ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಈಶ್ವರಮೂರ್ತಿಯ ಕರಕಮಲಕ್ಕೆ ತಂದಲ್ಲಿ, ಕಣ್ಮನ ಮೂರ್ತಿಧ್ಯಾನ ಹೆರೆಹಿಂಗದಕ್ಕರಿಂದ ಭಾವ ಭ್ರಮಿಸದೆ, ಚಿತ್ತ ಸಂಚರಿಸದೆ ಮನ ವಚನ ಕಾಯದಲ್ಲಿ ಬ್ಥಿನ್ನ ಭಾವವಿಲ್ಲದೆ ಪೂಜಿಸುವ ಕೈಯೂ ತಾನಾಗಿ, ಅರಿದ ಮನವೂ ತಾನಾಗಿ, ಹೊತ್ತಿಪ್ಪ ಅಂಗದ ನೆಲೆಯೂ ತಾನಾಗಿ ಹೆರೆಹಿಂಗದೆ ಪೂಜೆಯ ಮಾಡುತಿರ್ಪ ಆತನ ಅಂಗವೆ ಲಿಂಗ, ಆತನಿದ್ದುದೆ ಅವಿಮುಕ್ತಿ ಕ್ಷೇತ್ರ. ಇಂತಪ್ಪ ಮಹಾಮಹಿಮ ನಾರಾಯಣಪ್ರಿಯ ರಾಮನಾಥ ತಾನು ತಾನೆ.
--------------
ಗುಪ್ತ ಮಂಚಣ್ಣ
ಈ ಜಗದೊಳಗಣ ಆಟವ ನೋಡಿದರೆ, ಎನಗೆ ಹಗರಣವಾಗಿ ಕಾಣಿಸುತ್ತಿದೆ. ಅದೇನು ಕಾರಣವೆಂದರೆ, ಹಿಂದಣ ಮುಕ್ತಿಯನರಿಯರು, ಮುಂದಣ ಮುಕ್ತಿಯನರಿಯರು. ಬಂದ ಬಂಬ ಭವದಲ್ಲಿ ಮುಳುಗುತ್ತಲಿದ್ದಾರೆ. ನಾನಿದರಂದವನರಿದು, ದ್ವಂದ್ವವ ಹರಿದು, ಜಗದ ನಿಂದೆ ಸ್ತುತಿಯ ಸಮಗಂಡು, ಹಿಂದ ಹರಿದು ಮುಂದನರಿದು, ಸದಮಳಾನಂದದಲ್ಲಿ ನಿಂದು, ಸಚ್ಚಿದಾನಂದದಲ್ಲಿ ಐಕ್ಯವಾಗಿ, ಸತ್ಯಶರಣರ ಪಾದದಲ್ಲಿ ನಿರ್ಮುಕ್ತನಾದೆನಯ್ಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈ ಹೃದಯಾಂತರಸ್ಥಿತವಾದ ಬಿಂದ್ವಾಕಾಶವು ಅವುದಾನೊಂದುಂಟು, ಅಲ್ಲಿ ಸರ್ವಕ್ಕೆಯು ಆಧಾರಸ್ವರೂಪವಾದ, ಸಮಸ್ತಕ್ಕೆಯು ಪ್ರೇರಕನಾದ, ಸಮಸ್ತಕ್ಕೆಯೂ ಕರ್ತೃವಾದ ಶಿವನು ಪ್ರಕಾಶಿಸುತ್ತಿಹನಯ್ಯಾ, ಶ್ರೀಬಸವಲಿಂಗ.
--------------
ಶ್ರೀಬಸವಲಿಂಗ
ಈ ಲಿಂಗಾರ್ಪಿತ ಷಡ್ವಿಧ ಪ್ರಸಾದಂಗಳಂ ಯಥಾಕ್ರಮದಿಂ ಪೂರ್ತಿಗೊಳಿಸಿ, ತತ್ಪ್ರಸಾದ ಸ್ವರೂಪನಾಗಿರ್ಪಂ ನೀನೆಯಯ್ಯಾ, ಪರಮ ಶಿವಲಿಂಗಯ್ಯಾ, ಪರಮುಕ್ತ ಹೃದಯಾಬ್ಜ ಶಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಈಶ್ವರ ನುಡಿದ ನುಡಿಯನರಿದೆಹೆವೆಂದು, ಬೀಸರವೋದರು ಅಣ್ಣಗಳೆಲ್ಲಾ. ಪ್ರಾಣಲಿಂಗವೆಂಬರಯ್ಯಾ. ಮನ ಘನವೆಂದರಿಯದೆ ಮರುಳುಗೊಂಡರು. ಈಶ್ವರನನರಿದಡೆ ತಾ ಶಿವನು. ಗುಹೇಶ್ವರನೆಂಬುದು ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಈಗರಸುವ ನುಡಿವಿರಹಿತ ಂಗವ ನಿಲುಕಡೆ ಬೇರೆ ಉಂಟೆ? ಮುಕುಳದಲ್ಲಿ ಪರಿಮಳ ತೋರುವ ಕಾಲಕ್ಕೆ ತೋರದಿಪ್ಪುದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ, ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!
--------------
ಅಂಬಿಗರ ಚೌಡಯ್ಯ
ಈಶ್ವರರೂಪ ತಾಳಿ ಜಗ ಜೀವಾಳರುಗಳ ಬಾಗಿಲಲ್ಲಿ ಬೆಳುಗರೆವನ್ನಬರ ಹೋಯಿತ್ತು, ವೇಷವಾಟದಲ್ಲಿ . ಈ ಆಸೆಯ ಬಿಟ್ಟು, ಈಶನ ರೂಪ ತಾಳಿದ ವಸ್ತು, ಆತ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಈ ಆರು ಸಹಿತ ಆಚಾರ, ಆಚಾರಸಹಿತ ಗುರು, ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ, ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಂಗಳು ತಾನಾಗಬಲ್ಲಡೆ, ಕೂಡಲಚೆನ್ನಸಂಗಾ ಲಿಂಗೈಕ್ಯವು.
--------------
ಚನ್ನಬಸವಣ್ಣ
ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು ಕೂನಪಾಂಡ್ಯನ ವಾದವ ಗೆದ್ದರು ನೋಡಾ. ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯನು ಮಹಾಬಯಲನೈದಿದನು ನೋಡಾ. ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣ ತಂದೆಗಳು ನಿಜಲಿಂಗೈಕ್ಯರಾದರು ನೋಡಾ. ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು ಓಂ ನಮಃಶಿವಾಯ, ಓಂ ನಮಃಶಿವಾಯ, ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದಡೆ: ಪೃಥ್ವಿ ಪೃಥ್ವಿಯನೆ ಕೂಡಿ, ಅಪ್ಪು ಅಪ್ಪುವನೆ ಕೂಡಿ, ಅಗ್ನಿ ಅಗ್ನಿಯನೆ ಕೂಡಿ, ವಾಯು ವಾಯುವನೆ ಕೂಡಿ, ಆಕಾಶ ಆಕಾಶವನೆ ಕೂಡಿ, ಪಂಚತತ್ವವೆಲ್ಲ ಹಂಚುಹುರಿಯಾಗಿ, ಹಿಂಚುಮುಂಚು ಮಾಡುವ ಮನದ ಸಂಚಲವಡಗಿ, ಕರ್ಮದ ಗೊಂಚಲ ನಿಂದ ನಿಶ್ಚಿಂತ ನಿಜೈಕ್ಯಂಗೆ ನಮೋ ನಮೋ ಎನುತಿರ್ದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ, ಧಾರುಣಿಯ ಮೇಲೆ ತಂದಿರಿಸಿದವರಾರೊ ? ಸೋಮ ಸೂರ್ಯರ ಹಿಡಿದೆಳೆತಂದು, ವಾರಿಧಿಯ ತಡೆಯಲ್ಲಿ ಓಲೆಗಳೆದವರಾರೊ ? ಊರಿಲ್ಲದ ಊರಿನಲ್ಲಿ[ಹೆ]ಮ್ಮಾರಿ ಹೊಕ್ಕುದ ಕಂಡು ಆರೈಯ ಹೋಗಿ [ನೀ] ನಾನಿಲ್ಲ ಗುಹೇಶ್ವರಾ:
--------------
ಅಲ್ಲಮಪ್ರಭುದೇವರು
ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ, ನವಸ್ಥಲ, ತ್ರಿವಿಧಸ್ಥಲ, ಚತುಗ್ರ್ರಾಮಸ್ಥಲ. ಪಂಚವರ್ಣ, ದಶವರ್ಣ, ಸಪ್ತವರ್ಣ, ಪಡುವರ್ಣ, ಏಕವರ್ಣ, ದ್ವಿವರ್ಣಸ್ಥಲಂಗಳಲ್ಲಿ ಮುಖವಿಲ್ಲ ಮುಖವಿಲ್ಲ. ಪವಿತ್ರಾಂಕಿತಕ್ಕೆ ನೋಡಿ ಮಾಡುವ ಆರಂಭವನೇನೂ ಐದುದಿಲ್ಲ. ಬಸವನೆ ವಿಸ್ತಾರವೆನಗೆ. ಬಸವನೆ ನುಡಿ ಎನಗೆ, ಬಸವನೆ ನಡೆ ಎನಗೆ. ಬಸವನೆ ಗತಿ ಎನಗೆ, ಬಸವನೆ ಮತಿ ಎನಗೆ. ಬಸವನೆ ಇಹವೆನಗೆ, ಬಸವನೆ ಪರವೆನಗೆ. ಬಸವನಲ್ಲದೆ ಕಾಣೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಈ ಧರೆಯ ಮೇಲೆ ಹುಟ್ಟಿ ಕಲ್ಲದೈವಂಗಳಿಗೆ ಎರಗಿದರೆ ಭವ ಹಿಂಗುವುದೇ ? ಹಿಂಗದು ನೋಡಾ. ಅದೇನು ಕಾರಣವೆಂದಡೆ: ಮನದ ಗುಣಾದಿಗಳ ಶುದ್ಧಮಾಡಲರಿಯದೆ ನಿಶ್ಚಿಂತ ನಿರ್ಮಲ ಲಿಂಗದಲ್ಲಿ ಕೂಡಲರಿಯದೆ ಹಲವು ದೈವಂಗಳಿಗೆ ಅಡ್ಡಡ್ಡ ಬಿದ್ದು ಎದೆ ದಡ್ಡಾಗಿ, ಹಣೆ ದಡ್ಡಾಗಿ, ಭವದ ಕುರಿಗಳಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಈಶ್ವರನಂಗವ ತಾಳಿದ ಮತ್ತೆ ಪರ[ಕೆ ದೇಗುಲವಾಗಿರಬೇಕು] ತ್ರಿವಿಧದ ಆಶೆಗೆ ಮನ ಪಸರಿಸದಂತಿರಬೇಕು, ಆತನ ಗುಣ. ನಿರ್ಜಾತನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...
-->