ಅಥವಾ
(34) (18) (6) (0) (0) (1) (0) (0) (52) (18) (2) (2) (0) (0) ಅಂ (9) ಅಃ (9) (18) (0) (0) (0) (0) (0) (0) (3) (0) (0) (0) (1) (0) (0) (0) (8) (0) (3) (1) (24) (10) (0) (13) (4) (41) (2) (1) (0) (4) (0) (2) (0) (10) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಿಳುವಿನ ಸಂಗವಿನ್ನೇತಕಯ್ಯ ಎನಗೆ. ಆ ತಿಳುಹಿನ ಪ್ರಾಣ ನಿರಾಧಾರದಲ್ಲಿ ನಿಂದ ಬಳಿಕ, ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ, ಅಂಗದ ಸಂಗಿಗಳಲ್ಲಿ ಆಚಾರದ ಕುರುಹಿನವಳಲ್ಲ. ಅಕ್ಷಯದ ಸಮಾಧಾನದಲ್ಲಿ ನಿಂದ ಬಳಿಕ ಪರಿಣಾಮಿಯಾನಯ್ಯ ಸಂಗಯ್ಯ.
--------------
ನೀಲಮ್ಮ
ತತ್ವದ ಮನ ತಾಯಿಗಳ ಬಿಡಾರವೆಂದೆನಿಸುವುದು ಬಸವಾ. ಮೂವತ್ತಾರು, ಇನ್ನೂರ ಹದಿನಾರು ಬಿಡಾರದಲ್ಲಿ ನಿಂದು, ಬಯಲೊಂದುಗೂಡಲು ಬಸವಯ್ಯಾ, ಭಕ್ತಿಸ್ಥಲ ಶುಭಸೂಚನೆಯಾಯಿತ್ತು ಬಸವನಲ್ಲಿ ಎನಗೆ. ಸಂಗಯ್ಯನಲ್ಲಿ ಬಸವನಂಗ ನಿರಂಗವಾದ ಬಳಿಕ ಆನೆಂಬುದಿಲ್ಲವಯ್ಯಾ ಬಸವಯ್ಯಾ ನಿಮ್ಮಲ್ಲಿ.
--------------
ನೀಲಮ್ಮ
ತತ್ವದ ಹಂಗೇನೋ ಶರಣ ಬಸವಂಗೆ ? ಭಕ್ತಿಯ ಹಂಗೇನೋ ಶರಣ ಬಸವಂಗೆ ? ಮುಕ್ತಿಯ ಹಂಗೇನೋ ಶರಣ ಬಸವಂಗೆ ? ಇಹಪರ ಸಂಸಿದ್ಭಿಯಿಲ್ಲವಯ್ಯಾ ಸಂಗಯ್ಯಾ, ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ.
--------------
ನೀಲಮ್ಮ
ತ್ರಿವಿಧ ಪ್ರಸಾದವಿಲ್ಲ, ತ್ರಿವಿಧಾಕಾರವಿಲ್ಲ, ತ್ರಿವಿಧ ನಲವಿಲ್ಲ, ತ್ರಿಕಾರುಣ ರೂಪಿನಲ್ಲಿ ಪರಿಣಾಮವನಯಿದಲು ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ತನುವಿಲ್ಲ ಬಸವಯ್ಯಂಗೆ, ಮನವಿಲ್ಲ ಬಸವಯ್ಯಂಗೆ, ನೆನಹಿನ ತನುಮನ ನಷ್ಟವಾದ ಬಳಿಕ, ಸಂಗಯ್ಯನಲ್ಲಿ ಬಸವಯ್ಯನ ರೂಪು ನಿರೂಪವಾದ ಬಳಿಕ.
--------------
ನೀಲಮ್ಮ
ತಾಯಿಲ್ಲವೆನಗೆ ಬಸವ ಬಸವಾ. ಭಕ್ತಿಯಿಲ್ಲವೆನಗೆ ಸಂಗ ಸಂಗಾ, ಪ್ರತಿರೂಪು ನಿಜರೂಪವಯ್ಯಾ ಸಂಗಯ್ಯಾ.
--------------
ನೀಲಮ್ಮ
ತ್ರಿವಿಧದ ಮಾಟವಿಲ್ಲವೆನಗೆ ಬಸವಾ. ತ್ರಿವಿಧದ ಪ್ರಸಾದವಿಲ್ಲವೆನಗೆ ಬಸವಾ. ತ್ರಿವಿಧದ ಕುರುಹಿಲ್ಲವೆನಗೆ ಬಸವಾ. ತ್ರಿವಿಧದ ಗೊತ್ತಿಲ್ಲವೆನಗೆ ಬಸವಾ. ಸಂಗಯ್ಯನಲ್ಲಿ ಬಸವ ಬಯಲಾದಬಳಿಕ.
--------------
ನೀಲಮ್ಮ
ತನುವಾವುದಯ್ಯಾ ಬಸವಾ ? ಮನವಾವುದಯ್ಯಾ ಬಸವಾ ? ನೆನಹಿನ ಪರಿಣಾಮವಾವುದಯ್ಯಾ ಬಸವಾ ? ಉಭಯದಗುಣ ನಷ್ಟವಾದ ಬಳಿಕ, ಪ್ರಸನ್ನಸುಖಭಾವವುಂಟೆ ಸಂಗಯ್ಯನ ಗುರುಬಸವಾ ?
--------------
ನೀಲಮ್ಮ