ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಾರಂಗದ ತುದಿಯಲ್ಲಿ ಧಾರೋದ್ರಿಜವ ತುಂಬಿದರು. ಮೇರು ಮಂದಿರದ ಮೇಲೆ ಮನೆಯ ಮಾಡಿದರಾರೋ? ತಿದಿಯ ಹರಿವೆ, ಮನೆಯ ಸುಡುವೆ, ನಿಲುವೆ ಹೊಸ ಪರಿಯರಿಯಾ! ಎನ್ನ ಪರಿಯ ಹಿಂದೆ ಕೇಳಿದ್ದು ಮನೆಯೊಳಗಣ ಬೂದಿಯ ಭಸ್ಮವಾಗಿ ಧರಿಸಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಸತ್ತವಂಗೆ ಸಾಹಿತ್ಯ; ಇದ್ದವಂಗೆ ದೇವರು. ಬುದ್ಧಿವಂತನೆಂಬುವ ಪ್ರಸಾದಗುಡನು. ಈ ಮೂವರು ಮೂರು ಸುಸರವಾಯಿತ್ತು. ನಾನಿನ್ನೇನ ಮಾಡುವೆ! ನಾ ಮಾಡದ ಮುಖದಲ್ಲಿ ಶೂನ್ಯಕ್ಕೆ ನಿಂದುದು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸ್ಥಾವರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಶೈವಲಿಂಗ. ಚರವಾಗಿ ಭೂಮಿಯಲ್ಲಿ ಪೂಜಿಸಿಕೊಂಬುದು ಇಷ್ಟಲಿಂಗ. ಅರಿವಿನ ಮನದ ಕೊನೆಯಲ್ಲಿ ನಿತ್ಯನಿವಾಸವಾಗಿ ಪೂಜಿಸಿಕೊಂಬುದು ವೀರಶೈವಲಿಂಗ ಇಂತೀ ಲಿಂಗತ್ರಯದ ಆದಿ ಆಧಾರವನರಿಯದೆ ಹೋದರಲ್ಲಾ ಹೊಲಬುದಪ್ಪಿ ಇನ್ನಾರಿಗೆ ಹೇಳುವೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ
--------------
ಘಟ್ಟಿವಾಳಯ್ಯ
ಸುಳಿದಡೆ ಒಡಲಿಲ್ಲ, ನಿಂದಡೆ ನೆಳಲಿಲ್ಲ, ನಡೆದಡೆ ಗಮನವಿಲ್ಲ, ನುಡಿದಡೆ ಶಬ್ದವಿಲ್ಲ. ದಗ್ಧಪಟನ್ಯಾಯದ ಹಾಗೆ, ಉಂಡಡೆ ಉಪಾಧಿಯಿಲ್ಲ ಉಣ್ಣದಿದ್ದಡೆ ಕಾಂಕ್ಷೆಯಿಲ್ಲ. ಯಥಾಲಾಭ ಸಂತುಷ್ಟನಾಗಿ ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ ಅರಿವಿಲ್ಲ ಮರಹಿಲ್ಲ ತಾನೆಂಬ ನೆನಹಿಲ್ಲವಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಮುಂದೆ ಏನೂ ಎನಲಿಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸಾವಿರ ಪರಿಯಲಿ ಉದರವ ಹೊರೆವರೆ ಸಾವರಲ್ಲದೆ ಸಮ್ಮಿಕರಾಗರಿದೇನೋ! ಎಂತೆಂತು ಮಾಡಿದಡೆ ಅಂತಂತೆ ಲಯವು. ಎಂತೆಂತು ನೋಡಿದಡೆ ಅಂತೆಂತು ಇಲ್ಲ. ಇದೇನೊ ಇದೇನೋ! ಎಳಕುಳಿಜಾಲೆಯ ಕಳಾಕುಳ ಬಿಡದು, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ಕಾರಣ.
--------------
ಘಟ್ಟಿವಾಳಯ್ಯ
ಸಾಧಕನವನೊಬ್ಬ ನೇತ್ರವಟ್ಟೆಯನುಟ್ಟುಕೊಂಡು ಸೂತ್ರಧಾರಿಯನರಸುತ್ತ ಬಂದನಯ್ಯಾ! ಕರೆಯಿರಯ್ಯಾ ಕರೆದು ತೋರಿಸಿರಯ್ಯಾ ಕರೆಹಕ್ಕೆ ನೆರಹಕ್ಕೆ ಹೊರಗಾದನು, ಹೋಗೋ ಬಾರೋ ಎಂದಲ್ಲಿಯೆ ಆಡಗಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಸತ್ತ ಶವ ಕಿಚ್ಚ ಬಲ್ಲುದೆ? ನಿಷೆ* ನಿಬ್ಬೆರಗಾದ ಕರ್ತೃ ಮತ್ರ್ಯರ ಬಲ್ಲನೆ? ತೊಟ್ಟು ಬಿಟ್ಟ ಹಣ್ಣು ಮತ್ತೆ ಹತ್ತುವದೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸರಿವಿಡಿಯೆ ಗುರುವಿಡಿಯೆ. ಗುರುವಿಡಿದು ಲಿಂಗವಿಡಿಯೆ. ಪರಿವಿಡಿಯೆ ಈ ಲೋಕದ ಬಳಕೆವಿಡಿಯೆ. ಇಲ್ಲವೆಯ ತಂದೆನು ಬಲ್ಲವರು ಬನ್ನಿ ಭೋ! ಶರಣಸತಿ ಲಿಂಗಪತಿಯೆಂಬುದ ಕೇಳಿ ಉಂಟಾದುದ ಇಲ್ಲೆನಬಂದೆ. ಇಲ್ಲದುದ ಉಂಟೆನಬಂದೆ. ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಕರ್ಮಿಗಳಿಗೆ ನೆಟ್ಟನೆ ಗುರುವಿಲ್ಲೆನಬಂದೆ. ಮುಟ್ಟಲರಿಯರು ಪ್ರಾಣಲಿಂಗವ. ಅಟ್ಟಿ ಹತ್ತುವರೀ ಲೋಕದ ಬಳಕೆಯ ಇಷ್ಟಲಿಂಗದ ಹಂಗು ಹರಿಯದ ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆನ ಬಂದೆ.
--------------
ಘಟ್ಟಿವಾಳಯ್ಯ
ಸುಳುಹೆಂಬ ಸೂತಕವಡಗಿ, ಅರಿವೆಂಬ ಮರಹು ನಷ್ಟವಾಗಿ, ಅದು ಇದು ಎಂಬುದಿಲ್ಲ. ಅದೇತರದೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಸರ್ವ ಲಯವು ತಾನೆ. ಸರ್ವ ನಿಃಕಳಂಕ ಮಹಾಘನವಸ್ತುವು ತಾನೆ. ನಿರ್ಮಳ ನಿರಾವರಣನು ತಾನೆ. ನಿಗಮಾತೀತನು ತಾನೆ. ನಿರಾಳ ಸುರಾಳವು ತಾನೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಸರ್ಪಂಗೆ ಪಿಕಂಗೆ ಒಪ್ಪದ ಮನೆ ಉಂಟೆ? ಎನಗಾ ಹೆಚ್ಚು ಕುಂದೆಂಬ ಮಿಥ್ಯದ ಭಾವವಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಸಬಳದ ತುದಿಯಲ್ಲಿ ಬಿರುದ ಕಟ್ಟಿ ಅದರ ತಲೆವಿಡಿಯತೊಡಗಿದಡೆ ನಾನಲ್ಲ ಸಬಳಕ್ಕೆ ಬಿರುದೆಂಬವನಂತೆ! ಹಾಗೆಂದ ಮತ್ತೆ ತೊಡಗುವನೆಗ್ಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಸರದ ಸಾರದ ನಿಸ್ಸಾರಾಯವ ನಿರುತವಲ್ಲೆಂದು ಅರಿತು ಅರಿಯರು ಹಿರಿಯರೆನಿಸಿಕೊಂಬ ನರತರುಗಳು ಇವರೆತ್ತ ಬಲ್ಲರು? ಹಸಿವಿಲ್ಲದೆ ಮುನ್ನಲುಂಡ ಊಟವ ನಸೆಯಿಲ್ಲದೆ ಆಪ್ಯಾಯನವರಿಯರು. ಹುಸಿಯಲಿ ನುಸುಳುವರಿಗೆ ತನ್ನ ವಶಕೆ ತರಲಿನ್ನಿಲ್ಲವಿನ್ನೆಂತೊ? ಭರಿತವೆಂಬರು ಭಾವಕ್ಕಿಂಬಿಲ್ಲ, ಮರೆಯಲ್ಲಿ ಕುಲವ್ಯಸನ ಭ್ರಮೆಯವರರಿವಿನಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಎಂಬರು.
--------------
ಘಟ್ಟಿವಾಳಯ್ಯ
ಸ್ಥಲನಲ್ಲ ಕುಳನಲ್ಲ ನಿಃಸ್ಥಲನಲ್ಲ! ನಿರಾಧಾರ ನಿಶ್ಚಿಂತ ನಿಗಮಗೋಚರ ನಿಸ್ಸೀಮ ನಿರಾಲಂಬ ಸರ್ವಶೂನ್ಯ ಸತ್ತು ಚಿತ್ತಾನಂದಾದಿಗಳಿಗೆ ನಿಲುಕುವನಲ್ಲ. ತತ್ವಬ್ರಹ್ಮಾಂಡಾದಿ ಲೋಕಾಲೋಕಂಗಳ ಕಲ್ಪಿಸಿ ನುಡಿವವನಲ್ಲ. ಇವೇನೂ ಇಲ್ಲದ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು.
--------------
ಘಟ್ಟಿವಾಳಯ್ಯ