ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉತ್ತರಕ್ಕೆ ನುಡಿವನ್ನಬರ ನಾನು ಚಿತ್ತದ ಕಲೆಯವನಲ್ಲ. ಮದಮತ್ಸರಕ್ಕೆ ಹೋರುವನ್ನಬರ ನಾನು ಕರಣೇಂದ್ರಿಯಂಗಳಿಗೆ ಹುತ್ತದ ಮೊತ್ತದವನಲ್ಲ. ಮತ್ತೆ ಸಮಯದಲ್ಲಿ ಹೊತ್ತು ಹೋರಿಹೆನೆಂದಡೆ ನಾನು ಸಂಸಾರದ ಕತ್ತಲೆಯವನಲ್ಲ. ಎನ್ನ ನಿಶ್ಚಯದ ಗುಂಡು, ಎನ್ನ ಬಚ್ಚಬರಿಯ ಬಯಲಬೆಳಗು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಉತುಪಾತದ ಉತುಪತ್ಯದ ಬಹುಮುಖದ ಶಾಖೆಗಳೆಲ್ಲವೂ ಮುಂದರಿಯದೆ ನಡೆಗೆಟ್ಟು ನಿಂದರಲ್ಲ. ಹಿಂದರಿಯದೆ ಮುಂದರಿಯದೆ ಅಬ್ಬರದಬ್ಬರದವಂಗೆ ಆರಿಗೆಯೂ ಅಳವಡದು ಭೀಕರ, ನಿಷ್ಟತ್ತಿಗೆ ನಿರ್ಣಯ ಉಂಟು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು ಅಖಂಡ ಪರಿಪೂರ್ಣಜ್ಞಾನವನವರೆತ್ತ ಬಲ್ಲರೊ? ಕುಲುಮೆಯಾಕಾರಕ್ಕೆ ಬಾಯಿಗೆ ಬಹವರೆಲ್ಲಾ ಕಾಲನ ಕಮ್ಮಟ್ಟಕ್ಕೆ ಗುರಿಯಾದರು. ತತ್ವ ತೂರ್ಯಾತೀತದಿಂದತ್ತತ್ತಲಾದ ಅಘಟಿತ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತಿದ್ದನು.
--------------
ಘಟ್ಟಿವಾಳಯ್ಯ