ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಜಲಮಾತ ನುಡಿವುತ್ತಿಪ್ಪ ಜಗದ ಜಂಗುಳದೊಳಗಿದಡೆ ಶೀಲವಂತನೆ ? ಬ್ಥಿನ್ನರುಚಿಗಳಿಗೆರಗಿ, ಕಾಮನ ಬೆಂಬಳಿವರಿದು, ಮಕರಶೃಂಗಾರವ ಮಾಡಿದಡೆ ಮಹಂತನೆ ? ಲಿಂಗಶೃಂಗಾರವ ಮಾಡಿ, ಅಂಗನೆಯರ ಸಂಗವ ತೊರೆದಡೆ, ಶೀಲವಂತನೆಂಬೆನು. ಲೋಕದ ನಚ್ಚು ಮಚ್ಚು ಬಿಟ್ಟು, ಮನ ನಿಶ್ಚಿಂತವಾದಡೆ, ಮಚ್ಚುವನಯ್ಯಾ, ಎಮ್ಮ ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ ! ಆದಡೆ, ಶಿವನೆ ನೀನು ಕಾಡುವ ಕಾಟ ನೆಲೆಯಿಲ್ಲ. ಸಂಸಾರದ ಕೂಡೆ ಕಾಡುವುದು ಲಯ. ಇಂತೀ ಎರಡೂ ಲಯವಾದಡೆ ನಾನು ನೀನೂ ಕೂಡಿ ನಿತ್ಯರಾಗಿ ಸುಖಿಯಿಸುವ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು, ನಿನಗೆ ಕೊಡುವೆನೆಂದವಧಾನಿಸುವನ್ನಬರ, ಎನಗೂ ಇಲ್ಲದೆ ಹೋಯಿತ್ತು , ನಿನಗೂ ಇಲ್ಲದೆ ಹೋಯಿತ್ತು . ಈ ಭೇದಬುದ್ಧಿಯು ಬಿಡಿಸಿ, ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ಎನ್ನ ಮನದಲ್ಲಿ ದಿಟವಿಲ್ಲ , ಪೂಜಿಸಿ ಏವೆನು ? ಹೃದಯದಲ್ಲೊಂದು, ವಚನದಲ್ಲೊಂದು ಎನಗೆ ನೋಡಾ. ಎನ್ನ ಕಾಯ ಭಕ್ತ , ಮನ ಭವಿ ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ, ನಿನಗೆನ್ನ ಕಾಡುವ ಬಳಲಿಕೆ. ಬಳಲಿಕೆಯಿಬ್ಬರಿಗೆಯೂ ಸರಿ. ನಿನ್ನ ಹೆಚ್ಚೇನು ? ಎನ್ನ ಕುಂದೇನು ? ನೀನು ಭಕ್ತದೇಹಿಕದೇವನಾದ ಬಳಿಕ ! ಸಕಳೇಶ್ವರದೇವ ನೀನೂ ಬಲ್ಲೆ , ನಾನೂ ಬಲ್ಲೆ .
--------------
ಸಕಳೇಶ ಮಾದರಸ
ಎಲವದ ಎಕ್ಕೆಯ ಬರ್ಬೂರದ ಕಾಗೆ ಗೂಗೆಗರಿಯ ಸೂವಾರವೆಯ ಪರಮಾಣುಗಳ ಕಲ್ಲಮೇಲೆ ಬೆಳೆದಿಹ ಹುಲ್ಲುಕಡ್ಡಿಯ ಸೋಂಕುಗಳ ಬೇಡಿ ಬಾಳುವ ಮಾನವನಂತೆ ಬೇಡಿ ನಿಂದವು. ಇಂತುಟನರಿತು, ವಿರಕ್ತಿಯಿಂದ ಸಕಳೇಶ್ವರದೇವಾ ಶರಣೆಂದಡೆ, ನಿಜಪದವ ಕೊಡುವುದಕ್ಕೆ ಸಂದೇಹಬೇಡ.
--------------
ಸಕಳೇಶ ಮಾದರಸ