ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿಗಳಾರುಮಂದಿ ಬರಸಿಡಿಲಂತೆ ಎರಗಿ ಎರಗಿ ಕಾಡುತಿವೆ. ಸಿಡಿಲಬ್ಬರ ಅರಗಳಿಗೆಯಾದರೆ, ಅರಿಷಡುವರ್ಗದಬ್ಬರ ವೇಳೆವೇಳೆಗೆ, ಬಗೆಯ ನೆನದು ಕಾಡುತಿವೆ. ಅರಿಗಳನುರುವಿ ಪರಮಪದ[ದ]ಲಿಪ್ಪ ಶರಣರ ದರುಶನ ಸ್ಪರುಶನದಿಂದಲೆನ್ನ ಬದುಕಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ನದ ಗೊಡವಿಲ್ಲದಾತಂಗೆ ಆರಂಭದ ಗೊಡವಿಯುಂಟೇ ? ಖೇಚರ ಪವನಸಾಧಕಂಗೆ ಭೂಚರದಲಡಿಯಿಡುವ ಬಯಕೆಯುಂಟೇ ? ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ ಭಯವುಂಟೇನಯ್ಯಾ ? ನಿರ್ಮಾಯಕಂಗೆ ಮಾಯದ ಹಂಗುಂಟೇ ? ನಿವ್ರ್ಯಸನಿಗೆ ವ್ಯಸನದ ಹಂಗುಂಟೇ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದಾತಂಗೆ ಅನ್ಯದೈವದ ಹಂಗುಂಟೇ ?
--------------
ಹೇಮಗಲ್ಲ ಹಂಪ
ಅಂಗಗುಣಸಂಸಾರಿಗೆ ಲಿಂಗಗುಣಸಂಸಾರವುಂಟೇನಯ್ಯಾ ? ಲಿಂಗಗುಣಸಂಸಾರಿಗೆ ಅಂಗಗುಣಸಂಸಾರವುಂಟೇನಯ್ಯಾ ? ಈ ಲಿಂಗ ಅಂಗವೆಂಬ ಉಭಯ ಮಧ್ಯೆ ಜ್ಞಾನಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮೋಳಿಗೆಯ್ಯಗಳು ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಜ್ಞಾನ ಕುಕರ್ಮದಿಂದ ಮುಸುಕಿದ ಕತ್ತಲೆಗೆ ಸುಜ್ಞಾನಜ್ಯೋತಿ ಎರೆಯಲ್ಪಟ್ಟ ಪರಮಗುರುವೆಂದಿತ್ತು ರಹಸ್ಯ. ಸಾಕ್ಷಿ : ``ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೆ ೈ ಶ್ರೀಗುರವೇ ನಮಃ ||'' ಎಂದೆಂಬ ಗುರು. ``ಆಕಾಶೋ ಲಿಂಗಮೂಲಂ ಚ ಪೃಥ್ವೀ ತಸ್ಯಾದಿ ಪೀಠಕಂ | ಆಲಯಂ ಸರ್ವಭೂತಾನಾಂ ಲಯಂ ಚ ಲಿಂಗಮುಚ್ಯತೇ ||'' ಎಂದೆಂಬ ಲಿಂಗವು. ``ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ | ಮಕಾರಂ ರುದ್ರರೂಪಂ ಚ ತ್ರಿಮೂತ್ರ್ಯಾತ್ಮಕಜಂಗಮಃ ||'' ಎಂದೆಂಬ ಜಂಗಮವು. ``ಶ್ರಾದ್ಧಂ ಯಜ್ಞಂ ಜಪಂ ಹೋಮಂ ವೈಶ್ವದೇವಸುರಾರ್ಚನಂ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವಃ ||'' ಎಂದೆಂಬ ವಿಭೂತಿ. ``ರುದ್ರಾಕ್ಷಿಧಾರಣಂ ಸರ್ವಂ ಜಟಾಮಂಡಲಧಾರಿಣಿ | ಅಕ್ಷಮಾಲಾರ್ಪಿತಕರ ಕಮಂಡಲಕರಾನ್ವಿತಂ || ತ್ರಿಪುಂಡ್ರಾವಲಿಯುಕ್ತಾಂ | ಆಷಾಡೇನ ವಿರಾಜಿತಂ ಋಗ್ಯಜುಃಸಾಮ ರೂಪೇಣ | ಸೇವ ತಸ್ಮೆ ೈ ಸ್ವರಃ ಇತಿ | ತ್ರೈವ ಗಾಯಿತ್ರೇವ ವರಾನನೇ ||'' (?) ಎಂದೆಂಬ ವಿಭೂತಿ ರುದ್ರಾಕ್ಷಿ. ``ಜ್ಞಾನ ಪ್ರಾಣ ಬೀಜಂ ಚ ನಕಾರಂ ಚ ಆಚಾರಕಂ | ಮಕಾರಂ ಚ ಗುರೋರ್ಬೀಜಂ ಶಿಕಾರಂ ಲಿಂಗಮತ್ರ್ಯಕಂ || ವಕಾರಂ ಚ ಬೀಜಂ ಚ ಯಕಾರಂ ಪ್ರಾಸಕಂ | ಏವಂ ಬೀಜಾಕ್ಷರಂ ಜ್ಞಾತುಂ ದುರ್ಲಭಂ ಕಮಲಾನನೆ ||'' ಎಂದೆಂಬ ಷಡಕ್ಷರಿಮಂತ್ರವು. ``ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ ||'' ಎಂದೆಂಬ ಪಾದೋದಕವು. ``ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಃ | ವಿಷ್ಣು ಮುಖ್ಯಾದಿದೇವಾನಾಮಗ್ರಾಹ್ಯೋýಯಮಗೋಚರಃ ||'' ಎಂದೆಂಬ ಪ್ರಸಾದವು. ಇನಿತು ತೆರದ ಅಷ್ಟಾವರಣದ ಶ್ರುತ ದೃಷ್ಟವ ಕಂಡು ಘನವೆಂದು ನಂಬಿದಾತನೆ ಸತ್ಯಸದಾಚಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ. ಪದ :ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬು ಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟ ತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದು ಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. | 1 | ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದು ಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟು ಮರೆಯ ಕಣ್ಣ ಕಳದು ಭಲ್ಲೂಕನ ಕರದು ಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. | 2 | ಪರಮನ ಲಿಂಗಮುಖವಾಗಿ ಸತ್ಯಸಂಗ ಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿ ಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದು ಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. | 3 |
--------------
ಹೇಮಗಲ್ಲ ಹಂಪ
ಅಂಧಕ ಅಂಧಕರು ಕರವಿಡಿದರಣ್ಯದೊಳು ಹೋಗುತೊಂದು ಕೊಳ್ಳವ ಬಿದ್ದು ಚಾಲಿವರಿವಂತೆ, ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ ಅವರ ಪಾತಕಕೆ ಕಡೆಯೇನಯ್ಯಾ ! ಹೆಸರಿನ ಗುರುವಿಗೆ ಹೆಸರಿನ ಶಿಷ್ಯನಾಗಿ ಗುರು-ಶಿಷ್ಯ ಸಂಬಂಧಕ್ಕೆ ಹೋರಾಡಿ ಒಡಲಾಸೆಗೆ ಲಿಂಗವ ಮಾರಿಕೊಂಬ ಕಡುಪಾಪಿಗೆ ಗುರುತ್ವವುಂಟೇನಯ್ಯಾ ? ಗುರುತ್ವವಿಲ್ಲ. ಸಾಕ್ಷಿ :``ನಾಮಧಾರಕ ಶಿಷ್ಯಶ್ಚ ನಾಮಧಾರೀ ಗುರುಸ್ತಥಾ | ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್ ||'' ಎಂದುದಾಗಿ, ಬುದ್ಧಿಹೀನ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವ ಎದ್ದೆದ್ದಿ ತೆಗೆಯುವರು ರೌರವ ನರಕದಲ್ಲಿ ಎಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ವಾಯುವ ಬೆರಸಲು ತ್ವಗೀಂದ್ರಿಯದುತ್ಪತ್ತಿಯಯ್ಯ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದುತ್ಪತ್ತಿಯಯ್ಯ. ಅಗ್ನಿ ಪೃಥ್ವಿಯ ಬೆರಸಲು ಘ್ರಾಣೇಂದ್ರಿಯದುತ್ಪತ್ತಿಯಯ್ಯ. ಇಂತಿವು ಬುದ್ಧೀಂದ್ರಿಯಂಗಳುತ್ಪತ್ತಿ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ನ ಉದಕದ ದೆಸೆಯಿಂದ ನಿದ್ರೆ, ನಿದ್ರೆಯಿಂದ ಕಾಮ, ಕಾಮದಿಂದ ಅಜ್ಞಾನ, ಅಜ್ಞಾನದಿಂದ ಕರ್ಮ, ಕರ್ಮದಿಂದ ಮಾಯಾತಮಂಧಕ್ಕೆ ಗುರಿ. ಮಾಯಾತಮಂಧದಿಂದ ಮರಣಕ್ಕೆ ಗುರಿಮಾಡಿ ಸತ್ತು ಸತ್ತು ಹುಟ್ಟಿಸಿ, ಎನ್ನ ಭವಾರಣ್ಯದೊಳಗೆ ಕಣ್ಗಾಣದಂಧಕನಂತೆ ತಿರುವಿ ತಿರುವಿ ಕಾಡುತಿರ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ