ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಯದಾನವರತ ಬಸವಾ. ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ
--------------
ನೀಲಮ್ಮ
ಸರ್ವಾಂಗಶುದ್ಧವಾಗಿ ಲಿಂಗದೇಹಿಯಾನಾದೆನು. ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡೆದೆನು. ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಸಂಗವಪ್ಪ ಬಸವಾ, ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ. ಅಪ್ರತಿಮ ಅನುಪಮ ಬಸವಾ, ಅನಾದಿಸ್ವಭಾವವಾದನಯ್ಯಾ. ಸಂಗಯ್ಯಾ, ನಿಮ್ಮ ಬಸವ ಎನ್ನಲ್ಲಿ ಅಡಗಿದನು.
--------------
ನೀಲಮ್ಮ
ಸುವೀರವಾದಡಾಗಲಿ ಸಮಯಾಚಾರವಾದಡಾಗಲಿ ಸಂಗಪ್ರಸಾದ ನಿಸ್ಸಂಗವಾಗಿ ಸಮಯಾನಂದದೊಳಗೆ ನಿಂದು ಪರಿಣಾಮಿಯಾನಾದೆನು. ಪರಿಣಾಮವಡಗಿ ಪ್ರಭೆಯನಳಿದು ಮುಕ್ತಿಯಕಂಡು ಮುಖವಡಗಿ ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಸ್ಥಾನಮಾನವಿಲ್ಲದೆ ಶರಣರ ಹಂಗ ಹರಿದೆ. ಶರಣರ ಹಂಗ ಹರಿದು ಶಿವಸೂತ್ರಿಕಳಾದೆ ನಾನು. ಶಿವಸೂತ್ರಿಕಳಾಗಿ ಮುಖ ವಿನೆಯಾಪರತತ್ವವನೈದಿ ನಾನು ಅನುಭಾವಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಸಮಯಾಚಾರವಡಗಿದ ಬಸವಾ, ಸಂಗ ನಿಸ್ಸಂಗವಾದ ಬಸವಾ, ಶಬ್ದವಡಗಿದ ಬಸವಾ, ಶೂನ್ಯವಳಿದ ಬಸವಾ, ಪ್ರಸಾದ ಹಿಂಗಿದ ಬಸವಾ, ಪ್ರಸನ್ನಮೂರ್ತಿಯ ಕಂಡ ಬಸವಾ. ಪ್ರಭೆಯಳಿದ ಬಸವಾ, ಪ್ರಸನ್ನರೂಪ ಬಸವಾ, ಕಾಯವನಳಿದನಯ್ಯಾ ಸಂಗಯ್ಯನ ಗುರುಬಸವ.
--------------
ನೀಲಮ್ಮ
ಸಂಗ ನಿಸ್ಸಂಗವಾಯಿತ್ತೆನಗೆ ನಿಸ್ಸಂಗ ಸಂಗವಾಯಿತ್ತೆನಗೆ ಸಂಗ ನಿಸ್ಸಂಗದಲ್ಲಿ ನಿಂದು ನಿರೂಢ ರೂಢಿಸಲು ವಸ್ತು ಸಂಚಲವನಳಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಸಂಗಯ್ಯ ಸಂಗಯ್ಯ ನಿರಾಕಾರವೇನಯ್ಯ ? ಲಿಂಗಾಕಾರ ನಿರಾಕಾರ ಒಡಲು ಅಂಗ ಲಿಂಗ ಸುಯಿದಾನವಾಯಿತ್ತಯ್ಯ. ಎನ್ನ ಸುಯಿದಾನ ನಿರವಯವಯ್ಯ ಸಂಗಯ್ಯ.
--------------
ನೀಲಮ್ಮ
ಸ್ವಯಸಮರಸದ ಇರವನಂಗವಿಸಿ ತತ್ತ್ವವಡಗಿ ನಿಃಶೂನ್ಯವ ತಿಳಿದು ನಿಃಶೂನ್ಯ ಶಬ್ದವ ಕಂಡು ನಿಃಶಬ್ದ ಶಬ್ದವಾಗಿ ಶಬುದಾಚಾರವನರಿದೆನಯ್ಯ ಅರಿವ ಮರೆದು ಕುರುಹಳಿದು ವಿಚಾರ ಮನನಷ್ಟವ ಮಾಡಿದೆನಯ್ಯ. ನಷ್ಟದ ಮಾತನೊಂದು ರೂಪಮಾಡಿ ಆ ರೂಪು ಉರಿಯುಂಡಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಸಂಗನಕೂಟಕ್ಕೆ ತೆರಹಿಲ್ಲ. ಆ ಸಂಗನಕೂಟಕ್ಕೆ ತೆರಹಿಲ್ಲದ ಕಾರಣ ಬಸವನಭಕ್ತಿಗೆ ನೆಲೆಯಿಲ್ಲವಯ್ಯಾ. ಆನಂದಪ್ರಸಾದ ಅನಿಮಿಷಪ್ರಸಾದವನುಂಡು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ