ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗರ ಹೊಡೆದಂತೆ ಬೆರತುಕೊಂಡಿಪ್ಪರು. ಮರನೇರಿ ಬಿದ್ದಂತೆ ಹಮ್ಮದಂಬೋದರು. ಉರಗನ ವಿಷವಾವರಿಸಿದಂತೆ, ನಾಲಗೆ ಹೊರಳದು, ಕಣ್ಗಾಣರು. ನಿಮ್ಮ ಕರುಣವೆ ಕರ ಚೆಲುವು, ಸಕಳೇಶ್ವರಯ್ಯಾ. ಸಿರಿ ಸೋಂಕಿದವನ ಪರಿ ಬೇರೆ ತಂದೆ.
--------------
ಸಕಳೇಶ ಮಾದರಸ
ಗುರುಪ್ರಸಾದವ ಕೊಂಬರೆ, ನಾಚುವದು ಮನ. ಲಿಂಗಪ್ರಸದಾವ ಕೊಂಬರೆ, ನಾಚುವದು ಮನ. ಜಂಗಮಪ್ರಸಾದವ ಕೊಂಬರೆ, ನಾಚುವದು ಮನ. ಸಮಯಪ್ರಸಾದವ ಕೊಂಬರೆ, ನಾಚುವದು ಮನ. ಸೂಳೆಯ ಬೊಜಗನ ಎಂಜಲ ತಿಂಬರೆ, ನಾಚದು ಮನ. ಮಹಂತ ಸಕಳೇಶ್ವರಯ್ಯನು ಮೂಗ ಕೊಯ್ಯದೆ ಮಾಣನು.
--------------
ಸಕಳೇಶ ಮಾದರಸ
ಗಿರಿಯ ಕರದಿಂದೆತ್ತಿದಡೇನು ? ಹರಿವ ವಾರುಧಿಯನಾಪೋಷಣಂಗೊಂಡಡೇನು ? ಗಗನ ಗಮನದಲ್ಲಿ ಸುಳಿದಡೇನು ? ಇವರೆಲ್ಲರೂ ಪವನದ ಬಳಿಯಲಭ್ಯಾಸಿಗಳು. ಅರ್ಚಿಸಿ, ಪೂಜಿಸುವ ಮಚ್ಚರದೊಳಗಣ ಲೌಕಿಕರ ಮೆಚ್ಚ, ಸಕಳೇಶ್ವರದೇವ, ವೇಷಡಂಬಕರ.
--------------
ಸಕಳೇಶ ಮಾದರಸ