ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದೃಢವಿಡಿದ ಭಕ್ತಿಗೆ ಸಮಯಾಚಾರವೇತಕ್ಕಯ್ಯಾ ? ಆ ದೃಢದ ಭಕ್ತಿಯನರಿಯಲು ಆ ದೃಢದ ಮೂರುತಿಯಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ದಾಯದಲ್ಲಿ ಹುಟ್ಟಿದ ಧ್ವನಿ ಆ ದಾಯದಲ್ಲಿ ಹೋಯಿತ್ತು. ಆ ದಾಯ ನಿರಾಕಾರವಾಗಿ ಸಂಗ ಸಂಯೋಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ದ್ವಯಲಿಂಗವೆಂಬರು; ದ್ವಯಲಿಂಗವಿಲ್ಲದವಳೆಂದರಿಯರು. ಪ್ರಸಾದಿಯೆಂದೆಂಬರೆನ್ನ; ಪ್ರಸಾದದ ಹಂಗಿಲ್ಲದವಳೆಂದರಿಯರೆನ್ನ. ಗುರುವಚನ ರಚನೆಯನರಿದು ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ