ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಳಿ ಬಾಚಿಂಗೆ ಹರಿಯದ ಕೊರಡು, ಕೊಡಲಿ ಕುಡುಗೋಲಿಂಗೆ ಹರಿವುದೆ ? ಪುರಾತರ ವಚನಾಮೃತವೆಂಬ ಉಳಿಯಲ್ಲಿ ಕಡಿದು ಬಾಚಿಯಲ್ಲಿ ಕೆತ್ತಿದರೆ ನಾಚದೆ ಮನ ? ವೇದಾಗಮವೆಂಬ ಕೊಡಲಿ ಕುಡುಗೋಲಿಂಗೆ ಹರಿವುದೆ ? ಹರಿಯದು. ಕೊರಡುಮನ ಜರಡುಮನ ಜಾಳುಮನ ಹಾಳುಮನ ಕೋಳುಮನ ಕುಪಿತಮನ ಸರ್ವಚಾಂಡಾಲ ಮನದ ಮೇಳದ ಬಲೆಯೊಳು ಬಿದ್ದು ಭಂಗಬಡುತ್ತಿದ್ದೆನೈ ನಿರ್ಭಂಗ ನಿರ್ಲೇಪ ನಿಜಗುರು ನಿಶ್ಚಿಂತ ಸ್ವಯಂಭೂ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ. ಧನವ ಬೇಡುವ ಧನಿಕನ ನುಂಗುವುದ ಕಂಡೆನು. ರಾಜ್ಯ[ವ]ನಾಳೇನೆಂಬ ಅರಸು ತೇಜಿಯ ಕಡಿವಾಣದೊಳಡಗುವುದ ಕಂಡೆ. ಉತ್ಸಾಹವ ಬೇಡುವ ಹೆಣ್ಣು ಉಮ್ಮತ್ತದಕಾಯೊಳಡಗಿದ್ದುದ ಕಂಡೆನು. ವಿಶ್ವಾಸದಿಂದ ಕುಡಿದ ಅಮೃತ ವಿಷವಾಗುವುದ ಕಂಡೆನು. ಸೇವಕ ಒಡೆಯನ ಕಾಣದೆ ಬಟ್ಟೆಬಟ್ಟೆಯಲರಸುವುದ ಕಂಡೆನು. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ