ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರಮನ ಹಂಗು, ಪ್ರಾಣದ ಸಂಗ ಉಂಟೆಂದೆನಲಿಲ್ಲ ಬಸವಾ. ಪರಶಿವನ ವಿಲಾಸದಲ್ಲಿರಲೊಂದುದಿನ ಬಸವಾ ಎಂಬ ಮೂರಕ್ಷರವ ಕಂಡೆ. ಬಸವಾ ಎಂಬ ಮೂರಕ್ಷರವ ಕಂಡು, ಪ್ರಾಣಲಿಂಗಸಂಬಂಧಿಯಾದೆನು ನಾನು ಬಸವಾ. ಆ ಪ್ರಣವದ ಹೊಳಹನರಿಯಹೋದಡೆ, ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ. ಸಂಗಯ್ಯಾ, ಸ್ವಯಲಿಂಗಸಂಬಂಧಿಯಾನಾದೆನು.
--------------
ನೀಲಮ್ಮ
ಪ್ರಾಣವಿಲ್ಲದ ಹೆಣ್ಣು ನಾನಾಗಿರಲು, ಆ ಪ್ರಾಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು. ಎಲ್ಲವನಳಿದು ಎಲ್ಲವ ತಿಳಿದು ಎಲ್ಲಾ ವಸ್ತುವ ಕಂಡು ನಿರ್ಲೇಪಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ, ತಾವು ಪ್ರಸಾದಿಗಳಾದ ಪರಿಯೆಂತಯ್ಯ ? ಪರಿಪೂರ್ಣದ ನೆಲೆಯ ತಿಳಿದು ಪರಂಜ್ಯೋತಿಯ ಅನುಭವವನರಿಯದನ್ನಕ್ಕ ತಾವು ಪ್ರಸಾದಿಗಳಾದ ಪರಿಯೆಂತಯ್ಯ ? ಪರಮಸುಖದ ಅನುಭವವನರಿದು ಇತರೇತರ ಮಾರ್ಗವ ಕಾಣದೆ ಬಯಲಕೂಡಿದಾತ ನಮ್ಮ ಬಸವನೆ ಪ್ರಸಾದಿಯಲ್ಲದೆ ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಗದಯ್ಯ ಸಂಗಯ್ಯ
--------------
ನೀಲಮ್ಮ
ಪ್ರಣವದ ಹೆಸರಿಲ್ಲ ಬಸವಂಗೆ. ಪ್ರಣವದ ಕುರುಹಿಲ್ಲ ಬಸವಂಗೆ. ಪ್ರಣವದ ನೆಲೆಯಿಲ್ಲ ಬಸವಂಗೆ. ಪ್ರಣವದ ರೂಪಿಲ್ಲ ಬಸವಂಗೆ. ಪ್ರಣವವನೋದಿ ಮೊದಲಿಲ್ಲ ಬಸವಂಗೆ ಪ್ರಣವಕ್ಕೆ ಅಪ್ರಮಾಣನಾದ ನಮ್ಮ ಬಸವನು ಸಂಗಯ್ಯಾ.
--------------
ನೀಲಮ್ಮ
ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು. ಮನಯೋಗವ ಕಂಡು ತನುಯೋಗ ಬಳಲಿತ್ತು. ಈ ತ್ರಿವಿಧವೂ ಬಳಲಿದ ಬಳಲಿಕೆಯನರಿಯದೆ ಮರಹು ನಷ್ಟವಾಯಿತ್ತಯ್ಯ, ಸಂಗಯ್ಯನ ಗುರುಬಸವ ನೀನಡಗಿದ ಬಳಿಕ.
--------------
ನೀಲಮ್ಮ
ಪ್ರಣವಾಕ್ಷರವ ಕಂಡು ಪ್ರಣವರೂಪನರಿದೆನಯ್ಯ ಪ್ರಣವದ ಆಯತವ ತಿಳಿದು ಹೊರೆಯಳಿದುಳಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮದರುಹು ಮುನ್ನವೆಯಿಲ್ಲ. ಪರವಶದನುಭಾವವ ಕಂಡು ಅನುಭವಸುಖಿಯಾದೆನಯ್ಯ, ಆನು ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಪ್ರಾಣದ ಹಂಗೆಮಗಿಲ್ಲ, ಪ್ರಸಾದದ ಹಂಗೆಮಗಿಲ್ಲ, ಪರಿಣಾಮದ ಹಂಗೆಮಗಿಲ್ಲ, ಈ ಕಾಯದ ಹಂಗೆಮಗೆ ಮುನ್ನವೆಯಿಲ್ಲ. ಇಹ ಪರದ ಹಂಗು ಎಮಗೆ ಮುನ್ನವೆಯಿಲ್ಲ. ಸಂಗಯ್ಯ, ನೀನಿಲ್ಲದ ಕಾರಣ ನಾ ಮುನ್ನವೆಯಿಲ್ಲ.
--------------
ನೀಲಮ್ಮ
ಪಾರ್ವತಿಯ ರೂಪಕಂಡು ಪರಶಿವನಸಂಗ ನಿಸ್ಸಂಗವಾಗಿ, ತಾಯಿಮಗನಂಗದಿಂದ ತನುವಳಿದು ನಿರಾಭಾರರೂಪವನೆಯ್ದಿ, ಬಸವನ ಅನುಭವದಿಂದ ವಿವರವ ಕಂಡು ವಿಚಾರಪತ್ನಿಯಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಪಯಣವಿಲ್ಲದೆ ಗಮನವ ಕಂಡವರುಂಟೆ ? ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ ? ಹೊಲನಿಲ್ಲದೆ ಫಲವನುಂಡವರುಂಟೆ ? ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ ? ಅರಸಿಯಿಲ್ಲದೆ ಅರಸಾದವರುಂಟೆ ? ಸಂಗಯ್ಯ, ಮುಖವಿಲ್ಲದ ಪ್ರಸಾದವನುಂಡವರುಂಟೆ ?
--------------
ನೀಲಮ್ಮ