ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗಾಸಕ್ತಂಗೆ ಅಂಗಾಸಕ್ತಿವುಂಟೇನಯ್ಯಾ ? ಜಂಗಮಾಸಕ್ತಂಗೆ ಅನ್ಯಸಂಗ ಪರಧನ ಪರಸ್ತ್ರೀಯಾರಾಸೆ ಉಂಟೇನಯ್ಯಾ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ನಿಮ್ಮಾಸೆಯೊಳು ಇಂಬುಗೊಂಡಾತಂಗೆ ಜನ್ಮ ಮೃತ್ಯುವುಂಟೇನಯ್ಯಾ ?
--------------
ಹೇಮಗಲ್ಲ ಹಂಪ
ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ. ಲಿಂಗವ ನೋಡುವ ಕಂಗಳು ಪರಮಾತ್ಮನಿದಿರಲಿ ಕಟ್ಟಿಹ ನಿಲವುಗನ್ನಡಿ ಕಾಣಿರೊ. ಲಿಂಗವ ಕೊಂಡಾಡುವನ ಜಿಹ್ವೆ ಕೈಲಾಸದಲ್ಲಿ ಸಾರುವ ಪಾರಿಗಂಟೆ ಕಾಣಿರೊ ಲಿಂಗದ ಶ್ರುತಿಯ ಕೇಳುವನ [ಕಿವಿ] ಮಾಣಿಕ ಮುತ್ತಂ ಮುಚ್ಚಿಡುವ ಕರಡಿಗೆ ಕಾಣಿರೊ. ಲಿಂಗವ ಮುಟ್ಟಿ ಪೂಜಿಸಿದವನ ಹಸ್ತ ಸುಹಸ್ತ ಕಾಣಿರೊ. ಇಂತೀ ಲಿಂಗಾಂಗಸಂಗಮರಸದಲ್ಲಿಪ್ಪ ಶರಣಂಗೆ ಅಂಗವಿಕಾರವುಂಟೇನಯ್ಯಾ ? ಭೂತ ಸೋಂಕಿದ ಮೇಲೆ ಆತ್ಮನಗುಣ ಉಂಟೇನಯ್ಯಾ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗ ಸೋಂಕಿದ ಮೇಲೆ ಅಂಗಗುಣವುಂಟೇನಯ್ಯಾ ?
--------------
ಹೇಮಗಲ್ಲ ಹಂಪ
ಲಿಂಗಕ್ಕೆರಗದೆ ಅನ್ಯದೈವಂಗಳಿಗೆರಗುವಾತನ ತಲೆ ಸುಡುಗಾಡಿನಲ್ಲುರುಳುವ ಓಡುವಿಂಗೆ ಸರಿಯೆಂಬೆ. ಲಿಂಗಪೂಜೆಯ ಮಾಡದೆ, ಅನ್ಯದೈವಂಗಳ ಪೂಜೆಯ ಮಾಡುವನ ಕರವ ಹೆಂಡವ ಜಾಲಿಸುವ ಕರವೆಂಬೆ. ಲಿಂಗದ ಪೂಜೆಗಡಿಯಿಡದೆ ಅನ್ಯಲಿಂಗಕೆ ಅಡಿಯಿಡುವನ ಕಾಲು ಇಮ್ಮನದ ಹುಳುವಿಂಗೆ ಸರಿಯೆಂಬೆನು. ಇಂತಪ್ಪ ಲಿಂಗಾಂಗಸಂಗ ಸಮರಸವನರಿಯದೆ ಭ್ರಾಂತಿಭವಿಗಳಂತೆ ಅನ್ಯಲಿಂಗಕ್ಕೆ ಹರಿವ ಜಡದೇಹಿಗಳ ಎಂತು ಶಿವಭಕ್ತಜಂಗಮವೆಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ