ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರುಷಮೃಗ ಬಂದು ನಿಂದಲ್ಲಿ, ಜನ್ನ ಜಯವಾಗದೆ ಧರ್ಮಂಗೆ ? ಲಿಂಗಜಂಗಮಭಕ್ತಿ ಪ್ರಜ್ವಲಿಸದೆ ಸಿರಿಯಾಳಂಗೆ ? ಪ್ರಸಾದವ ಬಿಬ್ಬಿಬಾಚಯ್ಯ ಮೆರವುತ ಬಪ್ಪಲ್ಲಿ, ಅರಿಯದೆ ನಿಂದಿಸಿದಡೆ, ಹರಿದು ಹತ್ತದೆ ಉರಿಯ ನಾಲಗೆ ಗ್ರಾಮವ? ಹರಸಿತ್ತ ನಿರೂಪವಿಡಿ ಮಾರ್ಗದಲ್ಲಿ ಮಾರಾರಿಯ ಶರಣರು ಬಂದು ನಿಂದಲ್ಲಿ ಅರ್ಧಗೃಹಂಗಳುಳಿಯವೆ ? ಸದ್ಯೋಜಾತನ ಶರಣರ ಧರೆಯನುರಿಯ ನಾಲಗೆಯ ನೀಡಿ, ಕಲ್ಯಾಣವನಾಳುವ ಬಿಜ್ಜಳನ ಮುಟ್ಟಿನಿಂದಡೆ, ಹೋ ಹೋ! ಇದ್ದಂತೆ ಬರಬೇಕೆಂದಡೆ, ಕೋಪಾಟೋಪವಂ ಬಿಟ್ಟು ಕಳದು, ಸಾಮಾನ್ಯವಾಗದೆ ? ಶಿವನೊಲಿದ ಸಿದ್ಧರಿಗೆ ಅಂಗದ ಮೇಲೆ ಲಿಂಗವವಿಲ್ಲದವನು ಅಂಗಳವನು ಮೆಟ್ಟಲಾಗದೆಂದಡೆ, ಉರಿಯ ಜ್ವಾಲೆಯ ಬಿಟ್ಟಡೆ, ಪರಿಹರಿಸದೆ ಕುಂಚಿಗೆಯ ತುದಿಯಲ್ಲಿ? ಪರಮನೊಲಿದ ಶರಣರು ಸ್ವತಂತ್ರಮಹಿಮರು. ಅದಂತೆಂದಡೆ: ಅವರೆಂದಂತೆ ಅಹುದೆಂದಡೆ, ಅಂಗದ ಮೇಲೆ ಲಿಂಗಪ್ರತಿಷ್ಠೆಯಾಗದೆ, ಶಿವಯೋಗಿ ಸಿದ್ಧರಾಮಯ್ಯಂಗೆ ಸಕಲಧೂರ್ತದುರಿತಂಗಳು ಬಿಟ್ಟೋಡುತ್ತಿದ್ದವು, ಸಕಳೇಶ್ವರದೇವಾ, ನಿಮ್ಮ ಶರಣನ ದೇವತ್ವಕ್ಕಂಜಿ.
--------------
ಸಕಳೇಶ ಮಾದರಸ
ಪ್ರಕೃತಿಗುಣವಳಿಯದೆ, ವಿಕೃತವೇಷವ ಧರಿಸಿ, ಕ್ರತುಮಾನವನ ಬೇಡುವ ಯಾಚಕನಲ್ಲ. ಲಿಂಗಾಭಿಮಾನಿ, ತ್ರಿಭುವನ ಲಿಂಗಾಭಿಮಾನಿ, ತ್ರಿಭುವನ ಭವನನ ಮುಖದಲ್ಲಿ ಬಂದುದನಲ್ಲದೆ ಕೈಕೊಳ್ಳ. ಕೂರ್ಮನ ಶಿಶುವಿನಾಪ್ಯಾಯನದಂತೆ, [ಆರಾ]ಧ್ಯ ಸಕಳೇಶ್ವರಾ, ನಿಮ್ಮ ಜ್ಞಾನಾಮೃತವನುಂಡು ಸುಖಿಯಾಗಿ.
--------------
ಸಕಳೇಶ ಮಾದರಸ
ಪುಷ್ಪ ಧೂಪ ದೀಪ ನೈವೇದ್ಯ ಸೋಂಕಿದ ಸುಖವ, ಲಿಂಗಾರ್ಪಿತ ಮಾಡುವ ಪರಿಯಿನ್ನೆಂತೊ? ಅವಧಾನದೊಳಗೊಂದು ವ್ಯವಧಾನ ಬಂದಡೆ, ವ್ಯವಧಾನವ ಸುಯಿಧಾನವ ಮಾಡುವ ಪರಿಯಿನ್ನೆಂತೊ? ವ್ಯಾಪ್ತಿ ವ್ಯಾಕುಳ ವಾಕುಮನ [ವ] ರಿಯದನ್ನಕ್ಕ, ಶರಣನೆನಿಸಬಾರದು, ಸಕಳೇಶ್ವರದೇವಾ ನಿಮ್ಮಲ್ಲಿ.
--------------
ಸಕಳೇಶ ಮಾದರಸ
ಪರಸತಿಯೆನಗೆ ತಾಯ ಸಮಾನವಯ್ಯಾ. ಕನ್ಯಾಸ್ತ್ರೀ ಎನಗೆ ಸೋದರ ಸಮಾನವಯ್ಯಾ. ವಿಧವೆಯೆನಗೆ ಅಮೇಧ್ಯದ ಸಮಾನವಯ್ಯಾ. ಪಣ್ಣಾಂಗನೆಯ ಸಂಗವೆನಗೆ ಕುನ್ನಿಯ ಸಮಾನವಯ್ಯಾ. ದಾಸಿಯ ಸಂಗವೆನಗೆ ಸೂಕರನ ಮಾಂಸದ ಸಮಾನವಯ್ಯಾ. ಇಂತಿದಕ್ಕೆ ಹೇಸದೆ ಆಶೆಯ ಮಾಡಿ, ತನುಲೋಭದಿಂದ ಕೂಡಿದಡೆ, ತನುವ ದಿಗ್ಬಲಿಗೊಡುವೆ. ಮನತೋಭದಿಂದ ನೆನೆದಡೆ. [ರವಿ]ಶಶಿಗಳುನ್ನಕ್ಕರ ನರಕದಲ್ಲಿಕ್ಕದಿರ್ದೆಯಾದಡೆ ನಿನಗೆನ್ನಾಣೆಯಯ್ಯಾ ಸಕಳೇಶ್ವರಾ.
--------------
ಸಕಳೇಶ ಮಾದರಸ
ಪರೀಕ್ಷೆಯನಾರು ಬಲ್ಲರು ? ಪರೀಕ್ಷೆಯನಾರು ಬಲ್ಲರು ? ನಾದಬಿಂದುವಿನ ವಿಕೃತಿಯೊಳಗಣ ಹಂಸನ ಸ್ಥಳವಿಟ್ಟಾತ, ಶಶಿಧರನಲ್ಲದೆ ಮತ್ತೊಬ್ಬನಿಲ್ಲ. ಲೋಲುಪ್ತರಾದವರೆಲ್ಲ, ಹಂಸನ ವಂಶಿಕರಲ್ಲದೆ, ಸುಪ್ಪಾಣಿಯಂತೆ ಸುಪಥವಾದ ಶರಣಂಗೆ ಹತ್ತೂದೆ ಲೌಕಿಕಾರ್ಥ ? ಮುತ್ತ ಹುಳಿತಡೆ, ನಾತ ಹುಟ್ಟುವದೆ ಲೋಕದಲ್ಲಿ ? ಬಯಕೆವಂತರೆಲ್ಲ ಐಕ್ಯವಂತರಹರೆ ? ಹೊನ್ನು ಧರೆಯ ಮೇಲೆ ಬಿದ್ದರೆ, ನಿಟ್ಟೈಸುವದೆ ? ಗಂಭೀರದ ತೆರನನರಿಯದವನ ನಿಧಿ, ಪರಮಪರೀಕ್ಷೆಯನರಿಯದೆ, ಪರುಷದಂತಿಪ್ಪ ಮಹಂತ ಧರೆಯ ಮೇಲೆ, ಕಾರಮೇಘ ಸುರಿದು, ನದಿಯ ಬೆರಸುವಂತೆ, ಧರೆಯೊಳಗೆ ಹುಟ್ಟಿದ ಪುಣ್ಯಲಂಗಳ ಮಾಡಿ. ನಿಮ್ಮ ಬೆರಸುವನೆ, ಸಕಳೇಶ್ವರದೇವಾ ನಿಮ್ಮ ಶರಣ.
--------------
ಸಕಳೇಶ ಮಾದರಸ
ಪರಮಾರ್ಥದ ಪರೀಕ್ಷೆಯನರಿಯದೆ, ನಿಂದಿಸಿ ನುಡಿವರ ಕಂಡಡೆ, ಏನೆಂಬೆನು? ಅರಳಿಯ ಮರನುಲುಹೇಂಬೆನು. ಮೂಗಜಾತಿಯ ಶಬುದವೆಂಬೆನು. ಸಕಳೇಶ್ವರದೇವಾ, ನಿಮ್ಮನುಭಾವವನರಿಯದವರ ಕಂಡೆನಾದಡೆ, ಹಳಿಹಳಿಯೆಂಬೆನು.
--------------
ಸಕಳೇಶ ಮಾದರಸ
ಪಿನಾಕಿಯ ಅಲ್ಲಟಪಲ್ಲಟದಿಂದ ಪಂಚೈವರ ಪ್ರಾಣಂಗಳು ಸಂಚಗೆಡವೆ, ಹಲವು ಕಾಲ ? ಲಿಂಗದ ಮೇಲಣ ನೋಟಭಾವ ತಪ್ಪಿ, ತನು ಉರುಳಿ ಲಿಂಗವ ಬೆರಸನೆ ಅನುಮಿಷನು ? ಒಬ್ಬ ಜಂಗಮ ಮನೆಗೆ ಬಂದಡೆ, ಇಲ್ಲೆಂದು ಕಳುಹಿದಡೆ, ಅಲ್ಲಿ ಹೋಗದೆ ಬಸವರಾಜನ ಪ್ರಾಣ ? ಬರಿದಳಲುವ ಬೆಳ್ಳಂಬವಿಲ್ಲದೆ ಪರಮಪದವುಳ್ಳವರ ಮಹಾಬೆಳಗೊಳಕೊಳ್ಳದೆ ? ತನ್ನಿಚ್ಛೆಯಲಾಗಿ ಹೋಗುತಿಪ್ಪ ಲಿಂಗದಿಚ್ಛೆಯನರಿಯದವರ ಕಂಡಡೆ, ಮೆಚ್ಚುವನೆ ನಮ್ಮ ಸಕಳೇಶ್ವರದೇವ?
--------------
ಸಕಳೇಶ ಮಾದರಸ