ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊಯ್ದಿದ ಹರೆಗೆ ಕುಣಿದಾಡುವರೆಲ್ಲಾ. ಹಾಡಿದ ಗೀತಕ್ಕೆ ತಲೆದೂಗುವರೆಲ್ಲಾ. ಪಂಜರದೊಳಗಣ ಅರಗಿಳಿಯಂತೆ, ಅದು ಆಡುವದು, ಹಾಡುವದು. ಸಕಳೇಶ್ವರದೇವರಲ್ಲಿ, ಅಭ್ಯಾಸಕ್ಕೆ, ಮಜ್ಜನಕ್ಕೆ ಎರೆವರೆಲ್ಲಾ ಭಕ್ತರೆ ?
--------------
ಸಕಳೇಶ ಮಾದರಸ
ಹಲವು ದಿನವೆಂಬುದೊಂದು ಮಾನವಂಗಯ್ಯಾ. ದಿನವೊಂದೆ ಶಿವಶಿವಾಯೆಂಬವಂಗೆ. ದಿನವೊಂದೆ ಹರಹರಾಯೆಂಬವಂಗೆ. ಹಲವುದಿನವ ಕೊಂಡಾಡುವಂಗೆ ಲಿಂಗವಿಲ್ಲ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಹರಗಣಂಗಳ ನೆರಹಿ ಮಾಡುವ ಮಾಟ, ಉರಿಯನಾಲಗೆ ಕೊರಳನಪ್ಪಿದಂತಾಯಿತ್ತಯ್ಯಾ. ಒಡೆದ ಮಡಕೆಯಲಮೃತವ ತುಂಬಿ, ಮುರುವ ಕುಟ್ಟಿ ಅಟ್ಟುಂಬ ತೆರನಂತಾಯಿತ್ತಯ್ಯಾ. ಭಕ್ತದೇಹಿಕದೇವ ಮನೆಗೆ ಬಂದಡೆ, ಮತ್ತೆ ಮಾಡಿಹೆನೆಂಬುದಿಲ್ಲವು. ಮೂಗಿಲ್ಲದ ಮುಖಕ್ಕೆ ಶೃಂಗಾರವ ಮಾಡಿದಂತಾಯಿತ್ತಯ್ಯಾ. ಶರಣಸನ್ನಹಿತ ಸಕಳೇಶ್ವರದೇವನ ಅರಿದೂ ಅರಿಯದಂತಿರ್ದಡೆ, ಮಳಲಗೌರಿಯ ನೋಂತು ನದಿಯಲ್ಲಿ ಬೆರಸಿದಂತಾಯಿತ್ತಯ್ಯಾ.
--------------
ಸಕಳೇಶ ಮಾದರಸ
ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ ಬಿದಿರಲಳಿಗೆಯಲಗ್ಘವಣಿಯ ತಂದು, ದೇವದಾರಿಯ ಗಂಧವ ತೇದು, ತಾವರೆಯ ನೆಯ್ದಿಲ ಹೂವನೆ ತಂದು, ಲಿಂಗವ ಸಿಂಗಾರವ ಮಾಡಿ, ನೋಡುವದೆಂದು ದೊರಕೊಂಬುವುದೊ ಎನಗೆ ? ಸಕಳೇಶ್ವರದೇವಾ, ಮುಂದಿನ ವರವನೊಲ್ಲೆ. ಇಂದು ಎನಗಿದು ಪರಮಸುಖವು.
--------------
ಸಕಳೇಶ ಮಾದರಸ