ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಿತ್ತುವಿನ ವರ್ತನೆಯ ಬಿಟ್ಟ ಶರಣ ನಿತ್ಯನೇಮವನರಿಯ, ಕರ್ತೃಭೃತ್ಯತ್ವವನೇನೆಂದು ಅರಿಯ, ಎಂತೆಂದು ಅರಿಯ, ಎಂತಿದ್ದುದಂತೆಯೆಂಬುದ ಮುನ್ನವೆ ಅರಿಯ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಚಿನ್ನವ ಕೊಂಬಲ್ಲಿ ಅದರ ಬಣ್ಣವ ಕಂಡು ಬಣ್ಣವಾಸಿಯ ಕುರುಹಿಟ್ಟು ಅದು ತನಗೆ ಚೆನ್ನಾದಡೆ ಕೊಂಬ ಅಲ್ಲದೊಡೊಲ್ಲ. ಇದಕ್ಕೆ ಗೆಲ್ಲ ಸೋಲವೇಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎನುತಿರ್ದೆನು.
--------------
ಘಟ್ಟಿವಾಳಯ್ಯ
ಚಿಂತೆಯೆಂಬ ಹೂವಿನ ಗಿಡುವನು ನೋಡಿರೆ! ಹೊಲಗೇರಿಯಲ್ಲಿ ಬಿತ್ತುವನೆ ನೋಡಿರೆ! ಜಲಶೇಖರನ ಉದಕವನೆರದಡೆ ಆಸೆಯೆಂಬ ಹೂವ ಕೊಯ್ದು ಕಾಮಂಗೇರಿಸುವೆನು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ