಿಗಟ್ಟಿ ಹರಿದಾಡುವ ಸುರಿಗುಡಿಗಳನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ ? ಮೊದಲು ತ್ರಿವಿಧವ ಎನಗೆಂದು ಕೊಟ್ಟು ಮತ್ತೆ ; ನೀ ಬೇಡಿದಡೆ ನಿನಗಿತ್ತ ಮತ್ತೆ , ಎನ್ನಡಿಯ ನೋಡುವ ಬಿಡುಮುಡಿ ಯಾವುದು ? ನಿನಗೆ ಶಿವಲೆಂಕ ಹಾಕಿದ ಮುಂಡಿಗೆಯ ನೀನೆತ್ತಲಮ್ಮದೆ, ಎನ್ನ ಕೈಯೊಳಗಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ