ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು. ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು. ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು. ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ. ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಬಸವಾ ಬಸವಾ ಎಂಬ ಶಬ್ದವಡಗಿತ್ತು. ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು. ಬಸವನ ಕಾಯವಳಿದು ನಿರಾಕುಳವಾಗಲು ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ.
--------------
ನೀಲಮ್ಮ
ಬುದ್ಧಿಯನಳಿದು ನಿರ್ಬುದ್ಧಿವಂತಳಸಂಗದಿಂದ ನಾನು ಸುಖವ ಕಂಡೆನೆಂದು ನುಡಿದನೆಂದೆ ಬಸವಾ. ಬಸವನ ಹಂಗುಹರಿದು ಆನು ಸಂಗಯ್ಯನಲ್ಲಿ ಸುಖಿಯಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು, ಆ ಬೆಳಗಿನೊಳಗೆ ಬೆಳೆದ ಶಿಶುವಾನಯ್ಯಾ. ಕಳೆಯರಿಯದೆ ಬೆಳೆದೆನು, ತಿಳುಹಿಲ್ಲದೆ ನಿಂದೆನು. ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು.
--------------
ನೀಲಮ್ಮ
ಬಸವಯ್ಯಾ ಬಸವಯ್ಯಾ ಹುಯ್ಯಲಿಲ್ಲದ ಹುಲ್ಲೆಯಾದೆಯಾ ? ಬಸವಯ್ಯಾ ಬಸವಯ್ಯಾ ಕಾಯವಿಲ್ಲದ ದೇಹಿಯಾದೆಯಾ ? ಬಸವಯ್ಯಾ ಬಸವಯ್ಯಾ ಕರ್ಮವಿರಹಿತನಾದೆಯಾ ? ಸಂಗಯ್ಯನಲ್ಲಿ ನಿರ್ಮಳಮೂರ್ತಿ ಬಸವಯ್ಯಾ.
--------------
ನೀಲಮ್ಮ
ಬಸವನರಿವು ನಿರಾಧಾರವಾಯಿತ್ತು. ಬಸವನ ಮಾಟ ನಿರ್ಮಾಟವಾಯಿತ್ತು. ಬಸವನಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು. ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ.
--------------
ನೀಲಮ್ಮ
ಬ್ರಹ್ಮದ ಮುಂದೆ ಒಂದು ಬ್ರಹ್ಮದ ಕುರುಹ ಕಂಡೆ ಆ ಬ್ರಹ್ಮಕ್ಕೆ ನೆಲೆಯ ಸುಕೃತವ ಕಂಡೆ ನೆಲೆಯನರಿದು ನಿರುಪಮಾಕಾರಳಾದೆ ನಾನು ಸಂಗಯ್ಯ
--------------
ನೀಲಮ್ಮ
ಬಸವನ ಹೆಸರಳಿಯಿತ್ತು, ಬಸವನ ಕುರುಹಳಿಯಿತ್ತು, ಬಸವನ ಭಾವವಳಿಯಿತ್ತು, ಬಸವನಮೂರ್ತಿಯ ಕರ್ಮವ ಹರಿದು ಆನು ನಿಃಕರ್ಮಿಯಾದೆನಯ್ಯಾ. ನಿಃಕರ್ಮಿಯಾದ ಕಾರಣ ಅರಿವನರಿದು ಪ್ರಣವಮೂರ್ತಿಯ ತಿಳಿದು ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಬ್ರಹ್ಮದ ನೆಮ್ಮುಗೆಯನಳಿದೆ ಭಾವದ ಸೂತಕವ ಕಳೆದೆ ಎನಗೆ ಹಿತವರಿಲ್ಲದೆ ನಾನಳಿದೆ. ಏನಯ್ಯ ಏನಯ್ಯವೆಂಬ ಶಬ್ದವಿಂದಿಂಗೆ ಬಯಲೆ ಪರಿಣಾಮದ ಸುಖಬ್ರಹ್ಮದಲ್ಲಿಯಡಕವೆ ಎನಗೆ ? ಹುಟ್ಟಿಲ್ಲ ಹೊಂದಿಲ್ಲದ ಮೂರ್ತಿಯಾದೆನೆ. ಸಂಗಯ್ಯ, ಬಸವನ ಕೂಡಿ ಎನ್ನ ಕಾಯವ ನಾನಳಿದೆನೆ.
--------------
ನೀಲಮ್ಮ
ಬಸವಣ್ಣನೆ ಗುರುವೆಂದು ಭಾವಿಸಲಾಗಿ, ಎನಗೆ ಬಸವಣ್ಣನೆ ಗುರುವಾದನಯ್ಯಾ. ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ, ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ. ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ, ಎನಗೆ ಪ್ರಭುದೇವರೆ ಜಂಗಮವಾದನಯ್ಯಾ. ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ, ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ. ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ, ಇಹಃಪಗೆಯಾಂಡರೆ ಧನವಾದನಯ್ಯಾ. ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ.
--------------
ನೀಲಮ್ಮ
ಬಹಿರಂಗದಾರೋಗಣೆಯ ರುಚಿಯನರಿಯಬಾರದು ಏನು ಕಾರಣವೋ ಲಿಂಗಯ್ಯ ? ಅಂತರಂಗದಾರೋಹಣೆಯ ಮಹಂತನೇ ಬಲ್ಲನೋ ಲಿಂಗಯ್ಯ. ಅರಿದು ಮರದವಂ ವಿರೋಧನೆ ? ಸಜ್ಜನಕ್ಕೆ ಉಪಸಾಕ್ಷಿಯುಂಟೇ ಲಿಂಗಯ್ಯಾ ? ಅರುಹು ಸೋಂಕಿದ ಬಳಿಕ ನೋಡಲಿಲ್ಲ ಕೂಡಲಿಲ್ಲ ಸಂಗಯ್ಯನ.
--------------
ನೀಲಮ್ಮ
ಬ್ರಹ್ಮವ ಕೂಡಲು ಆ ಬ್ರಹ್ಮವನರಿದು ಸುಯ್ಯನೆ ಕಂಡು ಸುಖವನರಿಯಲು ಹೇಳಲಿಲ್ಲ ಕೇಳಲಿಲ್ಲ. ಎರಡರ ಸಂಗ ಪರಿಪೂರ್ಣವಾಗಿ ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಬಸವಾ, ಹಂಗನಳಿದೆ ನಾ ನಿಮ್ಮ ಬಸವಾ. ನಿಸ್ಸಂಗಿಯಾನಾದೆನಯ್ಯಾ ಬಸವಾ. ಮುಖ ವಿಮುಖವಾಯಿತ್ತು. ಬಸವನಿರವನರಿದು ಬಯಲಾನುಭಾವದಿಂದ ಮಾತಿನ ಮುಖವನರಿದು, ಬಸವನ ಬಯಲವಿಚಾರವ ತಿಳಿದು ಭ್ರಮೆಯನಳಿದು ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ