ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ ಸಂಗ ನಿಸ್ಸಂಗವಿಲ್ಲವಯ್ಯ, ಸಂಗಯ್ಯ ನಿಮ್ಮ ಧರ್ಮದಿಂದ.
--------------
ನೀಲಮ್ಮ
ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ. ಆ ಯತಿಗಳು ಅತಿ ವೀರ ಸಂಬಂಧಿಗಳಾಗಿರಲು ವೀರತತ್ವದ ನೆಲೆಯೊಂದೊಂದು ಸಂಗವನೈದಿ ಮುಖವಿಕಸಿತವಾಯಿತ್ತು. ಅಪ್ಪಣ್ಣ ತಂದ ಅಪ್ರತಿಮ ಶಿವಾಚಾರ ನೆಲೆಯಾಗಿರಲು ಆನು ಶಿವ ಶುಭವಂತಳಾದೆನಯ್ಯಾ. ಸಂಗಯ್ಯನಲ್ಲಿ ಬಸವನ ಭ್ರಮೆ ನಮಗೇಕಯ್ಯಾ.
--------------
ನೀಲಮ್ಮ