ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಬತ್ತು ನಾಲ್ಕು ಲಕ್ಷ ರತ್ನದ ವ್ಯವಹಾರಿಗಳು ರತ್ನವ ಕೆಡಿಸಿ ಅರಸುತ್ತೆ ೈದಾರೆ ನೋಡಾ! ರತ್ನ ಮಂಜಿನ ರಂಜನೆ, ಆಗರಕ್ಕೆ ಸಲ್ಲದು. ಹುಟ್ಟಿ ಕೆಟ್ಟ ರತ್ನ ಕೆಟ್ಟ ಕೇಡಿಂಗಿನ್ನೆಂತೊ! ಅಗುಹೋಗಿನ ನಿರ್ಣಯವನು ಸಾಗರ ನುಂಗಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
--------------
ಘಟ್ಟಿವಾಳಯ್ಯ
ಎಲೆ ನಾಥಾ, ಎಲೆ ನಾಥಾ, ಅಂಗದಾಶ್ರಯವ ಮಾಡಿಕೊಂಡೆಯಲ್ಲಾ, ಯಂತ್ರವಾಹಕ ಸಂಚನಾದೆಯಲ್ಲಾ. ನಿನ್ನ ಸಂಚವ ಹರಿಬ್ರಹ್ಮಾದಿಗಳರಿಯರು, ದಾನವ ಮಾನವರರಿಯರು, ಸಮಸ್ತ ಮೂರ್ತಿಗಳರಿಯರು, ಸುಭಾಷಿತರು ಶಿವನಾಮಿಗಳರಿಯರು, ಅಷ್ಟವಿಧಾರ್ಚಕರರಿಯರು, ವೇಷಭಾಷಿತರರಿಯರು, ಸುಳುಹು ನಿಂದವರರಿಯರು, ಜಡೆಯ ಮುಡಿಯ ಬೋಳರರಿಯರು, ಆರ ತೊಟ್ಟವನೆ ಮೂರ ಸುಟ್ಟವನೆ ನಾಕನೆಂದವನೆ ಎಂಟು, ಐದು, ಹತ್ತರಲ್ಲಿ ನಿತ್ಯನಾದೆಯಲ್ಲಾ! ಶತಪತ್ರ ಪದದಲ್ಲಿ ನಿವಾಸಿಯಾದೆಯಲ್ಲಾ! ಎನ್ನ ನಿನ್ನೆಡೆಗೆ ಏನೂ ಭೇದವಿಲ್ಲ ಸಲಿಸ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಎಲೆ ಪಂಚವಕ್ತ್ರ ನೀನೆನ್ನ ಸಂಚವ ಹಂಚಿಕೊ ಬಾರೋ! ನಾ ನನ್ನ ಭಾಗವ ದೇವರಿಗೆ ಕೊಟ್ಟೆನು. ನಿನ್ನ ಭಾಗವ ಕೊಂಡಡೆ ಎಮ್ಮ ದೇವರು ಕೊಂಡಾರು. ಎಮ್ಮಿಂದ ಕೆಟ್ಟೆವೆನಬೇಡ ಕಂಡಯ್ಯಾ. ಇವರಿಬ್ಬರ ಕಲಹದ ನಡುವೆ ಅಬ್ಬರವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಎಂಟರ ಸೆರಗಿನಲ್ಲಿಲ್ಲ, ಆರರ ಮೂರರಲ್ಲಿಲ್ಲ. ನಾಲ್ಕರ ಐದರಲ್ಲಿಲ್ಲ, ಒಂಬತ್ತರೊಳಗೆ ಮುನ್ನಿಲ್ಲ. ಆಳತೆಯ ಅಳೆಯಲಿಲ್ಲ, ಗುಣಿತವ ಗುಣಿಸಲಿಲ್ಲ. ಸೆಣಸುವಡೆ ಪ್ರತಿಯಿಲ್ಲ. ಅಪ್ರತಿಮ ಅಪ್ರತಿಮನನಿಂತು ಜಗದೊಳುಂಟೆಂದು ಭ್ರಮಿಸುವ ಜನ ಮರುಳಿನ ವಾರ್ತೆಯ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಇನ್ನೆಂತೊ?
--------------
ಘಟ್ಟಿವಾಳಯ್ಯ
ಎನಗೆ ಹಳ್ಳದ ಹೊಡೆಕೆಯೆ ಶಿವದಾರವಾಗಿ, ಬೆಟ್ಟದ ಗುಂಡೆ ಲಿಂಗವಾಗಿ, ಕಾಡಸೊಪ್ಪು ಹಾಕಿದ ಮಡಕೆಯ ಉದಕವೆ ಮಜ್ಜನವಾಗಿ ಪೂಜಿಸುತ್ತಿದ್ದೆ. ಬಸವನ ಮನೆಗೆ ಹೋಹ ವ್ರತಗೇಡಿಗಳ ನೋಡಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆ.
--------------
ಘಟ್ಟಿವಾಳಯ್ಯ