ಭಕ್ತಂಗೆ ಬೇಡದ ಭಾಷೆ, ನಿನಗೆ ಕೊಡದ ಭಾಷೆ.
ಭಕ್ತಂಗೆ ಓಡದ ಭಾಷೆ, ನಿನಗೆ ಕಾಡುವ ಭಾಷೆ.
ಭಕ್ತಂಗೆ ಸತ್ಯದ ಬಲ, ನಿನಗೆ ಶಕ್ತಿಯ ಬಲ.
ಇಬ್ಬರ ಗೆಲ್ಲ ಸೋಲಕ್ಕೆ ಕಡೆಯಿಲ್ಲ.
ಈ ಇಬ್ಬರಿಗೆಯೂ ಒಡೆಯರಿಲ್ಲದ ಲೆಂಕ.
ಇನ್ನು ಭಕ್ತನು ಭಕ್ತಿಯ ಛಲವ ಬಿಡನಾಗಿ.
ಭಕ್ತ ಸೋತಡೆ, ಭಕ್ತನದೆ ಗೆಲುವು.
ಭಕ್ತ ಗೆದ್ದಡಂತು ಗೆಲುವು?
ಇದ ನೀನೆ ವಿಚಾರಿಸಿಕೊಳ್ಳಾ, ಭಕ್ತದೇಹಿಕದೇವ ಸಕಳೇಶ್ವರಾ.