ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ? ಬಂದ್ಥಿಕಾರನ ಬಂಧನವ ಮಾಡೂದು ಲಿಂಗದೇಹಿಗಳಿಗುಂಟೆ ಅಯ್ಯಾ. ಜಗದಲ್ಲಿ ಉಂಡುಂಡು ಕೊಂಡಾಡುವವರಿಗೆ, ಘನಲಿಂಗದ ಶುದ್ಧಿ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಇಷ್ಟ ಬಾಹ್ಯವಾಯಿತ್ತೆಂದು ಸಮಯ ಒಪ್ಪದಿದೆ ನೋಡಾ! ಅರಿವು ಬಾಹ್ಯವಾಗಿ ತ್ರಿವಿಧಕ್ಕೆ ಕಚ್ಚಾಡಲೇತಕ್ಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಇಹವೆಂಬುದೇನೊ ತಾನೆಂಬುದನಳಿದ ಪರಮಗಂಭೀರಂಗೆ. ಪರವೆಂಬುದೇನೊ ಪರಾತ್ಪರವೆಂಬುದೇನೊ? ಇಹವೂ ಇಲ್ಲ ಪರವೂ ಇಲ್ಲ ಪರಾತ್ಪರವೂ ಇಲ್ಲ. ಇದೇನು! ಏನೂ ಇಲ್ಲದ ಬಯಲು! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು.
--------------
ಘಟ್ಟಿವಾಳಯ್ಯ
ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ? ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ? ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ? ಎನಗೆ ನಿಮ್ಮೊಳಗಿನ್ನೇತರ ಮಾತು? ವೇಷಧಾರಿಗಳಲ್ಲಿ ನಿಮ್ಮ ಕೂಟಕ್ಕೆ ಹೊರಗು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದೆ.
--------------
ಘಟ್ಟಿವಾಳಯ್ಯ
ಇರಿವುದು ಕಡಿವುದು ಕೊಲುವುದು ಮಲದೇಹಿಗಳಿಗಲ್ಲದೆ ನಿರ್ಮಲದೇಹಿಗಳಿಗುಂಟೆ? ಸಮಯ ಸಮುದ್ರದಂತಿರಬೇಕು. ತಪ್ಪನರಸಿ ಶಿಕ್ಷಿಸುವನ್ನಬರ ನರದೂತ ಕುಲಕ್ಕೆ ಪರಿಶಿವ ರೂಪುಂಟೆ? ಆ ಹರವರಿಯ ನುಡಿದಡೆನಗೇನು? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ