ಅಥವಾ
(15) (7) (5) (0) (3) (1) (0) (0) (5) (2) (0) (3) (0) (0) ಅಂ (3) ಅಃ (3) (14) (0) (3) (0) (0) (3) (0) (6) (0) (0) (0) (0) (0) (0) (0) (7) (0) (2) (0) (12) (6) (0) (4) (2) (10) (1) (2) (0) (4) (4) (1) (0) (14) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು. ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ! ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
--------------
ಘಟ್ಟಿವಾಳಯ್ಯ
ಗೋಕುಲರೆಲ್ಲರು ಕೂಡಿ ಗೋಪತಿ ಅಣ್ಣನ ಮನೆಗೆ ಉಣ್ಣ ಬಂದರೆಲ್ಲರು. ನಾ ವೀಸಕ್ಕೆ ಕೂಳ ಕೇಳೆ, ವೇಷಧಾರಿಗಳು ಘಾಸಿ ಮಾಡಿದರೆನ್ನುವ ಜಗದೀಶ ನೀನೆ ಬಲ್ಲೆ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಗಂಭೀರವೆಂದೆನ್ನದೆ, ಗಂಭೀರಕ್ಕೆ ತಲೆದೋರದೆ ಶರಣ ಶಬುದ, ನಾಭಿಯ ಉಸುರ ದಾಸೋಹಿಯ ಮಂತ್ರ ಭಿನ್ನವಿಲ್ಲದೆ ಇಲ್ಲೆಂದಿತ್ತಲ್ಲಾ! ಆ ಭಾವವು ಕಿಂಚಿತ್ತು ಇಲ್ಲೆಂದಿತ್ತಾಗಿ ಜನಿಕನ ಮಂದಿರದ ಕುತಾವಾಹಿಯನು ಇಲ್ಲೆಂದಿತ್ತಲ್ಲಾ! `ಹಿತವಾಹಿತವಾಹಿತಂ ಹತವಾಗಿ ನಿತಂ ನಿತಂ' ಚಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲಾ ಎಂದಿತ್ತಲ್ಲಾ!
--------------
ಘಟ್ಟಿವಾಳಯ್ಯ