ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶೀಲವಂತನಾದಡೆ ತಾ ಸವೆದು ಶೀಲವ ಮಾಡಬೇಕಲ್ಲದೆ ತಾನಿದೆಡೆಯಲ್ಲಿ ಸುಳಿದು ಮಾಡುವ ಶೀಲ, ಕೊಟ್ಟು ಪೂಜಿಸುವ ಕೈಕೂಲಿ ತನಗಿಲ್ಲ. ಪೂಜೆಯ ಫಲವು ಕೊಡವಾಲ ಕರೆವ ಸುರಬ್ಥಿಯಂತೆ ಅಟ್ಟಿದರಟ್ಟು ವರವ ಬೇಡಿ ಮರುಗುವ ದಾಸಿಯ ಪಥದಂತೆ, ತನ್ನ ಉದರನಿಮಿತ್ತ್ಯವಿಡಿದು, ನೇಮ ಬೇಕೆಂಬ ದುಶ್ಶೀಲರ ಮೆಚ್ಚ, ಸಕಳೇಶ್ವರದೇವನು.
--------------
ಸಕಳೇಶ ಮಾದರಸ
ಶ್ರೀಗುರುವೆ ಬಸವ. ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ಬಸವ. ಶತಕೋಟಿಬ್ರಹ್ಮಾಂಡಂಗಳು ನಿನ್ನ ರೋಮದ ತುದಿಯಲ್ಲಿಪ್ಪವು ಬಸವ. ಎನ್ನ ಭವವೆಂಬ ವಾರಿದ್ಥಿಯ ದಾಂಟುವುದಕ್ಕೆ ನಿನ್ನ ಬಾಲತುದಿಯ ಎಯ್ದಿದೆನು ಬಸವ. ಆರಾಧ್ಯಪ್ರಿಯ ಸಕಳೇಶ್ವರಾ, ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಸಕಳೇಶ ಮಾದರಸ
ಶ್ವಾನ ಮುಟ್ಟಿದ ಪಾಯಾಳು ಅಂಜನಕ್ಕೆ ಸಲುವನೆ? ಭಕ್ತಿ ಮಿಶ್ರವಾದಡೆ ಈಶ್ವರನೊಲಿವನೆ? ಅರಗು ಮಳಲು ಬೆರಸಿ ಉಕ್ಕ ಗೆಲುವಂತೆ, ನಿಮ್ಮ ಬೆರೆಸಿದವರು ಇಟ್ಟೊರಸದಿಹರೆ ಷಡುದರುಶನವ ? ಸಾಗರವ ದಾಂಟುವವ ಬಸವನ ಬಾಲವ ಬಿಟ್ಟು, ಮತ್ತೊಂದಕ್ಕೆ ಹರಿದು ಕಡಲನೊಡಗೂಡುವಂತೆ, ಶಿವಲಿಂಗದೇವನ ಪೂಜಾಕ್ರಿಯೆಯ ಮರೆದೆಡೆ, ಒಡಗೂಡದಿಹನೆ, ಕರ್ಮದ ಕಡಲವ? ದಿಟಪುಟವಿಲ್ಲದ ಭಕ್ತಿಯ ಮೆಚ್ಚ, ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಶಬ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯವೆಲ್ಲ ಏಕಾಕಾರಿಗಳಾಗಿ, ತಿರುಗಿ ಹರಿಯದೆ, ಏಕಾಕಾರಿಗಳಾಗಿದ್ದವು ತಮ್ಮೊಳಗೆ. ಸಕಳೇಶ್ವರದೇವರಲ್ಲಿ, ಪರಿಣಾಮಪ್ರಸಾದಪದವಿಯ ಪಡೆದನಾಗಿ, ಒಡನೆ ಹುಟ್ಟಿ, ನೀವೆಲ್ಲ ಸುಖಿಯಾದಿರಯ್ಯಾ.
--------------
ಸಕಳೇಶ ಮಾದರಸ
ಶಿವಯೋಗಿ ಭಿಕ್ಷವ ಕೊಂಬಲ್ಲಿ ಜಾತಿಸೂತಕವಿಲ್ಲದಿರಬೇಕು, ಆಚಾರ ಸಂಕಲ್ಪವಿಲ್ಲದಿರಬೇಕು. ಶಿವಂಗೆ ಸಲ್ಲದ ದ್ರವ್ಯಕ್ಕೆ ಕೈಯಾನದಿರಬೇಕು. ಆಶೆ ರೋಷ ಹರುಷವಿಲ್ಲದಿರಬೇಕು. ಇಂತೀ ಕ್ರಮವನರಿದು, ಭಕ್ತಿಭಿಕ್ಷವ, ಲಿಂಗನೈವೇದ್ಯವ ಮಾಡಿಕೊಳ್ಳಬಲ್ಲ ಶರಣನ ನೀನೆಂಬೆಯ್ಯಾ, ಸಕಳೇಶ್ವರಾ.
--------------
ಸಕಳೇಶ ಮಾದರಸ
ಶಂಭುವಿಕ್ಕಿದ ಆಜ್ಞೆಯ ಮೀರಿ, [ಅಂಬ]ರವಡ್ಡಬಿದ್ದಿತ್ತೆ ? ಅಂಬುಧಿ ಮೇರೆವರಿಯಿತ್ತೆ ? ಧಾರುಣಿಯೆಂಬುದೊಂದು ನೀರಲಿ ನೆರೆಯಿತ್ತೆ ? ತಾನಿಪ್ಪನೆ ಆತನ ಒಳಗೆ ? ಅಂಗದ ಮೇಲಣ ಲಿಂಗ ಹಿಂಗಿದ ಭಂಗವನರಿಯದೆ, ನುಡಿವುತ್ತಿಪ್ಪ ಭಂಗಿತರನೇನೆಂಬೆನಯ್ಯಾ! ಮಹೇಶ್ವರತ್ವವ ನುಡಿದಡೆ ಹೇಸುವನಯ್ಯಾ ಶಿವನು. ಸ್ವೀಕರಿಸುವೆನಾ ಕೆಲರ ಕೈಯಲಿ. ಸತ್ಯವುಳ್ಳಡೆ ಸಾಗರಹೊಕ್ಕ ಲಿಂಗ, ಅಗ್ರದಿಂದ ಬಾರದೆ ಸಕಳೇಶ್ವರದೇವಾ, ನಿಮ್ಮ ಶರಣರಿಗೆ ?
--------------
ಸಕಳೇಶ ಮಾದರಸ
ಶತವೇದಿ, ಸಹಸ್ರವೇದಿಗಳು, ಕಬ್ಬುನವ ಹೊನ್ನ ಮಾಡುವ ಸಿದ್ಧರಸವಾದಡೇನು? ಅಂತಿರಲಿ, ಅಂತಿರಲಿ. ದೀಪವಾದಿಗಳು ಜಲವಾದಿಗಳು, ಹಿರಣ್ಯಂಗಳ ವೇಧಿಸುವ ವೇದಿಗಳಾದಡೇನು ? ಅಂತಿರಲಿ, ಅಂತಿರಲಿ. ಘಟದಿಟ ಚಂದನ ಪರುಷ ಕಾಗೆಯ ಹೊಂಬಣ್ಣದ ಮಾಡುವ ಮೇರುವಾದಡೇನು ? ಅಂತಿರಲಿ, ಅಂತಿರಲಿ. ಸಕಳೇಶ್ವರದೇವಾ, ನಿಮ್ಮ ಶರಣರು. ಸ್ವತಂತ್ರ[ರು], ಘನಮಹಿಮರು. ಶರವೇದಿ ಶಬುದವೇದಿ ಕ್ಷಣವೇದಿಯೆಂಬವರು, ಲಿಂಗವೇದಿಗೆಂತು ಸರಿಯೆಂಬೆ?
--------------
ಸಕಳೇಶ ಮಾದರಸ
ಶೀಲ ಶೀಲವೆಂದು ಗರ್ವೀಕೃತದಲ್ಲಿ ನುಡಿವ ಉದ್ದೇಶ ಪ್ರಾಣಿಗಳೆಲ್ಲರೂ ಅನಂತಶೀಲರೆ ? ಹೂ ಬಾವಿ ಮಠಕ್ಕೆ ಸೀಮೆಯ ಮಾಡೂದು ಶೀಲವೇ ? ಮನಕ್ಕೆ ಸೀಮೆಯ ಮಾಡೂದು ಶೀಲವಲ್ಲದೆ, ಹುಸಿಯ ಕಳೆವುದು ಶೀಲವಲ್ಲದೆ, ಭಕ್ತರ ಕಳೆವುದು ಶೀಲವೆ? ಲಿಂಗಪ್ರಾಣವ ಮಾಡೂದು ಶೀಲವಲ್ಲದೆ, ಪ್ರಾಣಲಿಂಗವ ಮಾಡೂದು ಶೀಲವೆ? ಇಂತೆಲ್ಲ ಶೀಲರು ದುಶ್ಶೀಲರು. ಸಕಳೇಶ್ವರದೇವಾ, ನಾನೇನೆಂದರಿಯೆ, ನೀನಿರಿಸಿದಂತಿರ್ಪೆ.
--------------
ಸಕಳೇಶ ಮಾದರಸ