ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾತಿಲ್ಲವೆನಗೆ; ಆ ಮಾತು ನುಡಿಯಲಿಲ್ಲವೆನಗೆ. ನೇಮವಳಿದು, ಸೀಮೆಯಕಳೆದು, ಉಭಯತನು ನಷ್ಟವಾಗಿ, ಬಣ್ಣದ ಭ್ರಮೆಯಳಿದು, ಮೂರ್ತಿಯ ಕುರುಹ ನಷ್ಟವ ಮಾಡಿ, ಸಂಗಯ್ಯನಲ್ಲಿ ಬಸವಭಾವವಿಲ್ಲದೆ ಬಯಲಾದೆನು.
--------------
ನೀಲಮ್ಮ
ಮೌಕ್ತಿಕದ ಮಂಟಪ ಕಟ್ಟಿ ಮನೆಯೊಳಗೆ ತೋರಣಗಟ್ಟಿದವು. ಮಾಣಿಕ್ಯದ ವರ್ಣದ ತೋರಣವು. ಆ ಮಾಣಿಕ್ಯದ ವರ್ಣದ ತೋರಣವ ಕಂಡು, ಆ ತೋರಣವ ಸರಗೊಳಿಸಿ ಸರದ ಮುಂದೆ ಮಧ್ಯಸ್ವರೂಪವಾಗಿ ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಮಾತಿಲ್ಲದ ಮಥನವ ಮಾಡಿ ಮೆರೆದೆ ಬಸವಾ. ನೀತಿಯಿಲ್ಲದೆ ನಿಜವ ತೋರಿ ಮೆರೆದೆ ಬಸವಾ. ಅನಿತನಿತು ತೃಪ್ತಿಯಮಾಡಿ ತೋರಿದೆಯಯ್ಯಾ. ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ.
--------------
ನೀಲಮ್ಮ
ಮನವೊಂದು ರೂಪಾಗಿ ಧನವೊಂದು ರೂಪಾಗಿ ಅಡಗಿದವು ಅಲ್ಲಲ್ಲಿ. ಕನಕದ ಬಾಗಿಲ ಕಂಡು ಆ ಬಾಗಿಲು ಬಯಲನನುಕರಿಸುವ ಸುಖವ ಕಂಡು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮೂಲಾಧಾರದ ಬಾಗಿಲ ಕಾಯಲು ಆ ಮೂಲಾಧಾರದ ಬಾಗಿಲಲ್ಲಿ ಉರಿಹತ್ತಿಯುರಿಯಲು ಕರಸಮಯ ವಿರಸವಾಯಿತ್ತು. ನಿರುಪಮ ನಿರಾಕಾರಮೂರ್ತಿಯ ಕಂಡು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮೂನೂಲನಳಿದೆ ಮುಖವ ಕಳದೆ ಆ ಮುಖ ವಿಮುಖವಾಗಿ ವಿಚಾರವ ತಿಳಿದು ವಿನೇಯಪರತತ್ತ್ವವನಳಿದು ನಿಃಶೂನ್ಯ ಶಬ್ದವಾಗಿ ಉರಿಯುಂಡ ಕರ್ಪೂರದಂತೆ ತೆರಹಿಲ್ಲದೆ ನಿಂದೆನಯ್ಯ. ನಿಂದು ನಿರ್ವಯಲಾಗಿ ಲಿಂಗ ಲಿಂಗಾಂಗಿಯಾನಾಗಿ ನೀರೊಳಗೆ ನೀರು ಬೆರದಂತಾನಾದೆನಯ್ಯ ಸಂಗಯ್ಯ ಸಂಗಯ್ಯ ಶಿವಸೂತ್ರಧಾರಿಯಾನಾದೆನು.
--------------
ನೀಲಮ್ಮ
ಮುನ್ನಲೊಂದು ಶಿಶು ಹುಟ್ಟಿತ್ತು. ಆ ಶಿಶುವಿನ ಕೈಯಲೊಂದು ಮಾಣಿಕ್ಯವ ಕೊಡಲು, ಆ ಮಾಣಿಕ್ಯ ಹಲವು ವರ್ಣವನೆ ತೋರಿ ಬಯಲನೆ ನೆಮ್ಮಿತ್ತು. ಮಾಣಿಕ್ಯದ ಕುರುಹಿಲ್ಲ, ಬಯಲಿಂಗೆ ಬಣ್ಣವಿಲ್ಲ, ಸಂಗಯ್ಯನಲ್ಲಿ ಹೆಸರಳಿದ ಬಸವಂಗೆ.
--------------
ನೀಲಮ್ಮ
ಮಂತ್ರಾಕ್ಷತೆಯನರಿದು ಮಂತ್ರಸರವ ಪರಿಗೊಳಿಸಲು ಆ ಪರಿಯಯಿರವನರಿದು ಪರವಶಳಾದೆನು. ಆ ಪರವಶದ ಸುಖವ ಕಂಡು ಪರಿಣಾಮಿಯಾದೆನಯ್ಯ ಸಂಗಯ್ಯ
--------------
ನೀಲಮ್ಮ
ಮಂಗಳಸೂತ್ರವ ಕಟ್ಟಲು ಆ ಮಂಗಳಸೂತ್ರಕ್ಕೆ ಮಣಿಯ ಪವಣಿಸಲು ಆ ಮಣಿಯ ದ್ವಯದ್ವಾರದಲ್ಲಿ ದಾರವಿದಾರವಾಯಿತ್ತು. ಆ ದ್ವಾರದ ಮಧ್ಯದಲ್ಲಿ ಬೆಳಗುದೋರಿತ್ತಯ್ಯ ಸಂಗಯ್ಯನಲ್ಲಿ ಹಿಂಗದ ಸುಖವ ಕಂಡೆನು.
--------------
ನೀಲಮ್ಮ
ಮಂಡೆಯಿಲ್ಲದೆ ಪುಷ್ಪವ ಮುಡಿಯಲು ಆ ಮುಡಿವ ಪುಷ್ಪ ಕಂಪಿಲ್ಲದೆಯಡಗಿತ್ತು. ಕಡಲೇಳು ತುಂಬಿದ ಹೂವತಂದು ಮುಡಿಯಲು ರೂಪಾಕಾರವಾಯಿತ್ತು. ತದ್ರೂಪವಡದು ಸಂಗಯ್ಯನಲ್ಲಿ ಪುಷ್ಪಪರಿಮಳಿಸಿತ್ತಯ್ಯ.
--------------
ನೀಲಮ್ಮ
ಮಾಟವಿಲ್ಲದ ಸಮಯಾಚಾರವ ಮಾಡಹೋದೆ ಬಸವಾ. ಆ ಸಮಯಾಚಾರವನರಿದು ಕೂಡಿದೆ ಬಸವಾ. ಆ ಮಾಟ ಸುಯಿದಾನವಾಯಿತ್ತಯ್ಯಾ ಬಸವಾ. ಆ ಸುಯಿದಾನದಸುಖವನರಿಯಲು ಸಂಗಯ್ಯನಲ್ಲಿ ಬಸವನೊಂದೆ ರೂಪಾದ
--------------
ನೀಲಮ್ಮ
ಮುನ್ನಲೊಂದು ಕಾಯವಿಡಿದು ನಾನು ಹುಟ್ಟಿ ಆ ಹುಟ್ಟಿದ ಕಾಯಕ್ಕೆ ನಿಜದಮೂರ್ತಿಯ ಅನುವ ತಿಳಿದು ವಿನಯಪರಳಾದೆನು ವೀರತ್ವದ ಸಂಗದಮೂರ್ತಿಯನರಿದು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮುನ್ನವೆ ಮುನ್ನವೆ ಹುಟ್ಟಿದೆ ನಾನು. ಆ ಮುನ್ನವೆ ಮುನ್ನ ಆನು ಪ್ರಸನ್ನ ಮುಂಕೊಂಡ ಶಕ್ತಿಯಾದೆ. ಶಕ್ತಿಸಂಗವಳಿದು ಸಮಯಾಚಾರವಳವಡಲು ಪ್ರಭಾಪೂರಿತಳಾಗಿ ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮಲ ಮೂತ್ರ ವಿಸರ್ಜನೆಯಿಲ್ಲದೆ ಆ ಮಲ ಮೂತ್ರ ವಿಸರ್ಜನೆಯ ಮಾಡಿದ ಶರಣ ಮಲ ಮಾಯವ ಹೊದ್ದದೆ ಆ ಮಲ ನಿರ್ಮಲಾಕಾರನಾದ ಶರಣ ಸಂಗಯ್ಯನಲ್ಲಿ ಬಸವ ಪ್ರಸಾದಿ ಪರಿಣಾಮಿಯಾದೆನು.
--------------
ನೀಲಮ್ಮ
ಮೂಲಾಧಾರದ ಮಂಟಪದ ಮನೆಯಮೇಲೆ ಲೀಲಾವಿಚಾರಮೂರ್ತಿಯ ಅನುವ ಕಂಡೆನು. ಆ ಅನುವನರಿದು ಮುಖರಸವನರಿದು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮನವಿಲ್ಲ ಬಸವಯ್ಯಂಗೆ, ತನುವಿಲ್ಲ ಬಸವಯ್ಯಂಗೆ, ನೆನಹಿನ ತನುಮನ ನಷ್ಟವಾದಬಳಿಕ, ಸಂಗಯ್ಯನಲ್ಲಿ ಬಸವಯ್ಯನ ರೂಪು ನಿರೂಪಾದಬಳಿಕ.
--------------
ನೀಲಮ್ಮ