ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಲೀಂದ್ರನ ಸಿರಿಗಿಂದ ಅಧಿಕರನಾರನೂ ಕಾಣೆನಯ್ಯಾ. ಅಂಥಾ ಸಂಪತ್ತು ಮೂರಡಿಗೆಯ್ದದು. ಕೆಡುವಂತಿದ್ದುದೆ ಕೌರವನ ರಾಜ್ಯ ? ಮಡಿವಂತಿದ್ದುದೆ ರಾವಳನ ಬಲಾಧಿಕೆ ? ಪರಸ್ತ್ರೀ, ಲಕ್ಷ್ಮೀ ಆರಿಗೆಯೂ ನಿತ್ಯವಲ್ಲ. ಇದು ಶಾಶ್ವತವೆ, ಸಕಳೇಶ್ವರದೇವಾ ?
--------------
ಸಕಳೇಶ ಮಾದರಸ
ಬೆಚ್ಚನೆ ಮಡಕೆಯಂತೆ ಬೆಬ್ಬಿಸಿಕೊಂಡಿದ್ದಡೇನಯ್ಯಾ ? ಮುತ್ತ ಹೂತಂತೆ, ಆಲ ಬಿಳಲು ಬಿಟ್ಟು, ಜಡೆಗಟ್ಟಿಕೊಂಡಿದ್ದಡೇನು ? ಕಂಥೆಬೊಂತೆಯ ಹೊದೆದು ಚಿಂತಿಸುತಿದ್ದಡೇನು ? ತನುಮನಧನ ವಂಚನೆಯಿಲ್ಲದ ಭಕ್ತನ ಮನವ ಮನೆಯಮಾಡಿಕೊಂಡಿಪ್ಪ, ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಬಸವಣ್ಣನ ಭಕ್ತಿಪ್ರಸಾದವ ಕೊಂಡೆನಯ್ಯಾ. ಚೆನ್ನ ಬಸವಣ್ಣನ ಜ್ಞಾನಪ್ರಸಾದವ ಕೊಂಡೆನಯ್ಯಾ. ಪ್ರಭುದೇವರ ಬಯಲಪ್ರಸಾದವ ಕೊಂಡೆನೆಯ್ಯಾ. ಮಡಿವಾಳಯ್ಯನ ಕರುಣಪ್ರಸಾದವ ಕೊಂಡೆನಯ್ಯಾ. ಸಿದ್ಧರಾಮಯ್ಯನ ನಿರ್ಮಲಪ್ರಸಾದವ ಕೊಂಡೆನಯ್ಯಾ. ಮರುಳಶಂಕರದೇವರ ಪ್ರಸನ್ನ ಪ್ರಸಾದವ ಕೊಂಡೆನಯ್ಯಾ. ಏಳ್ನೂರೆಪ್ಪತ್ತುಮರಗಣಂಗಳ ಪರಮಪ್ರಸಾದವ ಕೊಂಡು. ಬದುಕಿದೆನಯ್ಯಾ, ಸಕಳೇಶ್ವರಾ.
--------------
ಸಕಳೇಶ ಮಾದರಸ
ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟಂತಿಪ್ಪವೆ ? ವಿವರಿಸಿ ನೋಡಿದಡೆ, ಸೃಷ್ಟಿಯೊಳಗಣ ಪ್ರಾಣಿಗಳು ಪರಮನ ಮುಟ್ಟದಿಪ್ಪವೆ ? ಕಷ್ಟರು ಬೇಡವೆಂದು ಬಿಟ್ಟೋಡುತ್ತಿಪ್ಪ ಪ್ರಾಣಿಗಳನಟ್ಟಿ, ಹಿಡಿದು ಕೊಂದಡೆ, ಸೈಷ್ಟಿಗೀಶ್ವರನಿಕ್ಕದಿಪ್ಪನೆ ನರಕದಲ್ಲಿ ? ಒಡೆಯರಿಲ್ಲೆಂದು ಹಲವು ಪ್ರಾಣಿಗಳ ಹರಿಹರಿದು ಕೊಂದಡೆ, ಹರನಿಕ್ಕದಿಪ್ಪನೆ ಅಘೋರನರಕದಲ್ಲಿ ? ಸಕಲಪ್ರಾಣಿಗಳಿಗೆ ಮೇಲಾರೈಕೆ, ನಮ್ಮ ಸಕಳೇಶ್ವರದೇವನಲ್ಲದೆ ಮತ್ತೊಬ್ಬರುಂಟೆ?
--------------
ಸಕಳೇಶ ಮಾದರಸ