ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಷಡುದರ್ಶನಗತಿಯ ಮರೆದೊಮ್ಮೆ ಕೇಳನಯ್ಯಾ. ಯೋಗಮಾರ್ಗಿಗಳ ನಿರೀಕ್ಷಣೆಯ ಮಾಡುನಯ್ಯಾ. ವೇದಾಂತಿಗಳ ಕೂಡೆ ಮಾತನಾಡನಯ್ಯಾ. ಸಿದ್ಧಾಂತಿಗಳ ಕ್ರೀಯ ಸೋಂಕನಯ್ಯಾ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಕಲೇಂದ್ರಿಯನಳಿದಿರ್ದನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಷಡಾಧಾರದಲ್ಲಿ ಅಡಿಗದ್ದಿ ಹೋದವರ ಕಂಡೆ. ತತ್ತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋದವರ ಕಂಡೆ. ಮಾತಿನ ಮಾಲೆಯನಾಡಿ ವಸ್ತುವನರಿಯದೆ ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವ ಮಾಡಿಹೆನೆಂದು ಘಟಕೆಟ್ಟು ನಷ್ಟವಾದವರ ಕಂಡೆ. ಇಂತಿದನರಿದು ಕರ್ಮಯೋಗವ ಮಾಡದೆ ಮರ್ಮಜ್ಞನಾಗಿ ಸರ್ವಗುಣಸಂಪನ್ನನಾಗಿ ನಿಜವನರಿದಾತಂಗೆ ತನಗೇನು ಅನ್ಯ್ಕಭಿನ್ನವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಷಡುಸ್ಥಳ ಸಮನಿಸದಯ್ಯಾ ಎಲ್ಲರಿಗೆ. ಷಡುವ್ರತ ಸಮನಿಸದಯ್ಯಾ ಎಲ್ಲರಿಗೆ. ಅರಿದರಿದು ಗುರುಭಕ್ತಿ, ಅರಿದರಿದು ಲಿಂಗಭಕ್ತಿ ಅರಿದರಿದು ಜಂಗಮಭಕ್ತಿ. ಅರಿದಯ್ಯಾ, ಸುಲಭವೆ ಎಲ್ಲರಿಗೆ? ಅವ್ಯಯ ಕರುಣ ಅಳವಟ್ಟವರಿಗಲ್ಲದೆ ಗುರು-ಚರ-ಇಷ್ಟತ್ರಯ ಅಳವಡದು. ವ್ರತವಾರರ್ಲ ನಿಪುಣತೆಯಯ್ಯಾ. ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ನವವಿಧಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಷಡಕ್ಷರವೆಂಬ ಮಂತ್ರವ ಜಪಿಸಿ, ಷಡ್ವಿಧಂಗವ ಪೂಜಿಸದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಬೀಜಾಕ್ಷರತ್ರಯಂಗಳನೋ ಷಡಕ್ಷರಂಗಳ ಸಾಧಿಸಿ, ಷಣ್ಮುಖಶಿವನಾಗದವ ನಿಮ್ಮ ಶರಣನೆ ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಷಡುವರ್ಣ ದಶವಾಯು ಚತುಷ್ಟಯಂಗಳು ಪಂಚೇಂದ್ರಿಯ ಅಷ್ಟಮದಂಗಳೆಂದು, ಷೋಡಶಕಳೆಗಳೆಂದು, ತ್ರಿವಿಧ ಶಕ್ತಿಯೆಂದು, ತ್ರಿವಿಧ ಆತ್ಮನೆಂದು, ತ್ರಿವಿಧ, ಭೂತಿಕವೆಂದು, ಪಂಚವಿಂಶತಿತತ್ವಂಗಳೆಂದು, ಪಿಂಡಪಿಂಡಭಾವವೆಂದು, ಜ್ಞಾನಜ್ಞಾನ ಸಂಬಂಧವೆಂದು ಇಂತೀ ಭೇದಂಗಳ ಸಂಕಲ್ಪಿಸಿ ನುಡಿವುದು ಅದೇನು ಹೇಳಾ. ಅದು ಅರಿವಿನ ಮರವೆಯೋ ? ಮರೆದು ಅರಿದ ಎಚ್ಚರಿಕೆಯೋ ? ಇಂತೀ ಭೇದವ ತೆರೆದು ಕಂಡೆನೆಂಬ ಸೂತಕವ ಮರೆದಲ್ಲಿ, ಆ ಗುಣ ಎಂತೆಯಿದ್ದಿತ್ತು ಅಂತೆ ವಸ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಷಡುಚಕ್ರವಳಯದೊಳಗೆ ನಾನಾಡುವೆ ಬಹುರೂಪ. ಭ್ರೂಮಧ್ಯಮಂಡಲ ಹೃದಯಕಮಲ ಮಧ್ಯದ ಅಬ್ಜಸ್ವರದ ಮಣಿಪೂರಕದ ಮೇಲೆ ನಾನಾಡುವೆ ಬಹುರೂಪ. ಉರಿಯುಂಡ ಕರ್ಪುರದಂತೆ ನಾನಾಡುವೆ ಬಹುರೂಪ. ಬಯಲ ಬೆರಸಿದ ಮರೀಚಿಯಂತೆ ನಾನಾಡುವೆ ಬಹುರೂಪ. ರೇಕಣ್ಣಪ್ರಿಯ ನಾಗಿನಾಥಾಬಸವಣ್ಣನಿಂದ ಬದುಕಿದೆನು.
--------------
ಬಹುರೂಪಿ ಚೌಡಯ್ಯ
ಷಡುಸಮ್ಮಾರ್ಜನೆಯ ಮಾಡೆನೆ? ರಂಗವಾಲಿಯನಿಕ್ಕೆನೆ? ಹೂ ಅಗ್ಛವಣಿಯ ತಾರೆನೆ? ಪೂಜಾ ರಚನೆಯ ಮಾಡೆನೆ? ಅಷ್ಟವಿಧಾರ್ಚನೆಯ ಮಾಡೆನೆ? ಮಾಡುವವರಿಗೆ ನೀಡಿ ಕೊಡೆನೆ? ವೀಣೆಯ ಬಾರಿಸಿ, ಸಕಳೇಶ್ವರಂಗೊಂದು ಗೀತವ ಪಾಡೆನೆ? ಇಂಥಾ ಪರಿಯಲಿ ಸುಖಿಮಾಡಿ ಸಲಹುವ, ಇಂತಪ್ಪಅಳುದರೊಳರೆ?
--------------
ಸಕಳೇಶ ಮಾದರಸ
ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀಶುದ್ಧೆತೆಯಿಲ್ಲ. ತ್ರಿವಿಧ ಸ್ಥಲದಲ್ಲಿ ಕಂಡೆಹೆನೆಂದಡೆ ಭಾವಶುದ್ಧವಿಲ್ಲ. ಇದು ಮೀರಿ ಬೇರೊಂದನರಿದೆಹೆನೆಂದಡೆ ಆರರಿವಿಂಗೆ ಕುರುಹಿಲ್ಲ. ಈ ತೆರನನರಿದಡೆ ಅರಿವು ಕುರುಹು ಏಕವಾಯಿತ್ತು ಕಾಲಾಂತಕ ಭೀಮೇಶ್ವರಲಿಂಗವನರಿಯಲಾಗಿ.
--------------
ಡಕ್ಕೆಯ ಬೊಮ್ಮಣ್ಣ
ಷಡ್ವಿಧಲಿಂಗಾಂಗ ಸಕೀಲವನರಿಯದ ಜಡಜೀವಿಗೆ ದಶವಿಧಪಾದೋದಕ ಏಕಾದಶಪ್ರಸಾದದ ಸಕೀಲಸಂಬಂಧವ ಹೇಳುವನೊಬ್ಬ, ಪ್ರಸಾದದ್ರೋಹಿ ನೋಡಾ, ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನದೇವಯ್ಯ.
--------------
ಮರುಳಶಂಕರದೇವ
ಷಷಿ*ಮಾಸಕ್ಕೆ ಕಂಧರ ಉದರ ಪುಟ್ಟುವುದು. ಸಪ್ತಮಾಸಕ್ಕೆ ಗುಹ್ಯ ಪಾದ ಪುಟ್ಟುವುದು. ಅಷ್ಟಮಾಸಕ್ಕೆ ಸರ್ವಾಂಗಸಂಧಿ ಪುಟ್ಟುವದು ಸಂಪೂರ್ಣವಹುದು. ಇದಕ್ಕೆ ಶ್ರೀಮಹಾದೇವ ಉವಾಚ : ``ಕಂಧರಾಜೋದರಂ ಷಷೆ*ೀ ಗುಹ್ಯ ಪಾದಂ ಚ ಸಪ್ತಮೇ | ಸರ್ವಾಂಗ ಸಂಧಿ ಸಂಪೂರ್ಣೇ ಮಾಸೇ ಸ್ಯಾದಷ್ಟಭಿಃ ಪ್ರಿಯೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ, ಕೇಳಿರಣ್ಣಾ : ಒಬ್ಬ ರಾಯನ ಕೆಳಗೆ ಆರು ಬಲ ಉಂಟಾಗಿಪ್ಪಂತೆ ಆ ಪರಶಿವತತ್ವಕ್ಕೆ ಪ್ರಾಣಪದವಪ್ಪರು ಭಕ್ತರುಂಟು. ಆ ಭಕ್ತರಿಗೆ ಗುರುಲಿಂಗಜಂಗಮದ ದಾಸೋಹ. ಪಾದೋದಕ ಪ್ರಸಾದ, ಪಂಚ ಸದಾಚಾರ. ಇಂತಿವೆಲ್ಲವೂ ಪ್ರಾಣಪದವಾಗಿಪ್ಪವು. ಇವರೆಲ್ಲರಿಗೆಯೂ ಶರಣಸತಿ ಲಿಂಗಪತಿಗಳೆಂಬವೆ ಪ್ರಾಣಪದವಾಗಿ, ರೇಕಣ್ಣಪ್ರಿಯ ನಾಗಿನಾಥನಲ್ಲಿ ನಿಂದರು.
--------------
ಬಹುರೂಪಿ ಚೌಡಯ್ಯ
ಷಡಾಧಾರಚಕ್ರದ ಗಡಣೆಯನರಿದು, ಷಡಕ್ಷರವ ಏಕಾಕ್ಷರವ ಮಾಡಿ, ಒದಗಿಹ ಲಿಂಗ ಒಂದೆಂಬುದನರಿದಡೆ, ಮೃಡಭಕ್ತರೊಳಧಿಕ ಬಸವಪ್ರಿಯ ಕೂಡಲಚೆನ್ನಸಂಗಮದೇವನ ಶರಣ.
--------------
ಸಂಗಮೇಶ್ವರದ ಅಪ್ಪಣ್ಣ
ಷಡಧ್ವಾಶ್ರಯವಾವ ಪರಬಿಂದುಸ್ಥಾನದ ಮೇಲಿರ್ದ ಷಡುಸ್ಥಲಮೂಲವಾದ ಪರಶಿವತತ್ವದೊಳು, ಷಡುಸ್ಥಲಲಿಂಗಾಂಗ ಜನಿಸಿ ತೋರಿತೆಂದಡೆ ಅಂಗ ಲಿಂಗಕ್ಕೆ ಭೇದವುಂಟೆ? ಇಲ್ಲದಾಗಿ. ಬೀಜಾಂಕುರದಂತೆ ಒಂದ ಬಿಟ್ಟು ಒಂದು ತೋರದು. ಇಂತಪ್ಪ ಲಿಂಗಾಂಗ ಸಂಬಂಧ ಸಕೀಲವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣ ಬಲ್ಲನು.
--------------
ಸ್ವತಂತ್ರ ಸಿದ್ಧಲಿಂಗ
ಷಡ್ಭಾವಲಿಂಗ ಷಡುವರ್ಣಭೇದ, ಷಡುಸ್ಥಲಕ್ರೀ, ಷಟ್ಕರ್ಮಯುಕ್ತಿ, ಇಂತೀ ಸ್ಥಲವಿವರಂಗಳೆಲ್ಲವೂ ಪರವಸ್ತುವಿನ ಮೂಲಾಂಕುರ ಲಿಂಗಮೂರ್ತಿ. ಆ ವಸ್ತು ತ್ರಿಗುಣಾತ್ಮಕವಾಗಿ ತ್ರಿವಿಧಲಿಂಗ ಸ್ವರೂಪದಿಂದ, ಉಭಯವ ಕೂಡಿಕೊಂಡು ಉಮಾಮಹೇಶ್ವರತ್ವದಿಂದ, ಭಕ್ತಿ ಕಾರಣನಾಗಿ ತತ್ವಂಗಳ ಗರ್ಭೀಕರಿಸಿಕೊಂಡು ಗೊತ್ತನಿಟ್ಟು ಸ್ಥಲಂಗಳ ವ್ಯಕ್ತೀಕರಿಸಿ ಆರಾರ ವಿಶ್ವಾಸಂಗಳಲ್ಲಿ ಮನೋಮೂರ್ತಿಯಾಗಿ ಗುರುವಿಂಗೆ ಇಹಪರವೆಂಬ ಉಭಯವನರಿಪಿ, ಲಿಂಗಕ್ಕೆ ಕಳಾಸ್ವರೂಪವೆಂಬ ಕಳೆಯನಿಂಬಿಟ್ಟು, ಜಂಗಮಕ್ಕೆ ಪರಮ ನಿರ್ವಾಣವೆಂಬ ಪರಮಪದಮಂ ಲಕ್ಷಿಸಿ, ಸ್ಥಲಕ್ಕೆ ಸ್ಥಲಜ್ಞನಾಗಿ, ನಿಸ್ಥಲಕ್ಕೆ ಪರಿಪೂರ್ಣನಾಗಿ, ಇಂತೀ ಇದಿರೆಡೆಯಿಲ್ಲದ ವಸ್ತು ನೀನಲ್ಲಾ. ಶಂಭುವಿನಿಂದಿತ್ತ ಸ್ವಯಂಭುವನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 90 ||
--------------
ದಾಸೋಹದ ಸಂಗಣ್ಣ
ಷಡುದರುಶನ ಜ್ಞಾನವಲ್ಲದೆ ನಮತ್ತೆ ಇಲ್ಲೆಂಬ ಜ್ಞಾನಿಗಳೆಲ್ಲರೂ ಚಾಂಡಾಲಿಗಳು, ಬ್ರಹ್ಮಚಾರಿಗಳೆಲ್ಲರೂ ಉದ್ದೇಶಿಗಳು, ಶಿವಯೋಗಿಗಳೆಲ್ಲರು ಅಂಧಕರು, ಇಷ್ಟಲಿಂಗಸಂಬಂಧಿಕರೆಲ್ಲರೂ ಅವಿಚಾರಿಗಳು. ಅವರಿವರ ಪರಿಯಲ್ಲ ಗುಹೇಶ್ವರಾ, ನಿಮ್ಮ ಶರಣರ ಪರಿ ಬೇರೆ !
--------------
ಅಲ್ಲಮಪ್ರಭುದೇವರು

ಇನ್ನಷ್ಟು ...
-->