ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು. ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು. ಅದೇನೇನೆಂಬೆನೇನೆಂಬೆನು, ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ. ಉಭಯಲಿಂಗ ನಾಮ ನಷ್ಟವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ.
--------------
ಘಟ್ಟಿವಾಳಯ್ಯ
ಪವನದ ಬಳಿಯಲಿ ಹರಿಯಲಿ ಹರಿಯಲಿ ನೆನಹಿನ ಬಳಿಯಲಿ ಸುಳಿಯಲಿ ಸುಳಿಯಲಿ. ತಾಗಿಲ್ಲದೆ ಬಾಗುವುದೆ? ಉಂಟೆಂಬನ್ನಬರ ಬಳಸಲಿ. ಎಲ್ಲವೂ ತೀದು, ಇಲ್ಲವೆಯಲ್ಲಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇನ್ನೇನ ಬಳಸಲುಂಟು?
--------------
ಘಟ್ಟಿವಾಳಯ್ಯ
ಪ್ರಾಣಲಿಂಗವ ಪರಲಿಂಗವ ಮಾಡಿ ಇಷ್ಟಲಿಂಗವ ಪೂಜಿಸುವರ ಕಷ್ಟವ ನೋಡಾ! ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ? ಬಯಲಾಸೆ ಹಾಸ್ಯವಾಯಿತ್ತು ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲದ ಕಾರಣ!
--------------
ಘಟ್ಟಿವಾಳಯ್ಯ
ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ವಿಕಾರತನುಗಳು ಲಿಂಗಪೂಜೆಯ ಬೆಬ್ಬನೆ ಬೆರವರು ಉಪದೇಶಮಾರ್ಗ. ತನುಮನಧನವ ಪ್ರಾಣಾದಿಗಳ ಗುರುಲಿಂಗಕ್ಕೆ ಕೊಟ್ಟೆವೆಂಬರು ನೋಡಾ! ನಾಚಿಕೆಯಿಲ್ಲದ ಹೇಸಿಗೆಗೆಟ್ಟ ಉನ್ಮತ್ತರು. ಲಿಂಗವಿದ್ದುದಕ್ಕೆ ಫಲವೇನೋ ಅಂಗವಿಕಾರವಳಿಯದನ್ನಕ್ಕ, ಇಂದ್ರಿಯ ಸಂಗ ಮರೆಯದನ್ನಕ್ಕ ಪ್ರಸಾದವ ಕೊಂಡೆವೆಂಬರು ನೋಡಾ ಬಹುಭಾಷಿಗಳು. ನಿಧಾನವಿದ್ದ ನೆಲ ನುಡಿವುದು. ಭೂತವಿಡಿದ ಮನುಷ್ಯ ತನ್ನ ತಾ ಮರೆದಿಹ. ಲಿಂಗವಿದ್ದುದಕ್ಕೆ ಪ್ರಮಾಣವೇನೋ ನಡೆತತ್ವ ನುಡಿ ಸಿದ್ಧಾಂತವಾಗಬೇಕು. ಪಂಚೇಂದ್ರಿಯಂಗಳ ಉನ್ಮತ್ತವಡಗಬೇಕು. ಸದಾಚಾರವೆಂತಳವಡುವದು ಸದಾಚಾರ ತನ್ನಲ್ಲಿ ಸಾಹಿತ್ಯವಾಗದನ್ನಕ್ಕ. ಇಹಪರವನರಸುವ ಸಂದೇಹಿಗಳಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಪುರಹರ ಕ್ಷೇತ್ರದಲ್ಲಿ ಪುರಪತಿಯೊಡನೆ ಸಂಪಾದನೆ. ಮಹಾಹರಕ್ಷೇತ್ರದಲ್ಲಿ ಕ್ಷೇತ್ರಪತಿಯೊಡನೆ ಸಂಪಾದನೆ. ಅಮರ ಮಧ್ಯಸ್ಥಾನದಲ್ಲಿ ಅಮರಪತಿಯೊಡನೆ ಸಂಪಾದನೆ. ಮಹಾಮಧ್ಯದ ನೆಲೆಯೊಳು ಮಹಾಪತಿಯೊಡನೆ ಸಂಪಾದನೆ. ಮಹಾ ಪರಾಪರ ಎಂದುದಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಪೂಜಕರೆಲ್ಲರೂ ಪೂಜಿಸುತ್ತಿದ್ದರು. ಭಾವುಕರೆಲ್ಲರೂ ಬಳಲುತ್ತಿದ್ದರು. ದೇವ ದೇಹಾಕಾರವ ಮಾಡುತ್ತೈದಾನೆ, ದೇವಿ ದೂಪ ನೈವೇದ್ಯವ ಮಾಡುತ್ತಿದ್ದಳು, ಆನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತ್ತಿದ್ದೆನು.
--------------
ಘಟ್ಟಿವಾಳಯ್ಯ