ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭೂಮಿ ಘನವೆಂಬೆನೆ ಪಾದಕ್ಕೊಳಗಾಯಿತ್ತು ಗಗನ ಘನವೆಂಬೆನೆ ಕಂಗಳೊಳಗಾಯಿತ್ತು. ಮಹವು ಘನವೆಂಬೆನೆ ಮಾತಿಂಗೊಳಗಾಯಿತ್ತು. ಘನ ಘನವೆಂಬುದಿನ್ನೆಲ್ಲಿಯದೆಲವೊ! ಅರಿವಿಂಗಾಚಾರವಿಲ್ಲ, ಕುರುಹಿಂಗೆ ನೆಲೆಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಭಕ್ತಿಯನರಿಯ ಭಾವವನರಿಯ, ವಿಚಿತ್ರವನರಿಯ ಚಿತ್ರಾರ್ಥವನರಿಯ, ತತ್ವವಿಚಾರವ ಮುನ್ನವೆ ಅರಿಯ. ನಿತ್ಯ ನಿರಂಜನ ಪರವಸ್ತು ತಾನೆಯಾದ ಕಾರಣ ತನ್ನಿಂದನ್ಯವಾಗಿ ಮುಂದೆ ತೋರುವ ತೋರಿಕೆ ಒಂದೂ ಇಲ್ಲ. ನಿರಾಳ ನಿರವಯಲು ನಿರಾಕಾರ ಪರವಸ್ತು ತಾನಲ್ಲದೆ ಮತ್ತೇನೂ ಇಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗವೆಂಬುದಕ್ಕೆ ಎಡೆಯೊಂದು ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ