ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಗದಗಲದ ಕಲ್ಲು ನೆಲಕ್ಕೆ ಬಿದ್ದಡೆ, ಕೆಲಕ್ಕೆ ಸಾರುವನೆಗ್ಗ. ನಗುತಲು ತಲ್ಲಣಿಸದೆ ಶಿವಶರಣನುತ್ತಿಹುದು. ನಗುತಲು ತಲ್ಲಣಿಸದೆ ಹರಶರಣೆನುತ್ತಿಹುದು. ಸಕಳೇಶ್ವರದೇವರು ವಿಮುಖವಾದಡೆ, ನೆನಹೆಂಬಲಗಿನಲ್ಲಿ ಕೈ ಮಾಡುತ್ತಿಹುದು.
--------------
ಸಕಳೇಶ ಮಾದರಸ
ಜ್ಯೋತಿ ಸೋಂಕಿದ ಬತ್ತಿಯೆಲ್ಲ ಜ್ಯೋತಿಯಪ್ಪವಯ್ಯಾ. ಸಾಗರವ ಮುಟ್ಟಿದ ನದಿಗಳೆಲ್ಲ ಸಾಗರವಪ್ಪವಯ್ಯಾ. ಪ್ರಸಾದವ ಮುಟ್ಟಿದ ಪದಾರ್ಥಂಗಳೆಲ್ಲ ಪ್ರಸಾದವಪ್ಪವಯ್ಯಾ. ಲಿಂಗವ ಮುಟ್ಟಿದ ಅಂಗವೆಲ್ಲ ಲಿಂಗಾಂಗವಪ್ಪವಯ್ಯಾ. ಸಕಳೇಶ್ವರದೇವಯ್ಯಾ, ನಿಮ್ಮ ಮುಟ್ಟಿದವರೆಲ್ಲ ನಿಮ್ಮಂತೆ ಅಪ್ಪರಯ್ಯಾ.
--------------
ಸಕಳೇಶ ಮಾದರಸ
ಜನಮೆಚ್ಚೆ ಶುದ್ಧನಲ್ಲದೆ, ಮನಮೆಚ್ಚೆ ಶುದನಲ್ಲವಯ್ಯಾ ನುಡಿಯಲ್ಲಿ ಜಾಣನಲ್ಲದೆ, ನಡೆಯಲ್ಲಿ ಜಾಣನಲ್ಲವಯ್ಯಾ. ವೇಷದಲ್ಲಿ ಅಧಿಕನಲ್ಲದೆ, ಭಾಷೆಯಲ್ಲಿ ಅಧಿಕನಲ್ಲವಯ್ಯಾ. ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ, ಧನ ದೊರಕಿ ನಿಸ್ಪೃಹನಲ್ಲವಯ್ಯಾ. ಏಕಾಂತದ್ರೋಹಿ, ಗುಪ್ತಪಾತಕ, ಯುಕ್ತಿಶೂನ್ಯಂಗೆ ಸಕಳೇಶ್ವರದೇವ ಒಲಿ ಒಲಿಯೆಂದೆಡೆ, ಎಂತೊಲಿವನಯ್ಯಾ?
--------------
ಸಕಳೇಶ ಮಾದರಸ