ಅಥವಾ
(12) (4) (3) (2) (2) (1) (1) (0) (6) (1) (0) (1) (0) (0) ಅಂ (3) ಅಃ (3) (15) (0) (3) (1) (0) (2) (1) (3) (0) (0) (0) (0) (0) (0) (0) (2) (0) (7) (2) (8) (7) (0) (4) (2) (9) (2) (0) (0) (3) (1) (8) (1) (15) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧನವ ಪಡೆದು ವಿಭೋಗವನರಿಯದ ಲೋಬ್ಥಿಗೆ ಸಿರಿಯೇಕೆ ಬಯಸುವಂತೆ ? ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ, ಕನ್ನೆ ಅಳಿಯಳು, ಕನ್ನೆ ಉಳಿಯಳು. ಜವ್ವನ ತವಕದಿಂದ ಅವಳು ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ, ಅದೆಂತು ಸೈರಿಸುವೆ ? ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ? ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು, ಸಕಳೇಶ್ವರದೇವ ನಗುವ.
--------------
ಸಕಳೇಶ ಮಾದರಸ
ಧಾತುಗೆಟ್ಟು ಬೋಳಾದಡೆ, ನಿಜವನೆಯಲುಬಲ್ಲುದೆ ಅಯ್ಯಾ? ವಿಕೃತವೇಷವ ತೋರಿ, ಉದರ ಹೊರೆವುದಕ್ಕೆಂತಯ್ಯಾ? ಉಪಾಧಿವಿಡಿದು ಮಾಡುವ ಷೋಡಶಕ್ರೀ, ಸಕಳೇಶ್ವರದೇವಂಗೆ ದೂರವಯ್ಯಾ.
--------------
ಸಕಳೇಶ ಮಾದರಸ