ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿಕ್ಕಟು ಕಡಿದಡೇನು ಮನಕ್ಕತಿಯರಿಯದು. ಹೊಕ್ಕು ಹರಿದಡೇನು ಹೊಲನ ಮೇಯಲರಿಯದು. ಮಕ್ಕಳ ಹಡೆದಡೇನು ಒಕ್ಕಲೂರಾಗದು. ಲೆಕ್ಕಕ್ಕೊಂದೈನೂರಿದ ಡೇತಕೆ ಬಾತೆಯಯ್ಯಾ ! ಮಿಕ್ಕ ಕುಕವಿಗಳ ಅರೆವಚನ, ಹೊಲದ ಕುಕ್ಕತೆನೆಯಾದಂತೆ ಕಾಣಾ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ಚಂದ್ರೋದದಯದಲುಂಬ ಚಕೋರಗೋಗರವ ಹಾಕಿ, ಬಸುರ ಬಡಿದುಕೊಂಡು ಉಣ್ಣದೆಂದಳುವರು ನೋಡಾ. ಲೋಕದ ಚಿಂತೆಯನನಂತವನಾಡುವರಲ್ಲದೆ, ತಮ್ಮ ಚಿಂತೆಯನಾಡುವರೊಪ್ಪಚ್ಚಿಯೂ ನೋಡಾ. ಮಹಂತ ಸಕಳೇಶ್ವರದೇವಾ, ನಿಮ್ಮ ಶರಣರ ನಿಲವಿಂಥಾದಯ್ಯಾ.
--------------
ಸಕಳೇಶ ಮಾದರಸ