ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮೃತವಳಿದು ಕಾಯವುಳ್ಳವಳಾದೆ. ಅಮೃತವಿಲ್ಲದ ರಸವನುಂಡು ಅಮೃತಕಾಯಳಾದೆ. ವಿಭ್ರಮದ ಸೂಚನೆಯ ಹಂಗಿಲ್ಲದೆ ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ. ಘನವ ಕಂಡೆ ಕಂಡೆ ಮನದಲ್ಲಿ ನಾನು ಬಸವಾ. ತನುವಿಲ್ಲವೆನಗೆ ಬಸವಾ, ಸಂಗಯ್ಯಾ, ಬಸವನಳಿದಬಳಿಕ.
--------------
ನೀಲಮ್ಮ
ಮಾಟಕೂಟ ಸಮಯಾಚಾರ ಸದ್ಭಕ್ತಿಯ ನೆಲೆಯ ನಮ್ಮ ಬಸವಯ್ಯನಲ್ಲದೆ ಮತ್ತಾರೂ ಅರಿಯರು. ಅರಿವಿನ ಕುರುಹನಾತ್ಮದಲ್ಲಿ ನಿಲಿಸಿ, ಶಿವಕೂಟಸಮಾಧಿಯ ಕಂಡು ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಮಡದಿ ಎನಲಾಗದು ಬಸವಂಗೆ ಎನ್ನನು. ಪುರುಷನೆನಲಾಗದು ಬಸವನ ಎನಗೆ. ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು, ಬಸವನೆನ್ನ ಶಿಶುವಾದನು. ಪ್ರಮ ಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ.
--------------
ನೀಲಮ್ಮ
ಮೂರ್ತಿಯನರಿದು ಮುಖ ವಿಕಸಿತವಾಯಿತ್ತಯ್ಯಾ. ಬಸವಮೂರ್ತಿಯ ತನುವ ಕಂಡು ಬಸವನಲ್ಲಿ ಸ್ವಯಲಿಂಗಿಯಾದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಮೂವರಳಿದು, ಮೂರ್ತಿಯ ಕಳದು, ಅನಿಮಿಷಯೋಗ ವಿಚಾರವನನುಭವಿಸಿ, ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ ಅಡಗಿ ನಿಂದೆನಯ್ಯ ಸಂಗಯ್ಯ.
--------------
ನೀಲಮ್ಮ
ಮಡದಿ ಎಂಬ ಶಬ್ದ ನಿಶ್ಶಬ್ದವಾದಡೆ ನಾನೀಗ ನಿಜಸುಖಿ ಬಸವಾ. ಬಸವನಂಗವ ಕಂಡಡೆ ನಾನು ಪರಿಣಾಮಿ, ಬಸವನ ಹರುಷವ ಕಂಡರಿದಡೆ ನಾನೈಕ್ಯಸಂಪನ್ನೆಯಯ್ಯಾ ಸಂಗಯ್ಯಾ.
--------------
ನೀಲಮ್ಮ
ಮಾಯದ ಮನದ ಕರ್ಮದ ಹಂಗಹರಿದು ಅನುಭವವ ನನ್ನಲ್ಲಿಯಡಗಿಸಿ, ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯ. ನಮಸ್ಕಾರವನಳಿದು ನಮೋ ವಿಶ್ವರೂಪಳಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಮೂರ್ತಿಯ ಸಂಗ ಮೂರಡಿಗೊಂಡಿತ್ತು. ಆ ಮೂರ್ತಿಯ ಸಂಗ ನಿಸ್ಸಂಗವಾಯಿತ್ತು. ಹೇಳಬಾರದ ಘನವ ಆರಿಗೂ ಹೇಳದ ವಸ್ತುವ ಕಂಡು ಹೆಸರಿಲ್ಲದೆ ನಿಂದೆ ನಾನು. ಪ್ರಣವಾಕ್ಷರದ ಕುರುಹ ಕಂಡು ಪರವಶಳಾದೆನಯ್ಯ. ಏಕಾಕ್ಷರದ ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಮುಖದಂತರದ ಬಾಗಿಲ ಮುಂದೆ ಸುಖ ತೃಪ್ತಿಯ ನಿಜದವತಾರವನರಿದು ನಿರ್ಮಲಾಕಾರವ ತಿಳಿದೆನಯ್ಯ. ತಿಳುಹಿನ ತಿಳುಹ ತಿಳಿದು ಬೆಳವಿಗೆಯ ಸುಖವನರಿದು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮಾತಿನ ಹಂಗಿಲ್ಲದವಳಾದೆ ನಾನು. ಅಜಾತನ ಒಲುಮೆಯಿಲ್ಲದವಳಾದೆ ನಾನು. ಪ್ರಣವದ ಹಂಗಿಲ್ಲದವಳಾದೆ ನಾನು. ಪ್ರಸಾದದ ಕುರುಹಿಲ್ಲದವಳಾದೆ ನಾನು. ಪ್ರಯಾಣದ ಗತಿಯನಳಿದು ಪರಂಜ್ಯೋತಿ ವಸ್ತುವ ಕಂಡು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮನದ ಮಧ್ಯದಮೂರ್ತಿಯನರಿದು ಆ ಮೂರ್ತಿಯ ಇರವನರಿದು ಶಿವಸೂತ್ರಿಯಾದೆನಯ್ಯ. ಶಿವಸುಖಸಂಪದವ ಕಂಡು ಪ್ರಣವಾಕಾರವ ನಿರವಯವ ಮಾಡಿಯಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮಾತಿಲ್ಲದವನ ಕೂಡೆ ಮಾತನಾಡಹೋದಡೆ, ಎನ್ನ ಮಾತಿನ ಪ್ರಸಂಗವ ನುಡಿಯಲೊಲ್ಲ ಬಸವಯ್ಯನು. ಮಾತಿನ ಹಂಗ ಹರಿದು, ಆ ಪ್ರಸಂಗದ ಸಂಗವ ಕೆಡಿಸಿ, ಪರವಶನಾಗಿ ನಿಲಲು ಬಸವಯ್ಯನು, ಸಂಗಯ್ಯನಲ್ಲಿ ಹೆಸರಿಲ್ಲದ ವೃಕ್ಷವನರಿದ ಬಸವಯ್ಯನು.
--------------
ನೀಲಮ್ಮ
ಮುಯ್ಯೂರ ಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು, ಮೂವರು ದಿಬ್ಬಣಿಗರು ಬಂದು ಮುಖಕನ್ನಡಿಯ ತೋರಿ ಮುದ್ದುಗೈಯಲು ಆನು ಮೂಲಪ್ರಣವಸ್ವರೂಪಳಾದೆನು. ಹಿತಪತಿಸುತನ್ಯಾಯದಂತೆ ಅಪ್ರತಿಮನ ಸುಖಕ್ಕೆ ಮನವನಿಂಬುಗೊಟ್ಟು ಆನು ಉರಿಯುಂಡ ಕರ್ಪೂರದಂತೆ ತೆರಹಿಲ್ಲದಿರ್ದೆನಯ್ಯಾ ಸಂಗಯ್ಯ ನಿಮ್ಮಲ್ಲಿ, ಬಸವಯ್ಯನೆನ್ನಲ್ಲಿ ಅಡಗಲು.
--------------
ನೀಲಮ್ಮ
ಮಾಹೇಶ್ವರರ ಸಂಗವಳಿದು ಮಹಾಲಿಂಗವ ಕಂಡೆನಯ್ಯ. ಮಾಹೇಶ್ವರರಪ್ರತಿಮ ಪರಮಯೋಗಿಯರ ಅನುವನರಿಯದೆ ಆನು ಮರದಿರ್ದ ಮರಹು ವಿವೇಕಕಾಯವನಳಿದು ವಿವಿಧಾಚಾರವನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ, ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು. ಕಾಮಿತ ನಿಃಕಾಮಿತವ ಕಂಡು ಬಸವನನರಿಯದೆ ಕೆಟ್ಟ ಪಾಪಿಯಾನು. ಶಬ್ದದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ ಸ್ವಯಲಿಂಗಸಂಬಂಧವೆನಗೆಂತಯ್ಯ ?
--------------
ನೀಲಮ್ಮ
ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ ಮುಕ್ತಿಯಿಲ್ಲವಯ್ಯಾ ಬಸವಯ್ಯಾ ಎನಗೆ. ಸಂಗ ನಿಸ್ಸಂಗದವಳಾದ ಕಾರಣ ಎನಗೆ ಸಂಗದ ಸಂಗವಿಲ್ಲವಯ್ಯಾ ಬಸವಯ್ಯಾ. ನನಗೇತರ ಪರಿಣಾಮದ ಕೂಟಪ್ರಭೆ ? ವಿರೂಪಾಕ್ಷಸಂಗವನನುಭವಿಸಿದೆನಯ್ಯಾ ಬಸವಯ್ಯಾ. ಸಂಗಯ್ಯಾ, ಬಸವ ವರಪ್ರಣವಸ್ವರೂಪನಾಯಿತ್ತು.
--------------
ನೀಲಮ್ಮ
ಮಾತನಳಿದು ಮನವಳಿದು ಭೀತಿಯ ಕಳದು ಪ್ರಸಂಗವ ಕಳದು ಪ್ರಸಾದವನಳಿದು ಪ್ರಸನ್ನ ಹಿಂಗಿ ಪ್ರಭೆಯ ಕಂಡು
--------------
ನೀಲಮ್ಮ
ಮನವಿಲ್ಲದ ಮಾತನಾಡಹೋದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಮನ ಘನವಾಯಿತ್ತೆಂದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಹೆಸರಿಲ್ಲ ರೂಪೆಂದರೆ ಆ ಮಾತು ಸೊಗಸದೆಮ್ಮಯ್ಯಂಗೆ, ಸಂಗಯ್ಯ ಬಸವನೆಂದರೆ[ರೆ] [ಆ ಮಾತು] ಸೊಗಸದೆಮ್ಮಯ್ಯಂಗೆ.
--------------
ನೀಲಮ್ಮ
ಮಧ್ಯಕಲ್ಪ ನಾಸ್ತಿಯಾಯಿತ್ತೆ ಬಸವಾ ? ಪ್ರಾಣ ಪ್ರಸಾದದಲ್ಲಿ ಅಡಗಿತ್ತೆ ಬಸವಾ ? ಭಕ್ತಿ ಬಯಲಾಯಿತ್ತೆ ಬಸವಾ ? ಭಾವ ನಿರ್ಭಾವವಾಯಿತ್ತೆ ಬಸವಾ ? ಕಲ್ಪಿತಗುಣ ನಾಸ್ತಿಯಾಯಿತ್ತೆ ಬಸವಾ ? ಮನೋಮುಕ್ತವಾಯಿತ್ತೆ ಸಂಗಯ್ಯನ ಗುರುಬಸವಾ ?
--------------
ನೀಲಮ್ಮ
ಮುಖವಿಲ್ಲದ ಕನ್ನಡಿಯ ನೋಡಲು, ಆ ಕನ್ನಡಿಯ ರೂಪಿನೊಳಗೆ ಸಂಗಯ್ಯನ ರೂಪು ಕಾಣಬಂದಿತ್ತು. ಆ ರೂಪನರಿದು ಪರಿಣಾಮವಕಂಡು ಬದುಕಿದೆನಯ್ಯಾ. ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು. ಗಮನದಸಂಗ ನಿಸ್ಸಂಗವಾಗಿ ಎನಗಿಹಪರವಿಲ್ಲವಯ್ಯಾ ಸಂಗಯ್ಯಾ
--------------
ನೀಲಮ್ಮ
ಮೂಲ ಪ್ರಣವ ಆ ಮೂಲ ಪ್ರಣವದ ಮೂರುತಿ ಅನಾದಿ ಪ್ರಣವ; ಆ ಪ್ರಣವದ ಸುಖವನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಮನವಿಲ್ಲದೆ ತನುವ ಕುಡಹೋದರೆ ಆ ತನು ಮನದಲ್ಲಿ ನಿಂದಿತ್ತು, ಮನತನುವಿನ ಸಂಗವಡಗಲು ಉಭಯ ಸಮಾಧಿ ಸಾಧ್ಯವಾಯಿತ್ತಯ್ಯ. ಹಿರಿಯತನದ ರೂಪ ಕಾಣಲು ಪರಿಪರಿಯ ಭ್ರಮೆಯಡಗಿತ್ತಯ್ಯ. ಇಷ್ಟ ಪ್ರಾಣದ ಭಾವದ ಸೂತಕ ಹಿಂಗಲು ಆನು ಸಂಗಯ್ಯನಲ್ಲಿ ಬಸವನನುಭವಿಯಾದೆನಯ್ಯ.
--------------
ನೀಲಮ್ಮ
ಮಾತಿನ ಹಂಗೇತಕ್ಕೆ, ಮನವೇಕಾಂತದಲ್ಲಿ ನಿಂದ ಬಳಿಕ, ಬಸವಯ್ಯಾ ? ಅಜಾತನ ಒಲುಮೆ ಏತಕ್ಕೆ, ಅರ್ಪಿತದ ಹಂಗಹರಿದಬಳಿಕ, ಬಸವಯ್ಯಾ ? ಎನಗೆ ಸಮಯಾಚಾರವಿನ್ನೇಕೆ, ಭಕ್ತಿಭಾವ ನಷ್ಟವಾದಬಳಿಕ, ಬಸವಯ್ಯಾ ? ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ, ಸಂಗಯ್ಯಾ, ಬಸವ ಕುರುಹಿಲ್ಲದಮೂರ್ತಿಯಾದ ಕಾರಣ.
--------------
ನೀಲಮ್ಮ
ಮನದ ಹಂದೆ ಏತಕ್ಕೆ ? ನೀ ಧೀರನೆಂಬೆ. ನಿನ್ನ ಧೀರವ ನಾ ಕಂಡೆ; ನಾನು ಧೀರಳೆಂಬುದ ನೀನೇ ಬಲ್ಲೆಯಯ್ಯ ಸಂಗಯ್ಯ.
--------------
ನೀಲಮ್ಮ

ಇನ್ನಷ್ಟು ...