ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಲದೊಳಗಣ ಬೊಬ್ಬುಳಿಕೆ ಜಲ ಘಟ್ಟಿಗೊಂಡಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹೇಂದ್ರ ಜಾಲವು ಮರೀಚಿಕಾ ಜಲವು. ಎಲ್ಲಿ ಹುಟ್ಟಿ ಎಲ್ಲಿ ಅಡಗುವ ತೆರನ ಬಲ್ಲಡೆ ಬಲ್ಲೆ. ಮಹಾನಾದ ಸುನಾದ, ಸುನಾದಕ್ಕೆ ಕೈಗೈದು ಆ ಸುನಾದವು ಮಹಾನಾದದೊಡನೆ ಮಥನಿಸಿ ಇವೆರಡರ ಪ್ರಾಣ ಚೈತನ್ಯ ಒಂದಾಗಿ ಹುಟ್ಟಿ ಅಡಗುವ ಭೇದವ ಬಲ್ಲೆನಾಗಿ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
--------------
ಘಟ್ಟಿವಾಳಯ್ಯ
ಜಂಗಮವಾಗಿ ಹುಟ್ಟಿದ ಮತ್ತೆ ಹಿಂದಣ ಹಜ್ಜೆಯ ಮೆಟ್ಟಲುಂಟೆ? ಜಂಗಮವೆಂಬ ಮಾತಿಂಗೊಳಗಾದಲ್ಲಿ ಮೂರು ಮಲತ್ರಯವ ಹಿಂಗಿರಬೇಕು. ಅನಂಗನ ಬಲೆಗೆ ಎಂದಿಗೂ ಸಿಲುಕದಿರಬೇಕು; ಅದು ನಿಜದ ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಈ ಗುಣ ಆರಿಗೂ ಇಲ್ಲ ಇಲ್ಲಎಂದೆ.
--------------
ಘಟ್ಟಿವಾಳಯ್ಯ
ಜಂಗಮವಾಗಿ ಜಂಗಮನ ಕೊಂದಾಗಲೆ ತನ್ನ ದೈವ ತನಗಿಲ್ಲ. ಭಕ್ತನಾಗಿ ಭಕ್ತರ ಸ್ತುತಿ ನಿಂದ್ಯವ ಮಾಡಲಾಗಿಯೆ ಸತ್ಯ ಸದಾಚಾರ ತನಗಿಲ್ಲ. ದೇಹದ ವಿಹಂಗ ಮೃಗಗಳಂತೆ ಕೊಡಲಿಯ ಕಾವು ಕುಲಕ್ಕೆ ಮಿತ್ತಾದಂತೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಜೀವವೆಂಬುದಿಲ್ಲ, ಭಾವವೆಂಬುದಿಲ್ಲ, ಬಯಕೆಯೆಂಬುದಿಲ್ಲ. ಮುಂದೆ ಪೂಜಿಸಿ ಕಂಡೆಹೆನೆಂಬುದಕ್ಕೆ ಮುನ್ನವೆ ಇಲ್ಲ. ಪೂರ್ವ ಅಪೂರ್ವವೆಂಬುದಿಲ್ಲ. ಇವಾವ ಬಂಧನವೂ ಇಲ್ಲದ ಅವಿರಳಂಗೆ ಒಂದರ ತೋರಿಕೆಯೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲಾ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಜಂಗಮಕ್ಕೆ ಅರಿವ ಮರೆದಾಗಲೆ ಅಪಮಾನ ಹೋಯಿತ್ತು. ಭಕ್ತಂಗೆ ಸತ್ಯ ಸದಾಚಾರವ ಬಿಟ್ಟಾಗಲೆ ಅಪಮಾನ ಹೋಯಿತ್ತು. ಈ ಅಪಮಾನವಲ್ಲದೆ, ದ್ವಾರ ಮಲಭಾಂಡಕ್ಕೆ ಹೋರಿಯಾಡುವರಿಗೇಕೆ ಚಿತ್ತಶುದ್ಧ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಜಂಗಮಲಿಂಗವನೊಂದೆಂದು ಕಾಬಡೆ ಭಂಗವಿಲ್ಲದೆ ಭರಿತಂಗೆ ಭವ ಹೊದ್ದಲಿಲ್ಲ. ಗುರು ಐವರು, ಶಿಷ್ಯನೊಬ್ಬ ಅರುಹಿರಿಯರಿಗೆ ದೃಷ್ಟ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲೆಂದಿತ್ತು.
--------------
ಘಟ್ಟಿವಾಳಯ್ಯ