ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು, ಭೂಕಾರ ಭೂತ ಪಿಶಾಚಿಗಳ ಗ್ರಹಗಳ ನಿಟ್ಟೊರಸುವ ಅರಿಯೆಂದು, ತಿಕಾರ ಅಂತರಂಗದ ಒಳಹೊರಗೆ ಇಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು. ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ ಪಂಚಭೂತದ ಪೂರ್ವಗ್ರಹವ ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ. ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ ನಿಶ್ಚಿಂತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಿಕಾರದೊಳು ವಿಕಾರ ಕಪಿವಿಕಾರ. ವಿಕಾರದೊಳು ವಿಕಾರ ಸುರೆಗುಡಿದವನ ವಿಕಾರ. ವಿಕಾರದೊಳು ವಿಕಾರ ದತ್ತೂರಿಯ ಸವಿದ ವಿಕಾರ. ಇಂತೀ ಎಲ್ಲಕೆ ಗುರು ಮನೋವಿಕಾರವೆಂಬುದು. ಸುರೆ ದತ್ತೂರಿಯ ಸವಿದವನದು ಒಂದಿನಕಾದರೂ ಪರಿಹಾರವಾಗುವದು. ಮನೋವಿಕಾರದ ದತ್ತೂರಿ ಅನುದಿನ ತಲೆಹೇರಿಕೊಂಡು ಮುಳುಗಿತ್ತು. ಭೂಲೋಕದ ಯತಿ ಸಿದ್ಧ ಸಾಧ್ಯರ ಕೊಂಡು ಮುಳುಗಿತ್ತು. ದೇವಲೋಕದ ದೇವಗಣ ಅಜಹರಿಸುರರ ಜನನಮರಣವೆಂಬ ಅಣಲೊಳಗಿಕ್ಕಿತ್ತು ಮನೋವಿಕಾರ. ಮನೋವಿಕಾರದಿಂದ ತನುವಿನಕಾರ, ಮನೋವಿಕಾರದಿಂದ ಮಾಯಾಮದ. ಮನೋವಿಕಾರದಿಂದ ಪಂಚಭೂತ ಸಪ್ತಧಾತು ದಶವಾಯು ಅರಿಷಡ್ವರ್ಗ ಅಷ್ಟಮದ ಪಂಚೇಂದ್ರಿಯ, ಅಂಗದೊಳು ಚರಿಸುವ ಜೀವ ಪ್ರಾಣ ಕರಣಾದಿ ಗುಣಂಗಳೆಲ್ಲಕ್ಕೆಯು ಮನವೆ ಮುಖ್ಯ ನೋಡಾ. ಮನೋವಿಕಾರವನಳಿದು ಶಿವವಿಕಾರದೊಳು ಇಂಬುಗೊಂಡಾತ ಮೂರುಲೋಕಾರಾಧ್ಯನೆಂಬೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಾರಿಯಿಲ್ಲದ ಕೆರೆಗೆ ಹಾರೈಸಿ ಬಂದ ತುರುವಿನತೆ, ಬೂರದ ಮರಕ್ಕೆ ಹಾರೈಸಿ ಬಂದ ಗಿಣಿಹಿಂಡಿನಂತೆ, ನಳಿನವಿಲ್ಲದ ಕೊಳಕೆರಗಿದಳಿವಿಂಡಿನಂತೆ, ಮಲಹರನ ಭಕ್ತಿ ಜ್ಞಾನ ವೈರಾಗ್ಯವಿಲ್ಲದ ಅಧಮರಿಗೆ ಆಸೆಮಾಡದಿರು : ಆಸೆ ಮಾಡಿದರೆ ವ್ಯರ್ಥ. ಆಸೆಮಾಡು ಆಸೆಮಾಡು ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೆಂಬ ಧನಿಕನ.
--------------
ಹೇಮಗಲ್ಲ ಹಂಪ
ವೇದಶಾಸ್ತ್ರ ಪುರಾಣಾಗಮಂಗಳನೋದುತ್ತಿದ್ದೇವೆಂಬುತಿಪ್ಪರು, ವೇದಶಾಸ್ತ್ರ ಪುರಾಣಾಗಮ ಆವೆಂದರಿಯರು. ವೇದಶಾಸ್ತ್ರಪುರಾಣಾಗಮವನೋದಿ, ಹೊರಹೊರಗಡೆ ಹೊತ್ತುಗಳೆದು, ಒಳಗಿಪ್ಪ ಅಷ್ಟಮದವ ನಿರಸನವ ಮಾಡಲರಿಯದೆ ಕಷ್ಟಬಡುತಿಪ್ಪುದೆನ್ನಯ ಮನವು. ಲೋಕ ಆಡಿಯಾಡಿ ಕೆಟ್ಟು ಕೆಲಸಾರಿ ಹೋಗುತಿದೆ, ಸೃಷ್ಟಿ ಪ್ರತಿಪಾಲಕ ನಿಮ್ಮ ಜ್ಞಾನವ ಮರದು, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವೃಥಾ ಸತಿ ಸುತ ಪಿತ ಮಾತೆಯರ ಮದ ತಲೆಗೆ ಹತ್ತಿ, ಉಮ್ಮತ್ತದ ಕಾಯ ಸವಿದ ಕಪಿಯಂತೆ, ಹುಮ್ಮಸದಿಂದುಲಿದು, ಧರ್ಮದಾಯಗುಣವಿಲ್ಲದೆ ಕರ್ಮಕೆ ಗುರಿಯಾಗಿ ಕೆಟ್ಟರು ಹಲಬರು. ಮತ್ಸರದ ಮಾಯದ ಬಲೆಯಲ್ಲಿ ಹುಚ್ಚುಗೊಂಡಿಪ್ಪರು. ಅದು ಎಂತೆಂದೊಡೆ : ಗುರುವಿನೆಡೆಗೆ ಮತ್ಸರ, ಲಿಂಗದೆಡೆಗೆ ಮತ್ಸರ, ಜಂಗಮದೆಡೆಗೆ ಮತ್ಸರ, ಹಿರಿಯರೆಡೆಗೆ ಮತ್ಸರ ಮಾಡಿ, ಭವವೆಂಬ ಮಾರಿಯ ಅಣಲೊಳಗೆ ಸಿಕ್ಕಿದರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವನದೊಳಿಪ್ಪ ಕಪಿ ವನವನುಂಗಿ, ವನದ ತಿಳಿಗೊಳನನುಂಗಿ, ತಿಳಿಗೊಳದೊಳಗಿಪ್ಪ ಕಮಲವ ನುಂಗಿ, ಕಮಲದ ಪರಿಮಳವ ನುಂಗಿ, ವಾಯುವಿನೇಣಿಯಿಂದ ಆಕಾಶಕ್ಕೆ ಹಾರಿದುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
--------------
ಹೇಮಗಲ್ಲ ಹಂಪ
ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು ವಾಯುವಿನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಾಯು ಆಕಾಶವ ಬೆರಸಲು ಸಮಾನವಾಯುWವಿಘೆನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುWವಿಘೆನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯು[ವಿ]ನ ಜನನ. ವಾಯು ಅಪ್ಪು[ವಿನ] ಬೆರಸಿದಲ್ಲಿ ಅಪಾನವಾಯು[ವಿ]ನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯು[ವಿ]ನ ಜನನ. ಇಂತಿವು ಪಂಚವಾಯು[ವಿ]ನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತು, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವೇದಕ್ಕೆಯಾ [ಮುಖ್ಯ] ಶ್ರೀವಿಭೂತಿ, ಶಾಸ್ತ್ರಕ್ಕೆಯಾ ಮುಖ್ಯ ಶ್ರೀವಿಭೂತಿ, ಪೌರಾಣಕ್ಕೆ[ಯಾ] ಮುಖ್ಯ ಶ್ರೀವಿಭೂತಿ, ಆಗಮಕ್ಕೆಯಾ ಮುಖ್ಯ ಶ್ರೀವಿಭೂತಿ. ವೇದಾಗಮಶಾಸ್ತ್ರಪುರಾಣವನೋದುವ ವಿಪ್ರನಾದರೂ ಆಗಲಿ, ಶ್ರೀವಿಭೂತಿ ಶ್ರೀ ಪಂಚಾ[ಕ್ಷ]ರಿಯಿಲ್ಲದೆ ಓದಿದ ಓದು ವ್ಯರ್ಥ. ಶ್ರೀವಿಭೂತಿಯ ಧರಿಸಿ, ಶ್ರೀ ಪಂಚಾಕ್ಷರಿಯ ನೆನೆದು, ಏಳು ಜನ್ಮದಲ್ಲಿ ಹೊರೆಯ ಕಳೆದು, ಶಿವದೇಹಿಯಾದೆನು ನೋಡಾ. ಅದು ಎಂತೆಂದರೆ : ಸಾಕ್ಷಿ :``ನಮಃ ಶಿವಾಯೇತಿ ಮಂತ್ರಂ ಯಂ ಕರೋತಿ ತ್ರಿಪುಂಡ್ರಕಂ | ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣೇನ ವಿನಶ್ಯತಿ ||'' ಎಂದುದಾಗಿ, ಪರಮಾತ್ಮನ ಸ್ವರೂಪವುಳ್ಳ ಶ್ರೀ ವಿಭೂತಿಯ ಸರ್ವಾಂಗವೆಲ್ಲಕೆಯೂ ಉದ್ಧೂಳನವ ಮಾಡಿ ಪರಮಪದದಲ್ಲಿ ಓಲಾಡುತಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವೇದವನೋದಿ ವ್ಯಾಧಿ ಪರಿಹಾರವಾಗದು. ಶಾಸ್ತ್ರವನೋದಿ ಸಂಕಲ್ಪ ಹಿಂಗದು. ಪುರಾಣವನೋದಿ ಪೂರ್ವಕರ್ಮವ ಕಳೆಯಲರಿಯರು. ಆಗಮವನೋದಿ ಅಂಗದೊಳು ಹೊರಗಿಪ್ಪ ಅಷ್ಟಮದವ ಕಳೆಯಲರಿಯರು. ಇಂತು ವೇದಾಗಮಪುರಾಣವೆಂಬನಾದಿಯ ಮಾತ ಮುಂದಿಟ್ಟುಕೊಂಡು ನಾ ಬಲ್ಲೆನೆಂದು ಗರ್ವ ಅಹಂಕಾರಿಕೆಯೆಂಬ ಅಜ್ಞಾನಕ್ಕೆ ಗುರಿಯಾಗಿ ಕೆಟ್ಟರು ಅರುಹಿರಿಯರೆಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವ್ಯಸನವೇಳೆಂಬ, ರಸವ್ಯಸನವೇಳೆಂಬ ರಸವಿಷಯದ ಮಡುವು ದೆಸೆದೆಸೆಗೆ ಹಬ್ಬಿ, ವಸುಧೆಯರನೆಲ್ಲರ ಮಸಿಮಣ್ಣ ಮಾಡಿ ಹಸಗೆಡಿಸಿ ಕಾಡುತಿದೆ. ವ್ಯಸನವೇಳನುರುಹಿ, ಅಸಮಪದದಲ್ಲಿಪ್ಪ ನಿವ್ರ್ಯಸನWನಘೆ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ