ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ. ದ್ವಾರವತಿಗೆ ಅಗ್ರಗಿರಿಯ ಚಂದ್ರ ಸೂರ್ಯರ ಭಯ. ಚಂದ್ರಸೂರ್ಯರಿಬ್ಬರಿಗೆ ನಡೆಗೋಟಿಯ ಭಯ. ನಡೆಗೋಟಿಗೆ ಸ್ಪರುಷನಪುರದ ಭಯ. ಇವು ನಾಲ್ಕನೂ ಮೂರುಮುಖದ ಪಕ್ಷಿ ನುಂಗಿಕೊಂಡಿಪ್ಪುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಪರಶಿವನ ಪಂಚಮುಖವೆ ಪಂಚಕಳಸವೆಂದಿಕ್ಕಿ, ಹಸೆ-ಹಂದರದ ನಡುವೆ, ಶಿವಗಣಂಗಳ ಮಧ್ಯದಲ್ಲಿ ದೀಕ್ಷವನಿತ್ತು, ದೀಕ್ಷವೆಂಬೆರಡಕ್ಷರದ ವರ್ಮವನರುಹಿದ. ದೀಕಾರವೆ ಲಿಂಗಸಂಬಂಧವೆಂದು, ಕ್ಷಕಾರವೆ ಮಲತ್ರಯಂಗಳ ಕಳೆವುದೆಂದು ಅರುಹಿದ. ಸಾಕ್ಷಿ :``ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ಶಿವದೀಕ್ಷಾಭಿಧೀಯತೇ ||'' ಎಂದುದಾಗಿ, ದೀಕ್ಷದ ವರ್ಮವನರುಹಿ, ಅರುಹೆಂಬ ಸೂತ್ರವ ಹಿಡಿಸಿ, ಮರವೆಂಬ ಮಾಯವ ಕಳೆದು, ಹಸ್ತಮಸ್ತಕ ಸಂಯೋಗ ಮಾಡಿ, ನೆತ್ತಿಯೊಳಿಹ ಪರಬ್ರಹ್ಮವಸ್ತುವ ಇಂತೆನ್ನ ಕರ ಉರ ಶಿರ ಮನ ಜ್ಞಾನದೊಳು ನೆಲೆಗೊಳಿಸಿ, ಪ್ರಣವಮಂತ್ರವ ಕರ್ಣದಲ್ಲಿ ಹೇಳಿ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ ಗುರು ಪರಮಾತ್ಮನಲ್ಲದೆ ನರನೆನಬಹುದೇ ? ಎನಲಾಗದು. ಎಂದರೆ ಕುಂಭೀ ನಾಯಕ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಸುವೆಯ ಮೇಲೆ ಸಾಗರ ಹರಿವುದ ಕಂಡೆನು. ರಾಶಿಯನೊಕ್ಕುವ ಒಕ್ಕಲಿಗ ರಾಶಿಯ ನುಂಗುವುದ ಕಂಡೆನು. ಮಾಸಿದ ಕಪ್ಪಡವ ಅಂಗಕ್ಕೆ ತೊಟ್ಟ ಅಂಗನೆ, ಮೂರುಲೋಕವ ಏಡಿಸುವುದ ಕಂಡೆನು. ಮುಂಡ ಕುಣಿಯದ ಮುನ್ನ ಲೋಕವೆಲ್ಲ ಭಂಡಾಗಿ, ಸಂಸಾರಬಂಧನರಾಗಿರುವುದ ಕಂಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸೊಂಡಿಲ್ಲದಾನೆ ಹೊಯಿವುದ ಕಂಡೆ, ಹಲ್ಲಿಲ್ಲದ ಹುಲಿ ತಿಂಬುದ ಕಂಡೆ, ವಿಷವಿಲ್ಲದ ಸರ್ಪ ಕಚ್ಚುವದ ಕಂಡೆ, ಮುಖವಿಲ್ಲದ ಸಿಂಹ ನುಂಗುವುದ ಕಂಡೆ, ಕಣ್ಣಿಲ್ಲದ ಮರೆಯಹಿಂಡು ಕವಿವುದ ಕಂಡೆ. ಕೈಕಾಲಿಲ್ಲದ ಭಲ್ಲೂಕ ಚೆಕಲಿಗುಲಿಯ ಮಾಡುವುದ ಕಂಡೆ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಸ್ಥೂಲದಲ್ಲಿಪ್ಪುದೆನ್ನಯ ಮನ, ಸೂಕ್ಷ್ಮದಲ್ಲಿಪ್ಪುದೆನ್ನಯ ಮನ, ಕಾರಣದಲ್ಲಿಪ್ಪುದೆನ್ನ ಮನ. ಅದೆಂತೆಂದರೆ : ಸ್ಥೂಲದಲ್ಲಿಪ್ಪುದ ಕಂಡು ಸೂಕ್ಷ್ಮದಲ್ಲಿ ನೆನೆದು, ಕಾರಣದಲ್ಲಿ ಹೇಳುತ್ತಿಪ್ಪುದೆನ್ನಯ ಮನ. ದಿವ್ಯಧ್ಯಾನದಂತೆ ಹಲವು ಪರಿಗಾದರೂ ರತಿಸುತಿದೆ ಎನ್ನಯ ಮನ. ಮರ್ಕಟನ ದಾಳಿಯಿಂದ ಸಾಯಸಬಡುತಿದ್ದೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸರ್ವದೇವಪಿತ ಶಂಭುವೆಂಬ ನಾಮ ಹರಗೆ ಸಲ್ಲುವುದಲ್ಲದೆ ಹರಿಗೆ ಸಲ್ವುದೆ ? ಸಲ್ಲದು. ಅದೇನು ಕಾರಣವೆಂದರೆ : ಸರ್ವದೈವ[ವ] ಹುಟ್ಟಿ[ಸ]ಬಲ್ಲ, ಕೊಲ್ಲಬಲ್ಲ, ಸರ್ವದೈವದಿಂದ ಪೂಜೆ ಪುನಸ್ಕಾರವ ಕೊಳಬಲ್ಲ ಪರಮಾತ್ಮನಿಗೆ ಕುರಿದೈವ ಸರಿಯೆನಬಹುದೆ ? ಬಾರದು. ತಾ ಸಾವದೇವರು, ನಿಮ್ಮ ವಿಷ್ಣು ಮತ್ತಾರ ಕಾಯಬಲ್ಲುದು, ಹೇಳಿರೌ ? ಹರಿ ಹತ್ತು ಪ್ರಳಯಕ್ಕೆ ಗುರಿಯಾದಲ್ಲಿ ಹರನೆ ಲಿಂಗವಾಗಿ ರಕ್ಷಣ್ಯವ ಮಾಡಿದುದು ಸಟೆಯೆನಿಪ್ಪ ಹರನ ಕಿರಿWದುಘೆ ಮಾಡಿ ಹರಿಯ ಹಿರಿದೆಂದು ನುಡಿವ ಚಾಂಡಾಲಿಯ ಬಾಯಲ್ಲಿ ಕಾದ ಸುಣ್ಣದ ಗಾರೆಯ ಹೊಯ್ಯದೆ ಬಿಡುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಂಸಾರಸುಖಕ್ಕೆ ಕಟ್ಟಿದ ಮನೆ, ಸಂಸಾರಸುಖಕ್ಕೆ ಕೊಂಡ ಹೆಣ್ಣು, ಸಂಸಾರಸುಖಕ್ಕೆ ಆದ ಮಕ್ಕಳು, ಸಂಸಾರಸುಖಕ್ಕೆ ನೆರೆದ ಬಂಧುಬಳಗ, ಸಂಸಾರಸುಖಕ್ಕೆ ಗಳಿಸಿದ ದ್ರವ್ಯ, ಸಂಸಾರಸುಖಕ್ಕೆ ಹೊಂದಿದ ಕ್ಷೇತ್ರ ಬೇಸಾಯ, ಸಂಸಾರ ಸುಖ-ದುಃಖ ಘನವಾಗಿ ಸತ್ತು ಸತ್ತು ಹುಟ್ಟುವ ಮಾನವರು ನಿಃಸಂಸಾರದಿಂದ ನಿಮ್ಮನರಿದು, ನಿಮ್ಮ ಜ್ಞಾನದೊಳಿಂಬುಗೊಂಡು, ಭವವಿರಹಿತರಾಗುವುದಿದನೇನಬಲ್ಲರಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. ?
--------------
ಹೇಮಗಲ್ಲ ಹಂಪ
ಸರ್ವರಲ್ಲಿ ಹುಸಿಯನಾಡಿದರೆ ಆಡಲಿ, ಗುರುವಿನೆಡೆಗೆ ಹುಸಿಯಿಲ್ಲದಿರಬೇಕು. ಸರ್ಪ ಕಡೆಯಲೆಲ್ಲ ಡೊಂಕಾಗಿ ಚರಿಸುತ್ತ ಹುತ್ತದೆಡೆಗೆ ಸಸಿನವಾಗಿ ಹೋದಂತೆ. ಅನ್ಯರೆಡೆಗೆ ಹುಸಿ ಠಕ್ಕು ಠೌಳಿ ಇದ್ದರೂ ಇರಲಿ, ಗುರುವಿನೆಡೆಗೆ ಹುಸಿಬೇಡ. ಕೊಟ್ಟೆ ಕೊಂಡೆನೆಂದು ನುಡಿದು ಕೊಡದೆ ವಾಚಾಳತ್ವವಾದರೆ ಬ್ರಾಹ್ಮಣನ ಕೊಂದ ಪಾಪದಷ್ಟು ಪಾಪ ನಿಮಗಂಡಲೆವವು ಕಾಣಿರೊ ! ಸಾಕ್ಷಿ :``ಯೋ ಶುದ್ಧಿ ಗೋಪಾದಪ್ರೋಕ್ತಂ ಗುರುರಂಘ್ರಿನುತಸ್ಯ ಚ | ವಾಗ್ವಿದನ್ಯಪ್ರದಾನೇನ ಬ್ರಹ್ಮಹತ್ಯಾಸಮಾಹಿತಃ (?) ||'' ಎಂದುದಾಗಿ, ಇಂತಪ್ಪ ಗುರುವಿನೆಡೆಗೆ ಹುಸಿ[ದು] ಜೀವಿಸೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಹಸ್ರಲಕ್ಷ ದ್ರವ್ಯದೊರೆದರೂ ಅದು ಸಾಲದೆಂಬುದೀ ಆಸೆಬದ್ಧವೆಂಬ ಮಾಯೆ. ಸಹಸ್ರಲಕ್ಷ ಭೂಮಿದೊರೆದರೂ ಅದು ಸಾಲದೆಂಬುದೀ ಆಸೆಬದ್ಧವೆಂಬ ಮಾಯೆ. ಅದು ಎಂತೆಂದರೆ : ಸಾಕ್ಷಿ :``ಆಶಯಾ ಬದ್ಧತೇ ಲೋಕಃ ಕರ್ಮಣಾ ಬಹುಚಿಂತಯಾ | ಆಶಾ ಚಲ ಪರಮಂ ದುಃಖಂ ನಿರಾಶಾ ಪರಮಂ ಸುಖಂ ||'' ಎಂದುದಾಗಿ, ಈ ಆಸೆ ರೋಷ ಅಮಿಷವೆಂಬ ಮಾಯಾಪಾಶದೊಳಗೆ ಸಿಲ್ಕಿ ನೊಂದೆ ಬೆಂದೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಪ್ತವ್ಯಸನವೆಂಬ ಪಾಪಿಯ ಕೂಸಿಂಗೆ ಒಪ್ಪಿಸಿಕೊಟ್ಟು ನೀನಗಲಬೇಡವೊ ಗುರುವೆ. ಪದ : ಉರಿಗೆ ಕೊಟ್ಟ ಅರಗಿನಂದದಿ, ಕಿರಾತನ ಕೈಯ ಲಿರುವ ಎರಳೆಯ ಮರಿಯಂತೆ, ಪಂಜರದೊಳಗ ಣರಗಿಣಿಯ ಮಾರ್ಜಾಲಗೆ ಸೆರೆಗೊಡುವಂತೆ, ಪರಿಯಲೆನ್ನನು ಮನಭ್ರಮೆಯ ಸಪ್ತವ್ಯಸನಕ್ಕೆ ಗುರಿಮಾಡಿ ನೀ ಎನ್ನ ಅಗಲಿಹೋಗದೆ ಕರುಣಾ ಕರ ರಕ್ಷಿಸಯ್ಯಾ ಕೃಪೆಯಿಂದ ರಕ್ಷಿಸು ಸದ್ಗುರುರಾಯ. | 1 | ತನು ಮನ ವ್ಯಸನ ಸಮಸ್ಸಂಧಕಾರದ ಧನವ್ಯಸನದ ಬಯಕೆಯ ರಾಜ್ಯವ್ಯಸನದ ವಿನಯದುತ್ಸಾಹ ವ್ಯಸನವಿಶ್ವಾಸದಿಂದ ಪರರ ಅನುದಿನ ಆಶ್ರಯಿಸುವ ಸೇವಕ ವ್ಯ ಸನಗುಣವ ಕೊಟ್ಟು ಸಪ್ತವ್ಯಸನಕ್ಕೆ ಗುರಿ ಮಾಡಿ ತ್ರಿಣಯ ಸದ್ಗುರುರಾಯ ಅಗಲದಿರಯ್ಯ. | 2 | ಓಡಿನಲ್ಲುಂಟೆ ಕನ್ನಡಿಯ ನೋಟವು ? ಭವ ಕಾಡೊಳು ತಿರುಗಿಯೆ ಸತ್ತು ಹುಟ್ಟುತಿಹೆ ; ಮೂಢನಪಾಯವ ಕಾಯೋ ದೇವ, ನಿಮ್ಮೊ ಳಾಡಲು ಹುರುಳಿಲ್ಲ, ಎನ್ನ ಗುಣವನು ನೋಡಿ ಕಾಡದೆ ಬಿಡಬೀಸದೆ ಕುಮಾರನ ಕೂಡಿಕೊ ಗುರು ಪಡುವಿಡಿ ಸಿದ್ಧಮಲ್ಲೇಶ. | 3 |
--------------
ಹೇಮಗಲ್ಲ ಹಂಪ
ಸರ್ಪಕಡಿದು ಸತ್ತ ಹೆಣನೆದ್ದು ಸುಳಿದಾಡುವುದ ಕಂಡೆ. ಎಡೆ ಐದರೊಳಿಪ್ಪ ಅಗಳಿಗೊಂದೊಂದು ಭೂತನ ಕಂಡೆ. ಭೂತನ ಗೆಣೆವಿಡಿದ ಕಾಗೆಯಕುಳ ತಿಂಬುದ ಕಂಡೆ. ಮಡುವಿಗೆ ಜಾಲವಬೀಸುವ ಮಾಯದ ಜಾಲಗಾರ ಚಂದ್ರಸೂರ್ಯರ ಒಡಲಂ ಹೊಕ್ಕು ನೆಗೆದಾಡದ ಮುನ್ನ ಉಡುಪತಿ ಗಾದ ಬಿದ್ದ, ಕಸಪತಿ ತೊದಳಿಗನಾದ, ಗಂಧಪತಿ ದಂದುಗಕ್ಕೊಳಗಾದ, ಮುನ್ನ ಸ್ಪರುಷನಪತಿ ಪರಿಯಟಂಗೊಂಡ. ಇಂತೀ ಎಳೆದಾಟ ಮುಂದುಗೊಳ್ಳದ ಮುನ್ನ ಯತಿಗಳ ಯತಿತನ ಹಾರಿತ್ತು ; ಸಿದ್ಧರ ಸಿದ್ಧತ್ವ ಕೆಟ್ಟಿತ್ತು . ಶಿವಯೋಗಿಗಳ ಯೋಗತ್ವ ಕೆಡುವುದ ಕಂಡೆನಿದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ