ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದುಃಖ ಹೊಯಿತ್ತು ತನ್ನಲ್ಲಿ ತಾನಿಲ್ಲದೇ. ಸುಖ ನಿಂದುದು ತನ್ನಲ್ಲಿ ತಾನು ನಿಜವಾಗಿ, ಭ್ರಾಂತುದೋರದೆ, ಸಕಳೇಶ್ವರದೇವಾ ತಾನಾಗಿ ನಿಂದವಂಗೆ.
--------------
ಸಕಳೇಶ ಮಾದರಸ
ದಾಸ ವಸ್ತ್ರವನಿತ್ತ ಠಾವು ಲೇಸಾಯಿತು ್ತ. ತವನಿದ್ಥಿಯ ಪಡೆದ ಠಾವು ಹೊಲ್ಲೆಹವಾಯಿತ್ತು . ಸಿರಿಯಾಳ ಮಗನನಿತ್ತ ಠಾವು ಲೇಸಾಯಿತ್ತು . ಮರಳಿ ಬೇಡಿದ ಠಾವು ಹೊಲ್ಲೆಹವಾಯಿತ್ತು . ಬಲ್ಲಾಳ ವಧುವಿನಿತ್ತ ಠಾವು ಲೇಸಾಯಿತ್ತು. ಸ್ವಯಲಿಂಗವಾದ ಠಾವು ಹೊಲೆಹವಾಯಿತ್ತು . ಇವರೆಲ್ಲರೂ ಸಕಳೇಶ್ವರದೇವರಲ್ಲಿ ಅಪೇಕ್ಷಿತರಲ್ಲದೆ, ನಿರಪೇಕ್ಷಿತರಾರೂ ಇಲ್ಲ .
--------------
ಸಕಳೇಶ ಮಾದರಸ
ದೇಹಧರ್ಮದಾಸೆ ಬೇರೆ, ಭಕ್ತಿಯಿಲ್ಲದ ಬಗೆ ಬೇರೆ. ಎನಗೆಂದು ಮಾಡಿದಿರಿ, ಈ ಸಕಲಪ್ರಪಂಚುವನು. ಎನಗೆಂದು ಮಾಡಿದಿರಿ, ಈ ಸಕಲ ವ್ಯಾಪ್ತಿಗಳನು. ನಿಶ್ಚಿಂತ ಪರಮಸುಖವನೆಂದಿಗೀವೆ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ದೇಶ ದೇಶಾಂತರವ ತಿರುಗಿ, ತೊಳಲಿ ಬಳಲಿ, ಕೆಲರ ಹಳಿದು, ಕೆಲರ ಹೊಗಳಿ, ವೃಥಾ ಹೋಯಿತ್ತೆನ್ನ ಸಂಸಾರ. ಗಿರಿಯ ಶಿಖರ ಮೇಲೆ ಲಿಂಗಧ್ಯಾನದಲ್ಲಿ ಮೌನಿಯಾಗಿರಿಸೆನ್ನ, ಸಕಳೇಶ್ವರಯ್ಯಾ.
--------------
ಸಕಳೇಶ ಮಾದರಸ
ದೇವರೆದರಾವು ಏಳುವೆವಯ್ಯಾ, ದೇವ ಬಿದ್ದರಾವು ಬೀಳುವೆವಯ್ಯಾ. ದೇವ ಸತ್ತರಾವು ಸಾವೆವಯ್ಯಾ, ದೇವ ಬದುಕಿದರಾವು ಬದುಕುವೆವಯ್ಯಾ. ನಾ ಸತ್ತು , ದೇವ ಹಿಂದುಳಿದಡೆ, ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ದೇವಾ, ನಿಮ್ಮಲ್ಲಿ ಬಯಸಿ ಬೇಡುವಡೆ ಏನಿಲ್ಲ ದೇವಾ ? ಆಯುವ ಬೇಡುವೆನೆ ? ಸಂಸಾರಕ್ಕಾನಂಜುವೆ. ಸ್ತ್ರೀಯ ಬೇಡುವೆನೆ? ಪರಾಂಗನೆಯ ಪಾಪ. ಮುಕ್ತಿಯ ಬೇಡುವೆನೆ? ಅದು ನಿನ್ನ ಪದವಿ. ಸಕಳೇಶ್ವರದೇವಾ, ಆನೇನುವನೊಲ್ಲೆ. ನಿಮ್ಮ ಶರಣರ ಸಸಂಗವುಳ್ಳಡೆ ಸಾಕು.
--------------
ಸಕಳೇಶ ಮಾದರಸ
ದೊರೆಕೊಂಡಂತೆ ದಣಿದಿಹ ಮನದವರ ತೋರಾ, ದುಃಖಕ್ಕೆ ದೂರವಾಗಿಹರ ತೋರಾ ಸದಾನಂದದಲ್ಲಿ ಸುಖಿಯಾಗಿಪ್ಪವರ ತೋರಾ. ಸಕಳೇಶ್ವರದೇವಾ ಎನಗಿದೇ ವರವು ಕಂಡಾ, ತಂದೆ.
--------------
ಸಕಳೇಶ ಮಾದರಸ