ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಯ ಸುಖ ವಿಸುಖವಿಲ್ಲ. ಜಯ ವಿಜಯವಾಯಿತ್ತು. ಅಪ್ರತಿಮನ ಅರುಹ ತಿಳಿದು, ಆ ಅಪ್ರತಿಮನ ಇರವ ತಿಳಿದು, ಅಲ್ಲದ ಅನುಭಾವಕ್ಕೆ ಅಲ್ಲದ ವಿವರವ ಕಂಡು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಜ್ಞಾನವಿಲ್ಲದ ಕ್ರೀಯ ಮಾಡಿದಲ್ಲಿ ಫಲವೇನಯ್ಯ ? ಆ ಜ್ಞಾನವು ಕ್ರೀಯನು ಸಂಬಂಧಿಸಲು ಸಂಬಂಧ ಸ್ವಯವಾಯಿತ್ತಯ್ಯ. ಅಪ್ರಮಾಣದ ಪ್ರಕಾಶವ ಕಂಡು ಅರುವನರಿದು ತಿಳಿಯಲು ಸಂಗಯ್ಯನಲ್ಲಿ ಪ್ರಸಾದಿಯಾದೆನಯ್ಯ.
--------------
ನೀಲಮ್ಮ
ಜನನ ಮರಣವಳಿದು, ಜಲ್ಮದೊಪ್ಪವ ಕಳೆದು, ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ, ಮನೋವಿಲಾಸದ ಹಂಗ ಹರಿದು, ಅಂಗ ಲಿಂಗ ನಿಜವು ಮೂರ್ತಿಯಾಗಿ ಹೊಳೆಯಲು ಸಂಗ ಸಂಬಂಧ ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ.
--------------
ನೀಲಮ್ಮ