ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿರ ಭಾಳ ಕರ್ಣಂಗಳ ಗುಣವಿಲ್ಲ. ಶಿರ ಸುವರ್ಣದ ಕಳಸ, ಭಾಳ ಭಾಳಾಕ್ಷನರಮನೆ, ಕರ್ಣ ಕರುಣಾಳುವಿನ ಲೇಖನ. ಕಾಯವಳಿದ ಬಳಿಕ ಭ್ರಮೆಯಿಲ್ಲ. ಪರಶಿವನಲ್ಲಿ ಸೂತ್ರಧಾರಿಯಾದೆನಯ್ಯ ನಾನು ಎಲ್ಲವನರಿದು ಭಕ್ತಿಪದಾರ್ಥವನುಂಡು ಬದುಕಿದೆನಯ್ಯ ಸಂಗಯ್ಯ, ಬಸವ ಬಯಲಾಗಲು.
--------------
ನೀಲಮ್ಮ
ಶಿವತತ್ವವ ಕಾಣದ ಮುನ್ನ ಅನುಭವತತ್ವವ ಕಾಣಲಾಯಿತ್ತಯ್ಯಾ ಬಸವಾ. ಆನು ಅನುಭವಶೀಲವನರಿದು ಮುಕ್ತ್ಯಂಗನೆಯಾದೆನಯ್ಯಾ ಬಸವಾ. ಆನು ಮುಕ್ತ್ಯಂಗನೆಯಾಗಿ ನಿಜದಲ್ಲಿ ನಿಲಲು, ಬಸವನ ಕುರುಹು ಕಾಣಬಂದಿತ್ತು. ಆ ಬಸವನ ಕುರುಹ ತಿಳಿದು ಇಷ್ಟಮೂರ್ತಿಯ ನಿಷ್ಠೆಯನರಿವೆನಯ್ಯಾ ಸಂಗಯ್ಯಾ.
--------------
ನೀಲಮ್ಮ