ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೆಳೆಯ ಮೇಲೆ ಕಲ್ಲನಿಕ್ಕಿದಡೆ, ಮೆಳೆ ಭಕ್ತನಾಗಬಲ್ಲುದೆ ? ಮೇಹನಿಕ್ಕಿ ಮೆಯ್ಯನೊರಸಿದಡೆ, ಪಶುಗಳೆಲ್ಲ ಮೆಚ್ಚುವವು. ಅನ್ನವನಿಕ್ಕೆ ಹಿರಣ್ಯವ ಕೊಟ್ಟಡೆ, ಜಗವೆಲ್ಲ ಹೊಗಳುವುದು. ಒಳಗನರಿದು, ಹೊರಗೆ ಮರೆದವರ ಎನಗೆ ತೋರಿಸಾ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಮನ ನಿಮ್ಮ ಬೆರಸಿದಡೆ ಬಿನದಕ್ಕೆ ಹೇಳುವನಲ್ಲ. ಅನುಪಮಭಕ್ತಿ ಸುಖಸಾರಾಯ ಸಮರ್ಥವಾಗಿ, ತನುವಪ್ಪಂತೆ ಇಪ್ಪ ನೋಡಾ. ಮನುಜರ ಕಂಗಳಿಗೆ ಜ್ಞಾನಮೂರ್ತಿ ಜ್ಯೋತಿಯಂತಿಪ್ಪ ಮಹಂತ ಸಕಳೇಶ್ವರದೇವನ ನಿಲವು.
--------------
ಸಕಳೇಶ ಮಾದರಸ
ಮೆಕ್ಕೆ ಮಿನಿಕೆ ಮೊದಲಾಗಿ ಅವು ಪಕ್ವಕ್ಕೆ ಬಂದಡೆ, ವಿಷ ಬಿಡುವುದೆ ? ಸೋರೆ ವಾರಿಧಿ ಫಣಿ ಅವು ಹರೆಯ ಹಿರಿದಾದಡೆ, ಮನದ ವಿಷ ಬಿಡದು. ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಮನುಜಂಗೆ, ನರೆ ಹಿರಿದಾದಡೇನು, ಮನದ ಅವಗುಣ ಬಿಡದು.
--------------
ಸಕಳೇಶ ಮಾದರಸ
ಮೊಲೆ ಮುಡಿ ಮುದ್ದು ಮುಖದ ಅಸಿಯ ನಡುವಿನವಳ ಕಂಡಡೆ, ಬ್ರಹ್ಮಚಾರಿಯಾದಡೇನು, ಮನದಿ ಅಳುಪದಿಪ್ಪನೆ ? ತನುವಿನ ಮೇಲೆ ಬ್ರಹ್ಮಚಾರಿತ್ರವಳವಟ್ಟಡೇನು ? ಮನದ ಮೇಲೆ ಬ್ರಹ್ಮಚಾರಿತ್ರವಳವಡದನ್ನಕ್ಕ ! ಸಕಲೇಶ್ವರದೇವ, ನೀ ಅರ್ಧನಾರಿಯಲ್ಲವೆ ?
--------------
ಸಕಳೇಶ ಮಾದರಸ
ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ ? ಧರೆಯ ಮೇಲಿಪ್ಪರೆಲ್ಲ ಶರಣರಪ್ಪರೆ ? ಪರುಷವ ಮುಟ್ಟದೆ ಪಾಷಾಣವ ಮುಟ್ಟಿದ ಕಬ್ಬುನ ಹೇಮವಹುದೆ ? ಅಷ್ಟವಿಧಾರ್ಚನೆ ಶೋಡಷೋಪಚಾರವ ಮಾಡಿ, ಭಾವ ಮುಟ್ಟದಿರ್ದಡೆ ವಾಯ ಕಾಣಿ ಭೋ. ರಜವ ತೂರಿ ಚಿನ್ನವನರಸುವಂತೆ, ನಿಮ್ಮನರಿಯದೆ, ಅಂಜನವನೆಚ್ಚಿದ ಕಣ್ಣಿಗೆ ತೋರೂದೆ ಕಡವರ ? ಜಂಗಮವ ನಂಬಿದ ಮಹಂತಂಗೆ ತೋರದಿಪ್ಪನೆ ತನ್ನ ? ಎಲ್ಲಾ ದೈವವ ಪೂಜಿಸಿ, ಬರಿದಾದೆಲವದ ಫಲದಂತೆ, ಸಕಳೇಶ್ವರನ ಸಕೀಲವನರಿಯದವರು ಇಲ್ಲಿಂದತ್ತಲೆ.
--------------
ಸಕಳೇಶ ಮಾದರಸ
ಮನಮನವೇಕಾರ್ಥವಾಗದವರಲ್ಲಿ, ತುನುಗುಣ ನಾಸ್ತಿಯಾಗದವರಲ್ಲಿ. ಶೀಲಕ್ಕೆ ಶೀಲ ಸಮಾನವಾಗದವರಲ್ಲಿ, ಬುದ್ಧಿಗೆ ಬುದ್ಧಿ ಕೂಟಸ್ಥವಾಗದವರಲ್ಲಿ. ಭಾವಕ್ಕೆ ಭಾವ ತಾರ್ಕಣೆಯಾಗದವರಲ್ಲಿ, ಅವರೊಡನೆ ಕುಳ್ಳಿರಲಾಗದು. ಗಡಣದಲ್ಲಿ ಮಾತಾಡಲಾಗದು, `ಸಂಸರ್ಗಜಾ ದೋಷಗುಣಾ ಭವಂತಿ' ಎಂದುದಾಗಿ, ಮಹಂತ ಸಕಳೇಶ್ವರದೇವಾ, ನಿಮ್ಮ ಸಾತ್ವಿಕಸದ್ಭಕ್ತಿಯನರಿಯದವರ ಸಂಗದಿಂದ ಕೈಲಾಸಕ್ಕೆ ದೂರವಾಗಿಪ್ಪರು.
--------------
ಸಕಳೇಶ ಮಾದರಸ
ಮೃತ್ತಿಕೆಯೊಂದರಲಾದ ಭಾಂಡದಂತೆ, ಚಿನ್ನವೊಂದರಲಾದ ಭೂಷಣದಂತೆ, ಉದಕವೊಂದರಲಾದ ವಾರಿಕಲ್ಲಿನಂತೆ, ಬ್ರಹ್ಮದಿಂದಲಾದ ಜಗವು, ಭಿನ್ನವೆಲ್ಲಿಯದು ಸಕಳೇಶ್ವರಾ ?
--------------
ಸಕಳೇಶ ಮಾದರಸ
ಮಾಡುವ ಭಕ್ತಂಗೆಯೂ ಕೊಡುವ ದೇವಂಗೆಯೂ ಎಂದೆಂದಿಗೂ ಕೇಡಿಲ್ಲ. ಮಾಡಿ ಭೋ, ಮಾಡಿ ಭೋ. ಎನಗೆ ಲೇಸಾಯಿತ್ತು , ಹೋಯಿತ್ತೆಂಬ ಚಿಂತೆ ಬೇಡ, ಇದಿತ್ತೆಂಬ ಸಂತೋಷ ಬೇಡ, ಸಕಳೇಶ್ವರದೇವನವರನರಿದು ಸಲಹುವನಾಗಿ.
--------------
ಸಕಳೇಶ ಮಾದರಸ
ಮುಟ್ಟಿದಡೆ ತಾನು ಚಿಟ್ಟೆಂಬುದನಲ್ಲ , ನಿಷೆ*ಯ ಪಡದಿದ್ದಡೆ ಸಾಕೈಸ. ಆಗಮನರಿಯದೆ ಆಚಾರವ ಬೆರಸದೆ, ಪೂಜೆಯ ಕೈಕೊಂಬುವನಲ್ಲ. ಸಕಳೇಶ್ವರದೇವ, ತಾನೊಲಿದವರನಲ್ಲದೆ, ಒಲ್ಲದವರ ಮೆಚ್ಚುನಯ್ಯಾ.
--------------
ಸಕಳೇಶ ಮಾದರಸ