ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟವನು ಅಷ್ಟಮದಲ್ಲಿ ಕಂಡು, ಕಾಮದ ಕಣ್ಣ ಕಿತ್ತು, ಕರ್ಮದ ಕಾಲ ಮುರಿದು, ಬಯಕೆಯ ಮುದ್ರಿಸಿ, ಸಂಗಯ್ಯನಲ್ಲಿ ಇಷ್ಟವನು ಅಷ್ಟಮದಲ್ಲಿಯೇ ನಿಲಿಸಿದಾತ ಬಸವಯ್ಯನು.
--------------
ನೀಲಮ್ಮ
ಇಬ್ಬರು ನಾವು ಒಂದೆಡೆಯನುಂಡೆವು. ಉಂಬ ಊಟದಲ್ಲಿ ತೃಪ್ತಿಯ ತಳದು ತನು ಸೋಜಿಗವಾಯಿತ್ತಯ್ಯ. ಮನ ಮಗ್ನವನೈದಿ ಮಹಾಲಿಂಗದತ್ತ ಶುದ್ಭಿ ನಿಃಶುದ್ಧಿಯಾಯಿತ್ತಯ್ಯ. ಅಡಗಿದೆನಡಗಿದೆನತ್ತತ್ತಲೆ ನಾನು. ಉಡುಗಿದೆನೀ ಕಾಯವ. ಉಭಯದ ಸಂಗವ ಹರಿದು ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಇರವಿಲ್ಲದ ವಸ್ತುವ ಕಂಡು ಪರವಶದ ಮೂರ್ತಿಯನರಿದೆನಯ್ಯ. ಪರಬ್ರಹ್ಮದ ಕಲ್ಯಾಣದಲ್ಲಿ ಪರಮಶಿವತತ್ತ್ವವ ಕಂಡೆನಯ್ಯ. ಪರಕಾಯ ಪ್ರವೇಶಿಯಾಗಿ ಪರತರಸುಖವನರಿದು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಇಷ್ಟದ ಹಂಗಿಲ್ಲವೆನಗೆ ಶಿವಬಸವ ಶಿವಬಸವ. ಪ್ರಾಣನಾಸ್ತಿ ಪ್ರಸಾದನಾಸ್ತಿ, ಶಿವಬಸವ ಶಿವಬಸವ. ಪರಶಿವತತ್ವನಾಸ್ತಿ ಸಂಗಯ್ಯಾ.
--------------
ನೀಲಮ್ಮ
ಇರವರಿದು ಪರವ ಮರದೆ. ಆ ಪರವನರಿದು ಪರಬ್ರಹ್ಮವ ಕಂಡೆನಯ್ಯ. ಆ ಪರಬ್ರಹ್ಮವ ಸುಯಿದಾನವ ಮಾಡಿ ಸುಖವ ಪಡೆದೆನಯ್ಯ ಸಂಗಯ್ಯ.
--------------
ನೀಲಮ್ಮ
ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು. ಸರ್ಪನ ಶಿರ ಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯಾ. ನಾವಲ್ಲಿದ್ದಡೇನು, ನಾವಿಲ್ಲಿದ್ದಡೇನು ? ನಮ್ಮ ನಮ್ಮ ಸಂಸರ್ಗದಲ್ಲಿ ನಿರುಪಮಾಕಾರಮೂರ್ತಿಗಳಾಗಿ ನಿರವಯವನೈದಿ ನಿಜಸುಖಿಗಳಾದೆವು. ಬಸವನಲ್ಲಿ ಎಮಗೆ ತೆರಪಿಲ್ಲವಯ್ಯಾ, ಅಪ್ಪಣ್ಣಾ, ಭಾವಶೂನ್ಯಳು ನಾನು ಸಂಗಯ್ಯಾ.
--------------
ನೀಲಮ್ಮ