ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಳುವ್ಯಸನಂಗಳೆಂಬ ಕಾಳುವಿಷಯಕ್ಕೆನ್ನ ಮೇಳವಿಸಿ ಕಾಡುತಿದೆ. ಅದು ಎಂತೆಂದೊಡೆ : ವಿಪಿನದೊಳು ಹೋಗುವ ಮನುಜರ ಕಣ್ಣಿಂಗೆ ಕೋಮಳದ ಹೂವಿನಂತಿದ್ದು , ಮೋಹಿಸಿ ನೆಗವಿದವರ ಹೀರುವ ಪಾಪಿಕೂಸಿನಂತೆ, ಎನ್ನ ಹೀರಿ ಹಿಪ್ಪೆಯಮಾಡಿ ಕಾಡುತಿವೆ. ಇವ ನಿರಸನವ ಮಾಡುವ ಮೋಹಿಗಳನಾರನೂ ಕಾಣೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ ! ಏನೆಂದು ಬಣ್ಣಿಸುವೆನಯ್ಯಾ ಶ್ರೀಪಂಚಾಕ್ಷರಿಯ ! ನೆನೆವಡೆನ್ನ ಮನ ಸಾಲದು, ನುಡಿವಡೆನ್ನ ಜಿಹ್ವೆ ಸಾಲದು, ಕೇಳುವಡೆನ್ನ ಕರ್ಣ ಸಾಲದು. ಮನಮುಟ್ಟಿ ನೆನೆದು ಶ್ರೀ ಪಂಚಾಕ್ಷರಿಯ, ಜಿಹ್ವೆಮುಟ್ಟಿ ಸ್ತುತಿಸಿ ಶ್ರೀಪಂಚಾಕ್ಷರಿಯ, ಕರ್ಣಮುಟ್ಟಿ ಕೇಳಿ ಶ್ರೀಪಂಚಾಕ್ಷರಿಯ ನಾನು ಅಡಿಗಡಿಗೆ ನಿತ್ಯಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏನ ಹೇಳುವೆನಯ್ಯಾ ? ಸಂಸಾರಬಂಧನದಲ್ಲಿ ಕಂದಿಕುಂದಿದೆನಯ್ಯಾ. ಅದು ಎಂತೆಂದರೆ : ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ. ಗಾಳಿಗುಲಿವ ತರಗೆಲೆಯಂತೆ, ಸಂಸಾರವೆಂಬ ಸುಂಟರಗಾಳಿ ಆಕಾಶಕ್ಕೆ ನೆಗವಿ, ಭೂಕಾಂತೆಗೆನ್ನಬಿಟ್ಟು, ಕಣ್ಣು ಬಾಯೊಳು ಹುಡಿಯಂ ಹೊಯಿದು, ಮಣ್ಣಕಾಯವ ಮಣ್ಣಿಂಗೆ ಗುರಿಮಾಡಿ ಕಾಡುತಿಪ್ಪುದೀ ಸಂಸಾರವೆಂಬ ಹೆಮ್ಮಾರಿಯ ಬಾಯಿಗೆನ್ನನಿಕ್ಕದೆ ಕಾಯೋ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏಳು ಸಮುದ್ರ ಉಕ್ಕಿ ಜಂಬೂದ್ವೀಪವ ಮುಸುಕದ ಮುನ್ನ ಧರೆಯ ಹೊತ್ತ ಸರ್ಪ[ನ] ಫಣಿ ಉಡುಗುವುದ ಕಂಡೆ. ಕೂರ್ಮ ಗಜ ಶಿರವಲುಗುವುದ ಕಂಡೆ. ನಾಗಲೋಕ ದೇವಲೋಕವನೊಂದು ಕಪ್ಪೆ ನುಂಗಿ ಏರಿಯತಡಿಯಲೊದರುವುದ ಕಂಡೆ. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏನು ಸುಕೃತದ ಫಲವೊ, ಅದೇನು ಪುಣ್ಯವೋ, ಅದೇನು ಭಾಗ್ಯವೋ, ಅದೇನು ತಪWಸಿನಘೆ ಫಲವೋ, ಅದೇನು ಕಾರಣವಾಗಿ ಗುರುಪಾದ ದೊರೆಯಿತ್ತು. ಗುರುಪಾದ ದರುಶನದಿಂದ ಕಿಂಕುರ್ವಾಣ ಭಯಭಕ್ತಿಯಿಂದಿರುತಿರೆ, ಗುರು ಕರುಣಿಸಿ ಇಷ್ಟಲಿಂಗವನೆನ್ನ ಕರಕೆ ಸೇರಿಸಿ, ಪೂರ್ವಜನ್ಮವ ಕಳೆದು ಪುನರ್ಜಾತನ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ