ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ? ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ? ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಹತ್ತೆಂಬ ಮಾತು ನಿಮಗೇಕೆ ಹೇಳಿರೆ. ನಾದ ಮುನ್ನ ಉತ್ಪತ್ಯವೊ? ಬಿಂದು ಮುನ್ನ ಉತ್ಪತ್ಯವೊ? ನಾದ ಬಿಂದುವಿನ ಕುಳ ಸ್ಥಳಗಳ ಬಲ್ಲರೆ ನೀವು ಹೇಳಿರೆ. ಈಡಾ ಪಿಂಗಳ ಸುಷುಮ್ನಾನಾಡಿಗಳ ಭೇದವ ಬಲ್ಲಡೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಒಂದೆರಡು ಮೂರುವಿನ ಕುಂದು ಹೆಚ್ಚೆನಲಿಲ್ಲ. ಸಂದೇಹವಳಿಯದೆ ಉಳಿದನು. ನೊಂದು ನೋಯದ ನೋವು ಅಂದವಿಲ್ಲದ ಭೇದಿಗೆ ಇನ್ನ್ನೆಂತೊ! ಅರಿಯದ ಮದ್ದನಾರನು ಬೇರೆ ಹೊರಗೇನೂ ಇಲ್ಲ ಇನ್ನೆಂತೊ! ಮೂರು ಮಾತಿಂಗೆ ಸರಿ. ಪ್ರತಿಯಿಲ್ಲದ ಪ್ರತಿಯ ಕಂಡೆನೆಂದು ಪದವಿಡುವವ ರೂಪನಲ್ಲ. ಶ್ರುತಿಯಿಲ್ಲದ ಘನಕ್ಕಿನ್ನೆಂತೊ! ಕಟ್ಟಾಳು ನಾಲ್ವರು ಬಿಟ್ಟಾಳು ಐವರ ದುಷ್ಟರೆಂದು ಆರುವಿನ ದೆಸೆಯ ಹೊದ್ದ, ಮುಟ್ಟನೇಳೆಂಟೊಂಬತ್ತರ ಸಂಗವನೊಲ್ಲ. ಕೆಟ್ಟನಾ ಶರಣ, ಸಾಯದೆ ಸತ್ತನು! ಮಡುವಿಲ್ಲದಗ್ಘವಣಿ ಕೊಡುವನಲ್ಲ ಶರಣ. ಗಿಡುವೆಲ್ಲ ಪರಿಮಳ ಜ್ಞಾನಪುಷ್ಪ ಬಿಡದು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಉಂಟೆಂದು ಬಡಿದರು ಕೈಕಾಲ ಭ್ರಾಂತಳಿಯದವರು.
--------------
ಘಟ್ಟಿವಾಳಯ್ಯ