ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಲಾಟದೊಳಗಣ ಅಸ್ಥಿಯ ಬೆಳ್ಪು ವಿಭೂತಿ. ಚರ್ಮದೊಳಗಣ ಕೆಂಪು ಕಿಸುಕಾಶಾಂಬರ. ವ್ಯಾಕುಳವಿಲ್ಲದುದೆ ಲಾಕುಳ, ಮಹಾದೇವರ ನೆನೆವುದೆ ಆಧಾರ. ನಿರ್ಮೋಹತ್ವಂ ಚ ಕೌಪೀನಂ ನಿಸ್ಸಂಗತ್ವಂ ಚ ಮೇಖಳಂ | ಶಾಂತಿ ಯಜ್ಞೋಪವೀತಂ ಚ ಆಭರಣಂ ದಯಾಪರಂ | ಪಂಚೇಂದ್ರಿಯ ವೀಣಾದಂಡಂ ಪಂಚಮುದ್ರಾಃ ಪ್ರಕೀರ್ತಿತಂ | ಮಹಾಲಿಂಗ ಧ್ಯಾನಾಧಾರಂ ಶಿವಯೋಗಿ ಚ ಲಕ್ಷಣಂ | [ಎಂಬುದಾಗಿ], ತುರುಬಿನ ತಪಸಿಯ ಪೆರರೆತ್ತ ಬಲ್ಲರು ? ಸಕಳೇಶ್ವರದೇವಾ, ನೀನೆ ಬಲ್ಲೆ.
--------------
ಸಕಳೇಶ ಮಾದರಸ
ಲಿಂಗದ ಭಾವ ಹಿಂಗದ ನಂಬಿಗೆ, ಅಂಗನೆಯರ ಮೊಲೆ ಲಿಂಗವಾಯಿತ್ತು. ಕಾಯ ಸಂಸಾರಸುಖವು, ಮನ ಪರಮಸುಖವು. ಇದು ಕಾರಣ, ಸಕಳೇಶ್ವರದೇವಾ, ನಿಮ್ಮ ಶರಣರ ಕಾಮಿಗಳೆಂದೆನಬಹುದೆ ?
--------------
ಸಕಳೇಶ ಮಾದರಸ
ಲೆಂಕನಾಗಲಿ, ಕಿಂಕರನಾಗಲಿ, ಶರಣನಾಲಿ, ಸಂಯಮಿತನಾಗಲಿ, ದರುಶನ ಪರುಶನವುಳ್ಳವರಾರದಡಾಗಲಿ, ದುಶ್ಶೀಲಃ ಶೀಲಯುಕ್ತೋ ವಾಯೋವಾ ಕೋsಪಸ್ಯ ಲಕ್ಷಣಂ | ಭೂತಿಶಾಸನ ಸಂಯುಕ್ತಂ ಸಂಪೂಜ್ಯೋ ರಾಜಪುತ್ರವತ್ || ಎಂದುದಾಗಿ, ಸಕಳೇಶ್ವರದೇವ, ಆರ ಮನದಲ್ಲಿ ಹೊದ್ದಿಹನೆಂದರಿಯಬಾರದು.
--------------
ಸಕಳೇಶ ಮಾದರಸ