ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕ್ರಮವನರಿಯದೆ ಪೂಜೆಯ ಮಾಡಹೋದರೆ, ಕ್ರಮದಲ್ಲಿಯೆ ಸಂದಿತ್ತು ಶಿವಲಿಂಗದಲ್ಲಿಯೆ ಸಂದಿತ್ತು. ಆ ಪೂಜೆಯ ಕ್ರಮವನಳಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಕಾಯವಿಲ್ಲದೆ ಕಾಯಕ್ಕೆ ಕಲ್ಪಿತದ ಸಯದಾನವ ಕೂಡಲಿಕ್ಕಲು ಆಯದ ಖಂಡವಯ್ಯ, ಕಾಯವಿಲ್ಲದೆ ಹೋದ ಬಯಲನುಂಬ ಪ್ರಾಣಿಗೆ ಬಸವನ ಹಂಗೆನಗುಂಟೆಯಯ್ಯ ? ಏತರಲ್ಲಿಯೂ ರೂಪಿಲ್ಲದ ಕಾರಣ ಸಂಗಯ್ಯ, ನಾನು ನಿಮ್ಮ ಹೆಸರಿಲ್ಲದ ಮಗಳು.
--------------
ನೀಲಮ್ಮ
ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ. ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ. ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.
--------------
ನೀಲಮ್ಮ
ಕುಲವಳಿದ ಹೆಣ್ಣ ಕಣ್ಣ ಬಯಲ ಕಂಡು ಕುಲವಡಗಿ ಸಂಗಸ್ವಯರೂಪಾಯಿತ್ತಯ್ಯ. ಪ್ರಭೆಯರಿದು ಪ್ರಸನ್ನರೂಪವ ಕಂಡು ಪ್ರಕಾಶಮೂರ್ತಿಯಾದನಯ್ಯ. ಪ್ರಣಮಾಕ್ಷರ ಕಾಯರೂಪು ನಿರೂಪಾಯಿತ್ತಯ್ಯಾ. ಅಪ್ರಮಾಣವಧಿಕಸ್ಥಲ ಸಂಬಂಧವಯ್ಯ ಸಂಗಯ್ಯ.
--------------
ನೀಲಮ್ಮ
ಕರಣಂಗಳ ಹಂಗ ಹರಿದು ಕಾಮದ ಸೀಮೆಯ ಹರಿದು ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ, ಕಾಲಕಲ್ಪಿತವರ್ಜಿತವಾದೆ ಬಸವಾ. ನಯನುಡಿಯಿಲ್ಲದ ಬಸವಾ. ನೀ ನಿಃಪತಿಯಾದೆಯಾ ಸಂಗಯ್ಯನ ಗುರುಬಸವಾ.
--------------
ನೀಲಮ್ಮ
ಕರಣಂಗಳ ಹಂಗಹರಿದು, ಕರಣಂಗಳ ಮುಖವನಳಿದು, ಶರಣರ ಪರಿಣಾಮದಲ್ಲಿ ಮುಕ್ತಿಯನರಿದೆನಯ್ಯಾ. ಬಸವನ ಕುರುಹ ಕಂಡು ಪ್ರಸನ್ನೆಯಾದೆನಯ್ಯಾ. ಪ್ರಸನ್ನಪರಿಣಾಮವಿಡಿದು ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಕಾಯವಿಲ್ಲದೆ ಪುಷ್ಪಕವ ಕಂಡ ನಮ್ಮ ಬಸವಯ್ಯನು. ನಮ್ಮ ಬಸವಯ್ಯನ ನೆಲೆಮಾಡ ಕರುಮಾಡವಾಯಿತ್ತು. ನಮ್ಮ ಬಸವಯ್ಯ ಹೂವಿನ ರಥವೇರಿದ. ನಮ್ಮ ಬಸವಯ್ಯ ಸಂಗಯ್ಯನಾದ. ಬಸವನ ರೂಪು ತದ್ರೂಪವಾಯಿತ್ತು.
--------------
ನೀಲಮ್ಮ
ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ. ಕಾಮ ನಿಃಕಾಮವಾಗಿ ಬಸವನ ಹೆಸರಲ್ಲಿ ಬಲವಂತರ ಕಂಡೆ. ಬಲವಂತರ ಬಲುಹ ಕಂಡು ಬಲುಹನಳಿದು, ಬಸವನಲ್ಲಿ ನಿರಾಲಂಬಿಯಾದೆ ನಾನು. ನಿರಾಕುಳದ ಹಂಗ ಹರಿದು ನಾನು ಸುಖಿಯಾದೆನಯ್ಯಾ, ಸಂಗಯ್ಯಾ, ಬಸವನಲ್ಲಿ.
--------------
ನೀಲಮ್ಮ
ಕಾಯದ ಹಂಗ ಹರಿದು, ಕಲ್ಪಿತದ ಗುಣವ ನಷ್ಟವಮಾಡಿ, ಮನವಿಲ್ಲದೆ ಆ ಮನಕ್ಕೆ ವಿವೇಕತೃಪ್ತಿಯನರಿಯಲು ವಿಶಿಷ್ಟದನುಜ್ಞೆಯಾಯಿತ್ತಯ್ಯಾ. ಸಂಗಯ್ಯನಲ್ಲಿ ಬಸವನಡಗಲು ಎನ್ನ ಕಾಯವೆ ತೃಣರೂಪವಯ್ಯಾ.
--------------
ನೀಲಮ್ಮ
ಕಾಮದ ಹಂಗಿಗನಲ್ಲ ಶರಣ ಮೋಹದ ಇಚ್ಫೆಯವನಲ್ಲ ಶರಣ ಉಭಯದ ಸಂಗದವನಲ್ಲ ಶರಣ ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ. ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ.
--------------
ನೀಲಮ್ಮ
ಕಾಯವಿಲ್ಲದೆ ಪ್ರಾಣವಿರದು, ಪ್ರಾಣವಿಲ್ಲದೆ ಕಾಯವಿರದು. ಆ ಕಾಯ ಪ್ರಾಣಕ್ಕೆ ಮೂಲಿಗನಾದ ಬಸವ. ಬಸವನಿಲ್ಲದೆ ಭಾವ ನೆಲೆಗೊಳ್ಳದು. ಭಕ್ತಿ ಸಂಗಸಂಯೋಗವಾದರೆ ಬಸವನಲ್ಲಿ ಬಯಲನವಲಂಬಿಸಿದೆ ನಾನು. ಸಂಗಯ್ಯಾ, ರೂಪಿಲ್ಲದ ಬಹುರೂಪನಾದ ಬಸವಯ್ಯನು.
--------------
ನೀಲಮ್ಮ
ಕಾಮವನಳಿದ ಹೆಣ್ಣಲ್ಲ ನಾನು, ಕಾಮ ಉಂಟೆನಗೆ. ಕಾಯ ಸಂಸಾರವಳಿಯಿತ್ತೆಂಬ ಕಾಮ ಸೀಮೆ ನಿಸ್ಸೀಮೆಯಳಿದು ಕಲ್ಪಿತವ ಕಂಡುಳಿದು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಕಲಿಯುಗದಲ್ಲಿ ಹುಟ್ಟಿ ಆ ಕಲಿಯುಗದಲ್ಲಿ ಬೆಳೆದೆನಯ್ಯ. ಕೃತಯುಗದಲ್ಲಿ ಹುಟ್ಟಿ ಆ ಕೃತಯುಗದಲ್ಲಿ ಬೆಳೆದೆನಯ್ಯ. ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೆ ಬೆಳೆದೆನಯ್ಯ. ತ್ರೇತಾಯುಗದಲ್ಲಿ ಹುಟ್ಟಿ ಆ ತ್ರೇತಾಯುಗದಲ್ಲಿಯೆ ಬೆಳೆದೆನಯ್ಯ. ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ. ನಾನೇತರಲ್ಲಿಯೂ ಹೊಂದಿದವಳಲ್ಲ. ಅಜಾತನ ಕಲ್ಪಿತ ಸಂಬಂಧವಾಗಲು ಆನು ನಿಮ್ಮೈಕ್ಯದಲ್ಲಿ ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ಕೋಪದ ತಾಪದ ಸಂಗವ ಕಳೆದು ವಿರೂಪ ನಿರೂಪವಾಯಿತ್ತಯ್ಯಾ. ನಿರಾಲಂಬ ನಿರಾಭಾರಿಯಾಗಿರಲು ಆನು ಅನುವರಿದು ಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೆಯ್ದುವೆನಯ್ಯಾ. ಸಂಗಯ್ಯಾ, ಬಸವನರೂಪವಡಗಿತೆನ್ನಲ್ಲಿ.
--------------
ನೀಲಮ್ಮ
ಕಾವಲಕಾದಿದ್ದವರು ಕಾವಲಮೀರಿ ಎನ್ನ ಸಂಗವನೆ ಮಾಡಿದರು ಬಸವಯ್ಯಾ. ಎನ್ನ ಸಂಗವ ಮಾಡಿದವರ ಎನ್ನಯ್ಯ ಬಸವಯ್ಯ ಕಂಡು, ಎನ್ನ ತನುವಿನಲ್ಲಿಯೆ ಅಡಗಿದನಯ್ಯಾ. ಸಂಗಯ್ಯಾ, ಸ್ವಯಲಿಂಗಿಯಾನಾದೆನಯ್ಯಾ.
--------------
ನೀಲಮ್ಮ
ಕಲ್ಲಮಾಲೆಯ ಕಡಿದಾತ ಬಸವಯ್ಯನು. ಕಾಲನ ಗೆಲಿದಾತ ಬಸವಯ್ಯನು. ಎಲ್ಲವ ಮರೆದಾತ ಬಸವಯ್ಯನು. ಜ್ಞಾನವನರಿದಾತ ಬಸವಯ್ಯನು. ಸಂಗಯ್ಯನಲ್ಲಿ ಬೆರೆದು ನಿಃಪತಿಯಾದಾತ ನಮ್ಮ ಬಸವಯ್ಯನು
--------------
ನೀಲಮ್ಮ
ಕಾಮಿತಸುಖವ ಕಂಗೊಳಿಸಿದ ಗುರುವೆ, ಕಲ್ಪಿತವ ನಷ್ಟವ ಮಾಡಿದ ಗುರುವೆ, ಎನಲಿಲ್ಲದ ಮೂರ್ತಿಯೆ ಎತ್ತಲಡಗಿದೆಯಯ್ಯಾ ಗುರುವೆ ? ಸುಖದುಃಖವನೊಂದು ರೂಪಮಾಡಿದ ಗುರುವೆ, ಎತ್ತಲಡಗಿದೆಯಯ್ಯಾ, ಸಂಗಯ್ಯನ ಗುರುಬಸವಾ ?
--------------
ನೀಲಮ್ಮ