ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆಚಾರವ ನುಡಿವೆ, ಅನಾಚಾರವ ನಡೆವೆ. ನಮಗೆ ನಿಮಗೆ ಪ್ರಸಾದಸ್ವಾಯತ ನೋಡಾ. ನಾನು ಭಕ್ತನೆಂಬ ನುಡಿಗೆ, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ
ಆರುವನೊಲ್ಲೆನೆಂದು ಅರಣ್ಯವ ಹೊಗುವದು, ಕಾರ್ಯವಲ್ಲ, ದುರುಳತನ. ಊರೊಳಗಿದ್ದಡೆ ನರರ ಹಂಗು. ಅರಣ್ಯದಲ್ಲಿದ್ದಡೆ ತರುಗಳ ಹಂಗು. ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ ಶರಣನೆ ಜಾಣ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಆಶೆಯಿಂದ ಬಿಟ್ಟು ಕಿರಿಯರಿಲ್ಲ, ನಿರಾಶೆಯಿಂದ ಬಿಟ್ಟು ಹಿರಿಯರಿಲ್ಲ. ದಯದಿಂದ ಬಿಟ್ಟು ಧರ್ಮವಿಲ್ಲ, ವಿಚಾರದಿಂದ ಬಿಟ್ಟು ಸಹಾಯಿಗಳಿಲ್ಲ. ಸಚರಾಚರಕ್ಕೆ ಸಕಳೇಶ್ವರನಿಂದ ಬಿಟ್ಟು ದೈವವಿಲ್ಲ.
--------------
ಸಕಳೇಶ ಮಾದರಸ
ಆಟಮಟವೆ ಆಧಾರ, ಕಪಟವೆ ಸದಾಚಾರ, ಕುಟಿಲವೆ ಮಹಾಘನವಾಯಿತ್ತು ಕೆಲಬರಿಗೆ. ಹುಸಿಯ ಮಸಕವೆ ವರ್ತಕವಾಯಿತ್ತು ಕೆಲಬರಿಗೆ. ಯಂತ್ರ ತಂತ್ರ ದ್ರವ್ಯ ಬೆವಹಾರವಾಯಿತ್ತು ಕೆಲಬರಿಗೆ. ಸಟೆಯ ಸಾಗರದೊಳಗೆ ತೇಂಕಾಡುತ್ತಿದ್ದರು ಕೆಲಬರು. ಸಕಳೇಶ್ವರದೇವರ ನೆರೆನಂಬಲರಿಯದವರೆಲ್ಲರು.
--------------
ಸಕಳೇಶ ಮಾದರಸ